Posts

ಬ್ರೇಕಿಂಗ್ ನ್ಯೂಸ್, ಮಂಗಳೂರು. ಮುಖ್ಯಾಂಶಗಳು....

ಬಿಜೆಪಿ ಜೊತೆಗೆ ಜೆಡಿಎಸ್ ಒಳ ಒಪ್ಪಂದ! ?

Image
ಬಿಜೆಪಿ ಜೊತೆಗೆ ಜೆಡಿಎಸ್ ಒಳ ಒಪ್ಪಂದ! ? ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಬೆಂಗಳೂರು, ಎ.20: 'ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಅಲ್ಲದೆ ಮತ್ತಿನೇನಲ್ಲ' ಎಂದು ಕಳೆದ ತಿಂಗಳು ಕಾಂಗ್ರೆಸ್ ವ್ಯಂಗ್ಯವಾಡಿದ್ದರೆ ಇದೀಗ ಆ ಮಾತು ನಿಜವಾಗುತ್ತಿದೆಯೆಂಬ ಭಯ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಗುಪ್ತ ಒಪ್ಪಂದವೊಂದಕ್ಕೆ ಬಂದಿದೆಯೆಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಮೂಲವೊಂದರ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಹಾಗೂ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಅವರ ಪುತ್ರ ಡಾ.ಯತೀಂದ್ರ ಇಬ್ಬರನ್ನೂ ಸೋಲಿಸುವ ಉದ್ದೇಶದಿಂದಲೇ ಈ ಒಳ ಒಪ್ಪಂದಕ್ಕೆ ಬರಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಿದ್ದರಾಮಯ್ಯನವರ ಒಂದು ಕಾಲದ ಸಮೀಪವರ್ತಿ ಜಿ.ಟಿ.ದೇವೇಗೌಡ ಅವರನ್ನು ಕಣಕ್ಕಿಳಿಸಿದೆ. ಅತ್ತ ವರುಣಾದಲ್ಲಿ ಯತೀಂದ್ರ ವಿರುದ್ಧ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡ್ಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸುವುದು ಬಹುತೇಕ ಖಚಿತ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಆರಿಸಿ ದೇವೇಗೌಡರ ಗೆಲುವಿಗೆ ಸಹಾಯ ಮಾಡಲಿದೆಯೆನ್ನಲಾಗಿದೆ. ಅತ್ತ ವರುಣಾದಲ್ಲಿ ಜೆಡಿಎಸ್ ಅಭ್ಯರ್ಥಿ ಇನ್ನೂ ಪ್ರಚಾರ ಆರಂಭಿಸಿಲ್ಲ. ಆದರೆ ರಹಸ್ಯ ಒಪ್ಪಂದದ ಸುದ್ದಿಗಳನ್ನು  ಬಿಜೆಪಿ ನಿರಾಕರಿಸಿದೆ. ಅತ್ತ ರಾಜ್ಯ ಕಾಂಗ...

ಬಿಜೆಪಿಯ ಹತ್ಯಾ ರಾಜಕೀಯಕ್ಕೆ ಸೆಡ್ಡು ಹೊಡೆಯಲಿದ್ದಾರೆಯೇ ಈ ಅಧಿಕಾರಿ ??

Image
ಸಂಘಪರಿವಾರ ಕಾರ್ಯಕರ್ತರ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆ: ಜಗದೀಶ್ ಅಧಿಕಾರಿ! April 18, 2018 ಬ್ರೇಕಿಂಗ್ ನ್ಯೂಸ್ ವರದಿ-(18.04.18): ಕರ್ನಾಟಕ ರಾಜ್ಯಾದ್ಯಂತ ಮೇ 12ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೂಡಲೇ ಎರಡೂ ಪಕ್ಷಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದೀಗ ದಕ್ಷಿಣಕನ್ನಡದ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯ ಬದಲು ಉಮಾನಾಥ್ ಕೋಟ್ಯಾನ್ ಗೆ ಟಿಕೆಟ್ ನೀಡಿದ್ದು, ಇದು ಜಗದೀಶ್ ಅಧಿಕಾರಿ ಹಾಗೂ ಬೆಂಬಲಿಗರಲ್ಲಿ ತೀವ್ರ ಅಸಮಧಾನ ಮೂಡಿಸಿದೆ. ಈ ನಡುವೆ ಜಗದೀಶ್ ಅಧಿಕಾರಿ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ದಕ್ಷಿಣ ಕನ್ನಡ ಮಾತ್ರವಲ್ಲದೇ ಕರ್ನಾಟಕದಾದ್ಯಂತ ಸಂಚಲನ ಮೂಡಿಸುತ್ತಿದೆ. ಬಿಜೆಪಿ ಪಕ್ಷದ ವಿರುದ್ಧ ಬಂಡಾಯವೇಳುವ ಸೂಚನ ನೀಡಿದ ಜಗದೀಶ್ ಅಧಿಕಾರಿ, ” ಇಲ್ಲಿ ನಡೆದ ಸಂಘಪರಿವಾರ ಕಾರ್ಯಕರ್ತರ ಕೊಲೆಗಳ ಹಿಂದೆ ಯಾರಿದ್ದಾರೆ ಎನ್ನುವುದು ನನಗೆ ತಿಳಿದಿದೆ. ನಾನು ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ನನಗೆ ಯಾರ ಭಯವೂ ಇಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯು ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೇ ಸಂಚಲನ ಮೂಡಿಸಿದೆ. ಈಗಾಗಲೇ ಸಂಘಪರಿವಾರ ಕಾರ್ಯಕರ್ತರ ಹತ್ಯೆ ಕುರಿತಾದಂತೆ ಹಲವಾ...

