ಕರುನಾಡ -ರಾಜ್ಯ ಬಜೆಟ್-2018 ಹೈಲೈಟ್ಸ್.

ರಾಜ್ಯ ಬಜೆಟ್-2018 ಹೈಲೈಟ್ಸ್.
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಫೆ: 16 , ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 13ನೇ ಬಜೆಟ್ ಮಂಡಿಸುತ್ತಿದ್ದಾರೆ.209181 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸುತ್ತಿದ್ದಾರೆ.

ರಾಜ್ಯ ಬಜೆಟ್-2018ರ ಹೈಲೈಟ್ಸ್

ಕೃಷಿ

📍ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಧನ ಸಹಾಯ. ಪ್ರತಿವರ್ಷ ಗರಿಷ್ಠ 1 ಹೆಕ್ಟೇರ್‍ಗೆ 5 ಸಾವಿರ, 10 ಸಾವಿರ ಬ್ಯಾಂಕ್ ಖಾತೆಗೆ ಜಮೆ

📍ಸಹಕಾರಿ ಬ್ಯಾಂಕ್‍ನಲ್ಲಿ ಸಾಲ ಪಡೆದ ರೈತರು ಮೃತಪಟ್ಟರೆ 1 ಲಕ್ಷದವರೆಗಿನ ಸಾಲ ಮನ್ನ

📍ಕೃಷಿ ಚಟುವಟಿಕೆಯಲ್ಲಿ ಹಾವು ಕಡಿದರೆ 1ಲಕ್ಷದಿಂದ 2 ಲಕ್ಷ ಪರಿಹಾರ

📍ಬಣವೆಗಳಿಗೆ ಬೆಂಕಿ ಬಿದ್ದರೆ 10 ರಿಂದ 20 ಸಾವಿರಕ್ಕೆ ಏರಿಕೆ

📍ಮೃತ ರೈತರ ಸಾಲ ಮನ್ನಾ

📍1 ಲಕ್ಷದ ವರೆಗೆ ಸಹಕಾರಿ ಸಾಲ ಮನ್ನಾ

📍25 ಎಪಿಎಂಸಿಗಳಲ್ಲಿ ಗುಣ ವಿಶ್ಲೇಷಣಾ ಪ್ರಯೋಗಾಲಯ

📍ಪ್ರತಿ ಸಮಿತಿಗೆ 10 ಲಕ್ಷ ವೆಚ್ಚದಂತೆ 2.5 ಕೋಟಿ

📍ವಸತಿ ರಹಿತ 1 ಸಾವಿರ ಹಮಾಲರಿಗೆ ವಸತಿ ಸೌಲಭ್ಯ

*ಲೋಕೋಪಯೋಗಿ*

📍ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನ ಕೈಗೊಳ್ಳಲು 150 ಕೋಟಿ ರೂ.

📍ದೆಹಲಿಯ ಕರ್ನಾಟಕ ಭವನ ಹಳೇ ಕಟ್ಟಡ ಕೆಡವಿ ಹೊಸ ಭವನ ನಿರ್ಮಾಣ – 30 ಕೋಟಿ

📍ಬೆಂಗಳೂರು ಎಂ.ಎಸ್.ಬಿಲ್ಡಿಂಗ್ ಹತ್ತಿರ 20 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವಲ್ ಕಾರ್ ಪಾರ್ಕಿಂಗ್

📍ಅಂತರ್ ಜಾತಿಯ ವಿವಾಹಕ್ಕೆ ಪ್ರೋತ್ಸಾಹ

📍ಒಂದೂವರೆ ಲಕ್ಷದಷ್ಟು ಸರ್ಕಾರಿ ಹುದ್ದೆಗಳ ಭರ್ತಿ. ಬಂಡವಾಳ ಹೂಡಿಕೆಗೆ ದೇಶದಲ್ಲೇ ಕರ್ನಾಟಕ ಪ್ರಸಕ್ತ ಸ್ಥಳ

📍ಬೆಂಗಳೂರನ್ನು ಸ್ಟಾರ್ಟ್‍ ಅಪ್ ನಗರಿಯಾಗಿ ಅಭಿವೃದ್ಧಿ

📍ಅಲ್ಪಸಂಖ್ಯಾತ ಸಮುದಾಯಕ್ಕೆ 2281 ಕೋಟಿ ರೂ.

