ಮೈಸೂರಿನಲ್ಲಿ ಖಾತೆ ತೆರೆಯುವತ್ತ ಎಸ್ ಡಿ ಪಿ ಐ ಚಿತ್ತ !
ಮೈಸೂರಿನಲ್ಲಿ ಖಾತೆ ತೆರೆಯುವತ್ತ ಎಸ್ ಡಿ ಪಿ ಐ ಚಿತ್ತ !
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಸುದ್ದಿವಾಹಿನಿ ಡಾಟ್ ಕಾಂ ತಂಡವು ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಂಚರಿಸಿ ಮತದಾರರ ಅಭಿಪ್ರಾಯಗಳನ್ನು ಕಲೆ ಹಾಕಿರುವ ಕ್ಷೇತ್ರಗಳಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರವೂ ಒಂದು. ಕಳೆದ ಚುನಾವಣೆಯಲ್ಲಿ ನರಸಿಂಹ ಕ್ಷೇತ್ರದ ಸೋಲಿಲ್ಲದ ಸರದಾರ ಕಾಂಗ್ರೆಸ್ ನ ತನ್ವೀರ್ ಸೇಠ್ ರವರಿಂದ ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ರವರುಕೆಲವೇ ಮತಗಳ ಅಂತರದಲ್ಲಿ ಪರಾಜಿತರಾಗಿದ್ದರು. ಆದರೆ ವಿಜೇತರಾಗಿದ್ದ ತನ್ವೀರ್ ಸೇಠ್ ರವರು ನಂತರದ ದಿನಗಳಲ್ಲಿ ತಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ಹಾಗೂ ಸೋಲುಂಡಿದ್ದರೂ, ಅಧಿಕಾರ ಇಲ್ಲದೆಯೂ ಕ್ಷೇತ್ರದ ಜನರ ನಡುವೆ ಹಲವಾರು ಹೋರಾಟಗಳ ನೇತೃತ್ವವನ್ನು ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ರವರು ವಹಿಸಿದ್ದ ಕಾರಣ ಮತದಾರ ಎಸ್ಡಿಪಿಐಯತ್ತ ವಾಲಿರುವುದು ಸ್ಪಷ್ಟವಾಗಿದೆ.
ಬಹುತೇಕ ಮುಸ್ಲಿಂ ಮತದಾರರು ಸಿದ್ದರಾಮಯ್ಯರಿಗಾಗಿ ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ, ಆದರೆ ನರಸಿಂಹ ರಾಜ ಕ್ಷೇತ್ರದಲ್ಲಿ ಈ ಬಾರಿ ಎಸ್ಡಿಪಿಐಯನ್ನು ಗೆಲ್ಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಮುಸ್ಲಿಂ ಮತಗಳೂ ಮಾತ್ರವಲ್ಲದೆ ಅಬ್ದುಲ್ ಮಜೀದ್ ರವರ ಹೋರಾಟಗಳನ್ನು ಕಂಡು ಅರಿತಿರುವ ದಲಿತರು ಹಾಗೂ ಕ್ರೈಸ್ತ ಸಮುದಾಯವು ಅಬ್ದುಲ್ ಮಜೀದ್ ರವರನ್ನು ಬೆಂಬಲಿಸುತ್ತಿದ್ದಾರೆ. ಮಾತ್ರವಲ್ಲದೆ ಅಬ್ದುಲ್ ಮಜೀದ್ ರವರಿಗಾಗಿ ಸ್ವಯಂ ಇಚ್ಛೆಯಿಂದ ಪ್ರಚಾರ ಕಾರ್ಯವನ್ನೂ ಕೂಡಾ ಮಾಡುತ್ತಿರುವುದು ವಿಶೇಷವಾಗಿದೆ.
ಬಿಜೆಪಿಯಿಂದ ಸಂದೇಶ್ ಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಹಿಂದೂ ಸಮಾಜದ ಮತದಾರರನ್ನು ತಕ್ಕಮಟ್ಟಿಗೆ ಸೆಳೆಯುವಲ್ಲಿ ಸಫಲರಾಗಲಿದ್ದಾರೆ. ಆದರೆ ಕಳೆದ ಬಾರಿ ಬಿಜೆಪಿಗೆ ಮತ ಹಾಕಿದ್ದ ದಲಿತ ಹಾಗೂ ಹಿಂದೂ ಸಮಾಜದ ಒಂದಷ್ಟು ಮತಗಳು ಈ ಬಾರಿ ಎಸ್ಡಿಪಿಐ ಪಾಲಾಗುವುದಂತು ಖಂಡಿತ.
ಜೆಡಿಎಸ್ ನ ಅಬ್ದುಲ್ಲಾರವರು ತಮ್ಮ ಆಪ್ತ ವಲಯದಲ್ಲಿ ತಾನು ಜಯಗಳಿಸುವೆ ಎಂದು ಹೇಳಿಕೊಳ್ಳುತ್ತಿದ್ದರೂ ಕೂಡಾ ಅಷ್ಟೇನು ಹೇಳಿಕೊಳ್ಳುವಂತಹ ಮತದಾರರನ್ನು ಸೃಷ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 3ನೇ ಸ್ಥಾನಕ್ಕೆ ತೃಪ್ತಿ ಪಡುವ ಸಾಧ್ಯತೆಗಳಿವೆ.
ಕ್ಯಾತಮಾರನಹಳ್ಳಿ ಕೆರೆ ಹಾಗೂ ಗೌಸಿಯಾ ನಗರದಲ್ಲಿನ ನಿರ್ವಸಿತ ಜನರನಾಲ್ಕು ಮನೆಗಳನ್ನು ಒಡೆದು ಹಾಕಿದ್ದರೂ ಕೂಡಾ SDPI ಪಕ್ಷದ ಅವಿರತ ಹೋರಾಟದ ಫಲವಾಗಿ ನೂರಾರು ಮನೆಗಳು ಒಡೆಯುವುದರಿಂದ ಉಳಿದುಕೊಂಡಿದೆ.
34 ಕುಟುಂಬಗಳಿಗೆ ಸಮುದಾಯ ಭವನದಲ್ಲಿ ಇಟ್ಟು ಊಟ, ನೀರು, ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಡಕಾಗದಂತೆ ನೋಡಿಕೊಂಡು SDPI ಹೋರಾಟ ನಡೆಸುತ್ತಾ ಬಂದಿದೆ.
ಕಾಲೇಜು ಸಂಖ್ಯೆಯಂತೂ ನಗಣ್ಯವಾಗಿದೆ. ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣ ಪಡೆಯಬೇಕಾದರೆ ನಗರದ ಮಹಾರಾಣಿ ಕಾಲೇಜಿಗೆ ಹೋಗಬೇಕಾಗಿದೆ. ಶಿಕ್ಷಣ ಮಂತ್ರಿಗಳ ಕ್ಷೇತ್ರದಲ್ಲೇ ಇಂತಹಾ ದುರಾವಸ್ಥೆ ಇದೆ.
ಕಳೆದ ವರ್ಷ ಡೆಂಗ್ಯೂನಿಂದಾಗಿ ಕ್ಷೇತ್ರದ 7 ಜನ ಸಾವನ್ನಪ್ಪಿದ್ದರು. ಜನರು ಸಾಯುತ್ತಿದ್ದರೂ ಕೂಡಾ ಪ್ರಾಥಮಿಕ ಸೌಲಭ್ಯ ನೀಡಲು ಇಲ್ಲಿನ ಆರೋಗ್ಯ ಕೇಂದ್ರಗಳಿಂದ ಸಾಧ್ಯವಾಗಿರಲಿಲ್ಲ. ಎಸ್ಡಿಪಿಐ ಪಕ್ಷದ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದ ಫಲವಾಗಿ ಕೇಂದ್ರಕ್ಕೆ ಓರ್ವ ಹೆಚ್ಚುವರಿ ವೈದ್ಯರನ್ನು ನೇಮಕಗೊಳಿಸಿದರು. ಡೆಂಗ್ಯೂ ಹರಡುವ ಬಗ್ಗೆ ಜನಜಾಗೃತಿ ಮೂಡಿಸುವ ಕರಪತ್ರಗಳನ್ನು SDPI ಯಿಂದ ಹಂಚಲಾಗಿತ್ತು. ಆದರೂ ಕೂಡಾ ಮೃತ ಪಟ್ಟವರ ಕುಟುಂಬವನ್ನು ಸಂತೈಸುವುದಾಗಲಿ, ಆರೋಗ್ಯ ಸುಧಾರಿಸುವಂತಹ ಕಾರ್ಯವನ್ನು ಈ ಕ್ಷೇತ್ರದ ಶಾಸಕರು ಮಾಡಿಲ್ಲ.
