ತನಗೆ ಸಿಕ್ಕ 3 ಲಕ್ಷದ ಬಹುಮಾನದ ಹಣವನ್ನು , ಹಿಂದೂ ಮಹಿಳೆಯ ಮಗುವಿನ ಕಣ್ಣಿನ ಚಿಕಿತ್ಸೆಗೆ ಕೊಟ್ಟ ಮುಸ್ಲಿಂ ಮಹಿಳೆ , ಹಿಂದೂ ಮುಸ್ಲಿಂ ಎಂದು ಜಗಳವಾಡಿ ಕೊಲೆ ಮಾಡುವ ಕಿಡಿಗೇಡಿಗಳಿಗೆ ಈ ಸ್ಟೋರಿ ಅರ್ಪಣೆ !

ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ...!

ಬ್ರೇಕಿಂಗ್ ನ್ಯೂಸ್, ಮಂಗಳೂರು ವರದಿ , 
ಫೆ: 22 , ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ  ನಾಯಕ ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ  "ಫ್ಯಾಮಿಲಿ ಪವರ್" ಶೋ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದೆ.ಆದರೆ ಕಳೆದ ಭಾನುವಾರ ನಡೆದ ಈ ಫ್ಯಾಮಿಲಿ ಪವರ್ ಶೋ ಅತ್ಯಂತ ಅರ್ಥಪೂರ್ಣ ಮತ್ತು ಸಮಾಜದ ಜನತೆಗೆ ಮಾನವೀಯ ಮೌಲ್ಯಗುಣಗಳನ್ನು ಬೋಧಿಸುವಂತಿತ್ತು. ಲೋಕಮ್ಮ ಮತ್ತು ಶಾಹೀನಾ ಎಂಬುವವರ ಎರಡು ಕುಟುಂಬಗಳು ಈ ಶೋ ನಲ್ಲಿ ಭಾಗವಹಿಸಿದ್ದವು. ಲೋಕಮ್ಮ ನವರ ಕುಟುಂಬ ಈ ಕಾರ್ಯಕ್ರದಲ್ಲಿ ಗೆಲವು ಸಾಧಿಸಿ ಬಂದ ಹಣದಿಂದ ಕಣ್ಣು ಇಲ್ಲದ ತಮ್ಮ ಕುಟುಂಬದ  6 ವರ್ಷದ ದಿಕ್ಷಿತಾ ಹೆಣ್ಣು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಮಹಾದಾಸೆಯಿಂದ ಹೊಂದಿದ್ದರು. ಆದರೆ ಪುನಿತ ರಾಜಕುಮಾರ ಕೇಳುವ ಪ್ರಶ್ನೆ ಮತ್ತು ಕೊಟ್ಟಂತ ಆಟಗಳಲ್ಲಿ ಶಾಹೀನಾ ಕುಟುಂಬದವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಪರಭಾವಕೊಂಡರು. ಹತ್ತು ಲಕ್ಷದ ಆಟಕ್ಕೆ ಆಯ್ಕೆಯಾದ ಶಾಹೀನಾ ಕುಟುಂಬಕ್ಕೆ ಪುನಿತ ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿರಾ ಎಂದು ಕೇಳಿದಾಗ ಗೆದ್ದ ಹಣವನ್ನು ಲೋಕಮ್ಮ ನವರ ಕುಟುಂಬದ ದಿಕ್ಷಿತಾ ಮಗುವಿನ ಕಣ್ಣಿನ ಚಿಕಿತ್ಸೆಗೆ ನೀಡುವುದಾಗಿ ಹೇಳಿದರು. ಆ ಕ್ಷಣವೇ ಶೋ ವೀಕ್ಷಿಸುತಿದ್ದ ನಾಡಿನ ಎಲ್ಲಾ ಜನರಲ್ಲಿ ಕಣ್ಣಿರು ತುಂಬಿ ಬಂದು ಭಾವುಕಾರದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಶೋ ದಲ್ಲಿ 3 ಲಕ್ಷ ಗೆಲುವು ಸಾಧಿಸಿದರು. ಪುನಿತ ರವರು 3 ಲಕ್ಷದ ಚಕ್ ಯಾರ ಹೆಸರಿನಲ್ಲಿ ಬರೆಸಲಿ ಎಂದು ಕೇಳಿದಾಗ ಶಾಹೀನಾ ಮತ್ತು  ಇವರ ಕುಟುಂಬ ಕಷ್ಟದಲ್ಲಿ ಇರುವ ಲೋಕಮ್ಮ ನವರ ಕುಟುಂಬದ ಹೆಸರಿನಲ್ಲಿ ನೀಡುವಂತೆ ಸೂಚಿಸಿದರು.ಈ ಮೂಲಕ ಹಿಂದು ಮುಸ್ಲಿಂ ಎಂಬು ಹೊಡೆದಾಗುವ ಇಂದಿನ ಈ ಸ್ವಾರ್ಥ ಸಮಾಜದಲ್ಲಿ ಜಾತಿ ಮತವನ್ನು ಲೆಕ್ಕಿಸದೆ ಮಾನವೀಯತೆಗೆ ಬೆಲೆ ನೀಡಿದ ಶಾಹೀನಾ ಕುಟುಂಬದ ಸಾಮರಸ್ಯದ ಮೇಲು ಗುಣಕ್ಕೆ ನಾಡಿನ ಜನತೆ ಕೃತಜ್ಞಾರ್ಹರು.
ಆದರೆ ದಿನವಿಡೀ ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸುವ ವಿಷಯಗಳ ಕುರಿತು ಅನವಶ್ಯಕವಾಗಿ ಚರ್ಚೆ ಮಾಡುವ ಕನ್ನಡ ಮಾಧ್ಯಮಗಳಿಗೆ ಮಾನವೀಯತೆ ಮೆರೆದು ಸಮಾಜದ ಸಾಮರಸ್ಯ ಕೈಗನ್ನಡಿಯಾದ ಶಾಹೀನಾ ಕುಟುಂಬದ ವಿಷಯವಾಗಿ ಸಮಾಜಕ್ಕೆ ಒಂದು ಭಾವೈಕ್ಯತೆ ಬೆಸೆಯುವ ವಿಚಾರವಾಗಿ ಯಾವ ಒಂದು ಕನ್ನಡ ಸುದ್ದಿ ಮಾಧ್ಯಮಗಳು ಚರ್ಚೆ ಮಾಡದೇ ಇರುವುದು ವಿಷಾದಕರ ಸಂಗತಿ..

ಇಷ್ಟ ಆದರೆ ಶೇರ್ ಮಾಡಿ

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