ಮೈಸೂರಿನಲ್ಲಿ ಖಾತೆ ತೆರೆಯುವತ್ತ ಎಸ್ ಡಿ ಪಿ ಐ ಚಿತ್ತ !

Image
ಮೈಸೂರಿನಲ್ಲಿ ಖಾತೆ ತೆರೆಯುವತ್ತ ಎಸ್ ಡಿ ಪಿ ಐ ಚಿತ್ತ ! ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ

ಬಿಜೆಪಿಗರೇ ದಯವಿಟ್ಟು ನಮ್ಮ ಮನೆ ಒಳಗಡೆ ಬರಬೇಡಿ, ನಮ್ಮ ಮನೆಯಲ್ಲೂ 10 ವರ್ಷ ಪ್ರಾಯದ ಹೆಣ್ಣು ಮಕ್ಕಳಿದ್ದಾರೆ ! ಇಂತಹದೊಂದು ಘೋಷಣೆ ಕೇರಳದಾದ್ಯಂತ ಫೇಮಸ್!

Image
ಬಿಜೆಪಿಗರೇ ದಯವಿಟ್ಟು ನಮ್ಮ ಮನೆ ಒಳಗಡೆ ಬರಬೇಡಿ, ಇಂತಹದೊಂದು ಘೋಷಣೆ ಕೇರಳದಾದ್ಯಂತ ಫೇಮಸ್ !  ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ  ಕೊಚ್ಚಿ, ಎ.14: ಕಥುವಾ ಅತ್ಯಾಚಾರ, ಕೊಲೆ ಪ್ರಕರಣ ಹಾಗು ಉನ್ನಾವೋ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ನಡುವೆ ಕೇರಳದ ಮನೆ ಗೋಡೆಗಳಲ್ಲಿ ಅಂಟಿಸಿರುವ ಪೋಸ್ಟರ್ ಗಳು ಇದೀಗ ಭಾರೀ ಸುದ್ದಿಯಾಗಿದೆ. ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪರ ನಡೆದ ರ್ಯಾಲಿಯಲ್ಲಿ ಬಿಜೆಪಿ ನಾಯಕರು ಮುಂಚೂಣಿಯಲ್ಲಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಕಥುವಾ ಅತ್ಯಾಚಾರಕ್ಕೆ ಸಂಬಂಧಿಸಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಆರೋಪಿ ಪರ ವಹಿಸಿದ್ದ ಇಬ್ಬರು ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದರು. ಉನ್ನಾವೋ ಪ್ರಕರಣದಲ್ಲೂ ಕೂಡ ಬಿಜೆಪಿ ಶಾಸಕ ಆರೋಪಿಯಾಗಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ನಂತರವೇ ಆತನನ್ನು ಬಂಧಿಸಲಾಯಿತು. ಬಿಜೆಪಿ ಶಾಸಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದರು. ಆದರೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಅವರು ಆದಿತ್ಯನಾಥ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದಾಗಿ ಒಂದು ದಿನದ ನಂತರ ಪೊಲೀಸ್ ಕಸ್ಟಡಿಯಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಯುವತಿಯ ತಂದೆ ಮೃತಪಟ್ಟಿದ್ದರು. ಈ ಘಟನೆಯ ನಂತರ ಆದಿತ್ಯನಾಥ್ ಸರಕಾರದ ವಿರುದ್ಧ ತೀವ್ರ...

ಕಳಚಿ ಬಿತ್ತು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ನ ಹಿಂದುತ್ವವಾದಿ ಮುಖ !

Image
ಕಳಚಿ ಬಿತ್ತು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ನ ಹಿಂದುತ್ವವಾದಿ ಮುಖ ! ಅತ್ಯಂತ ಕೀಳುಮಟ್ಟದ ಭಾಷೆ ಬಳಸಿ ಸಂದೇಶ ರವಾನಿಸಿದ ಸುವರ್ಣ ಟಿವಿ ‘ಅಜಿತ್’: ಫೇಸ್ಬುಕ್‌ನಲ್ಲಿ ಸಖತ್ ವೈರಲ್ !  ಬೆಂಗಳೂರು,ಎ.9: ಸುವರ್ಣ ನ್ಯೂಸ್‌ನ ಸಂಪಾದಕರಾದ ‘ಅಜಿತ್ ಹನುಮಕ್ಕನವರ್’ ಎಂಬ ವ್ಯಕ್ತಿ ಅತ್ಯಂತ ಕೀಳುಮಟ್ಟದಲ್ಲಿ ಸಂದೇಶದ ರವಾನಿಸಿ ಅವಹೇಳಿಸಿದ ಬಗ್ಗೆ ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸ್ಕ್ರೀನ್ ಶಾಟ್ ಒಂದು ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಜೆಪಿ ಸಂಸದ ರಾಜೀವ್ ಚಂದ್ರ ಶೇಖರ್ ಅವರ ಮಾಲಕತ್ವದ ಸುವರ್ಣ ನ್ಯೂಸ್ ಎಂಬ ಕನ್ನಡ ವಾರ್ತಾವಾಹಿನಿಯ ಸಂಪಾದಕರಾದ ಅಜಿತ್ ಹನುಮಕ್ಕನವರ್ ಈ ಹಿಂದಿನಿಂದಲೂ ಸದಾ ಬಲಪಂಥೀಯ ವಿಚಾಧಾರೆಯನ್ನು ಓಲೈಸಿ ಮಾತನಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ಮೊನ್ನೆ ಚಿತ್ರದುರ್ಗದ ಸಭೆಯೊಂದರಲ್ಲಿ ಮಾತನಾಡಿ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮೋದಿಯ ಸಭೆಯಲ್ಲಿ ಕುರ್ಚಿ ಎಸೆದು ಗದ್ದಲವೆಬ್ಬಿಸಿ 2ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಶ್ನಿಸಿ ಎಂದು ಕನ್ನಡಿಗರಲ್ಲಿ ವಿನಂತಿಸಿದ ಬಗ್ಗೆ ಫೇಸ್ಬುಕ್ ಲೈವ್ ಮಾಡಿದ ಸುವರ್ಣ ಟಿವಿ ಅಜಿತ್ ಜಿಗ್ನೇಶ್ ಈ ರೀತಿ ಹೇಳಬಹುದೇ..? ಇವರು ಕರ್ನಾಟಕಕ್ಕೆ ಬರುವುದು ಜಗಳ ಮಾಡಿಸುವುದಕ್ಕಾ ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತಿ ಪಕ್ಕಾ ಬಿಜೆಪಿ ಕಾರ್ಯಕರ್ತನಂತೆ ಮಾತನಾಡಿದ್ದರು ಎನ್ನಲಾಗಿದೆ. ಅಜಿತ್ ಅವರ ಲೈವ್ ವೀಡಿಯೋದ ವಿಚಾರವನ್ನು ...

ಸಾಮಾಜಿಕ ಜಾಲತಾಣದಲ್ಲಿ ಮಿತಿ ಮೀರಿದ ಹಿಂದುತ್ವವಾದಿಗಳ ಹಾವಳಿ ! ಮುಸ್ಲಿಂ ದೇಶದಲ್ಲಿ ಇದ್ರೂ ಬಿಡಲಿಲ್ಲ ಇವರ ಹಿಟ್ಟುಗುಣ !

Image
ಸಾಮಾಜಿಕ ಜಾಲತಾಣದಲ್ಲಿ ಮಿತಿ ಮೀರಿದ ಹಿಂದುತ್ವವಾದಿಗಳ ಹಾವಳಿ ! ಮುಸ್ಲಿಂ ದೇಶದಲ್ಲಿ ಇದ್ರೂ ಬಿಡಲಿಲ್ಲ ಇವರ ಹಿಟ್ಟುಗುಣ ! ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಎ - 04 , ಬುಧವಾರ , ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಧರ್ಮವನ್ನು ಕೆಟ್ಟ ಪದದಿಂದ ನಿಂದಿಸುವುದು , ಹೀಯಾಳಿಸುವುದು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹಿಂದುತ್ವವಾದಿಗಳು ಎಷ್ಟು ಮುಂದಿದ್ದಾರೆಂದರೆ ಮುಸ್ಲಿಂ ದೇಶದಲ್ಲೂ ಇವರ ಹುಟ್ಟುಗುಣ ಬಿಟ್ಟಿಲ್ಲ , ಕೆಳಗೆ ನೋಡಿ ಅದಕ್ಕೆ ತಾಜಾ ಉದಾಹರಣೆ. ಮೂಲತಃ ಕೊಡಗಿನ ಮೂಲದವನಾದ ಈತನು ಪ್ರಸ್ತುತ ಮುಸ್ಲಿಂ ದೇಶವಾದ ದುಬೈ ಯಲ್ಲಿ ಇದ್ದುಕೊಂಡೇ ಇಂತಹ ಅವಹೇಳನಕಾರಿ ಹಾಗೂ ಪ್ರಚೋದನಕಾರಿಯಾದಂತಹ ಮೆಸೇಜ್ ಅನ್ನು ಗ್ರೂಪಿನಿಂದ ಗ್ರೂಪಿಗೆ ಬಿಡುತ್ತಿದ್ದು , ಈಗಾಗಲೇ ವಾಟ್ಸಪ್ ಹಾಗೂ ಫೇಸ್‌ಬುಕ್‌ ಮುಖಾಂತರ ಬಹಳ ವೇಗವಾಗಿ ವೈರಲ್ ಆಗಿದೆ. ದುಬೈಯಲ್ಲಿರುವ ಕರಾವಳಿ ಮೂಲದ ಮುಸ್ಲಿಂ ಯುವಕರು ಈತನ ಮೇಲೆ  ಈಗಾಗಲೇ ಕೇಸು ದಾಖಲಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ , ಏನೇ ಆಗಲಿ ಇನ್ನೊಂದು ಧರ್ಮವನ್ನು ಅವಹೇಳನ ಮಾಡುವ ಇಂತಹ ಕೋಮುವಾದಿಗಳಿಗೆ ತಕ್ಕ ಶಿಕ್ಷೆ ಆದರೆ ಮಾತ್ರ ಮುಂದೆ ಇಂತಹ ಅಪರಾಧ ಕೃತ್ಯಗಳಿಂದ ಯುವಜನರು ಹೊರಬರಬಹುದು , ಏನಂತೀರಾ ?

ಬಿಜೆಪಿಗೆ ಮಗದೊಂದು ಶಾಕ್ ನೀಡಿದ ಶಿವಸೇನೆ! ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರದಲ್ಲಿ ಸ್ಪರ್ಧೆ ?

Image
ಬಿಜೆಪಿಗೆ ಮಗದೊಂದು ಶಾಕ್ ನೀಡಿದ ಶಿವಸೇನೆ! ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರದಲ್ಲಿ ಸ್ಪರ್ಧೆ ? ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಬೆಳಗಾವಿ ,ಎ.02: ಮುಂಬರುವಾ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮಹಾರಾಷ್ಟ್ರ ಮೂಲದ ಶಿವಸೇನೆ ಘೋಷಿಸಿದೆ. ಕರ್ನಾಟಕ ಚುನಾವಣೆಯಲ್ಲಿ ಮರಾಠಿ ಜನರ ಹಿತ ಕಾಯುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ(ಎಂಇಎಸ್) ನಮ್ಮ ಬೆಂಬಲ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. 2019 ಬಿಜೆಪಿಯ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ರಾವತ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಬೆಳಗಾಂ ಹಾಗೂ ಉತ್ತರ ಕನ್ನ್ಡ ಜಿಲ್ಲೆಯ ಮರಾಠಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಿವಸೇನೆ ತನ್ನ ರಾಷ್ಟ್ರೀಯ ಮಿತ್ರ ಪಕ್ಷ ಬಿಜೆಪಿಯ ವಿರುದ್ಧ ಸ್ಪರ್ಧಿಸಲಿದೆ ಎಂದು ರಾವತ್ ತಿಳಿಸಿದ್ದಾರೆ.