ಬೀಡಿ, ಅಗರಬತ್ತಿ, ಪೀಠೋಪಕರಣ, ಅಟೋಮೊಬೈಲ್ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿದ್ದು. ಇಲ್ಲಿನ ಶಾಸಕರು ಮತ್ತು ಅವರ ತಂದೆ ಅಝೀಜ್ ಸೇಠ್ ಕಾರ್ಮಿಕ ಸಚಿವರಾಗಿದ್ದೂ ಕೂಡ ಯಾವುದೆ ಪ್ರಯೋಜನವಾಗಿಲ್ಲ.
ಶಾಲಾ ಕಾಲೇಜು ಹಾಗೂ ಜನವಸತಿ, ಪ್ರಾರ್ಥನಾ ಮಂದಿರಗಳಿರುವ ಪ್ರದೇಶಗಳಲ್ಲಿರುವ ಬಾರ್ ಗಳ ಬಗ್ಗೆ ಜನರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಕೂಡಾ ಗುಪ್ತವಾಗಿ ಅದರ ಪರವಾನಗಿಯನ್ನು ನವೀಕರಣಗೊಳಿಸಲಾಗುತ್ತದೆ. ಸೈಂಟ್ ಫಿಲೋಮಿನಾ ಚರ್ಚ್ ಬಳಿ ತೆರೆದಿದ್ದ ಬಾರ್ ವಿರುದ್ಧ ಎಸ್.ಡಿ.ಪಿ.ಐ ಸತತ ಹೋರಾಟ ಮಾಡಿತ್ತು. ನಗರದ ಹೆದ್ದಾರಿಯಲ್ಲಿರುವ ಸಿದ್ದಿಖಾ ಮದರಸದ ಬಳಿಯ ಬಾರನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿ ಇಂದಿಗೆ ಮೂರು ವರ್ಷವಾದರೂ ತೆರವಾಗಿಲ್ಲ. ರಾಜ್ ಕುಮಾರ್ ರಸ್ತೆಯ ಬಾರ್ ವಿರುದ್ಧ ಪಕ್ಷವು ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ಮಾಡಿ ಬೀಗ ಜಡಿಸಿತ್ತು. ಆದರೆ ಮತ್ತೆ ಎರಡೇ ದಿನದಲ್ಲಿ ಮತ್ತೆ ಪುನರಾರಂಭವಾಗಿತ್ತು. ಪ್ರತಿಭಟನೆಗಳಿಗೆ ಇವರು ಜಗ್ಗುವುದಿಲ್ಲ ಎಂದು ಮನಗಂಡು ಬೇಕಾದ ದಾಖಲೆಗಳನ್ನು ಸೂಕ್ತ ಅಧಿಕಾರಿಗಳಿಗೆ ತಲುಪಿಸಿದ ಕಾರಣ ರಾಜ್ ಕುಮಾರ್ ರಸ್ತೆಯಲ್ಲಿರುವ ಅನಧಿಕೃತ ಬಾರ್ ತೆರವುಗೊಂಡಿತು.
ವಿವಿಧ ಸಮುದಾಯಗಳ ಸಮುದಾಯ ಭವನಕ್ಕೆ ಅನುದಾನ ನೀದಿದ್ದರೂ ಕೂಡಾ, ಮುಸ್ಲಿಂ ಸಮುದಾಯಕ್ಕೆ ಲಭಿಸಿರುವ ಅನುದಾನ ಶೂನ್ಯ
ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿರುವ ಪ್ರಮುಖ ಅಂಶಗಳನ್ನು ಅರಿಯಲುತಪ್ಪದೆ ಈ ಲಿಂಕ್ ಮೇಲೆ ಕ್ಲಿಕ್ಕಿಸಿ:
Comments
Post a Comment