*ವಾಣಿಜ್ಯ ಮತ್ತು ಕೈಗಾರಿಕೆ*

📍ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಲು ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಬೆಂಗಳೂರು ಸಮೀಪ 400 ಎಕರೆಯಲ್ಲಿ, ಹುಬ್ಬಳ್ಳಿಯಲ್ಲಿ 50 ಎಕರೆಯಲ್ಲಿ ಅಭಿವೃದ್ಧಿ

📍ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಹಯೋಗದೊಂದಿಗೆ 23 ಕೋಟಿ ವೆಚ್ಚದಲ್ಲಿ ಕೈಗಾರಿಕಾ ತಂತ್ರಜ್ಞಾನದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ

📍ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು 20 ರಿಂದ 30 ಎಕರೆಗಳ ಬಂಜರು ಅಥವಾ ಒಣ ಭೂಮಿಯನ್ನ ಗ್ರಾಮೀಣ ಉದ್ಯಮ ವಲಯ ಎಂದು ಅಧಿಸೂಚಿಸಲಾಗುವುದು.

*ಪ್ರಾಥಮಿಕ – ಪ್ರೌಢ ಶಿಕ್ಷಣ*

📍100 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

📍ಪ್ರತಿ ಶಾಲೆಗೆ 5 ಲಕ್ಷ ದಂತೆ ಒಟ್ಟು 5 ಕೋಟಿ ಅನುದಾನ

📍ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ

📍10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಸೌಲಭ್ಯ 5 ಕೋಟಿ

📍100 ವರ್ಷ ಪೂರೈಸಿದ ಪಾರಂಪರಿಕ ಶಾಲೆ ಗುರುತಿಸಿ ನವೀಕರಣ

📍7.5 ಕೋಟಿ ವೆಚ್ಚದಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯ

*ಉನ್ನತ ಶಿಕ್ಷಣ*

📍ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರಕ್ಕೆ 2 ಕೋಟಿ

📍ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆ ಜಮಖಂಡಿಯಲ್ಲಿ ರಾಣಿ ಚೆನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ತಲಾ 1 ಕೋಟಿ

📍ಉನ್ನತ ಶಿಕ್ಷಣ ಪಡೆಯುವ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ

📍ಧಾರವಾಡ ಕರ್ನಾಟಕ ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ 1 ಕೋಟಿ

📍ಆರೋಗ್ಯ ಕರ್ನಾಟಕ ಯೋಜನೆ

📍ಹೊಸದಾಗಿ 571 ಪ್ರಾಥಮಿಕ ಆರೋಗ್ಯ ಕೇಂದ್ರ

📍ಖಾಸಗಿ ಆಸ್ಪತ್ರೆಗೆ ಮೇಲ್ವಿಚಾರಣೆಗೆ ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಆರೋಗ್ಯ ಪರಿಷತ್ತು ಸ್ಥಾಪನೆ

*ವೈದ್ಯಕೀಯ ಶಿಕ್ಷಣ*

📍ಬಿಎಂಸಿಯಲ್ಲಿ 1000 ಹಾಸಿಗೆ ಇರುವ ಹೆಚ್ಚುವರಿ ವಾರ್ಡ್

📍ಗದಗ, ಕೊಪ್ಪಳ ಚಾಮರಾಜನಗರದ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ.

📍ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7.81 ಕೋಟಿ ರೂ. ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯ

📍ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಪೆಟ್ ಸಿಟಿ ಸ್ಕ್ಯಾನ್ ಸೌಲಭ್ಯ

📍ಮೈಸೂರು ನರ್ಸಿಂಗ್ ಕಾಲೇಜಿಗೆ 30 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ

📍ಬೀದರ್, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ಚಿಕಿತ್ಸಾ ಘಟಕ

📍ಗುಲ್ಬರ್ಗಾ ವೈದಕೀಯ ಕಾಲೇಜಿನಲ್ಲಿ ಸುಟ್ಟಗಾಯಗಳ ವಾರ್ಡ್ ಆರಂಭ

📍ಹಾಸನ, ಮೈಸೂರು, ಕಾರವಾರ ವೈದಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ

📍ನರ್ಸಿಂಗ್ ಕಾಲೇಜುಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