ಮಂಗಳೂರು -ಕುಸಿದುಬಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

ಮಂಗಳೂರು -ಕುಸಿದುಬಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

ಮಂಗಳೂರು :ಫೆ :02 - ಮಧ್ಯಾಹ್ನದ ಊಟ ಮುಗಿಸಿ ಸಹಪಾಠಿ ವಿದ್ಯಾರ್ಥಿನಿಯರ ಜೊತೆ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಕಾಸರಗೋಡು ಪೆರ್ಲದ ಅಪೂರ್ವ (18) ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಈಕೆ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಪ್ರಥಮ ವರ್ಷದ ಆರ್ಕಿಟೆಕ್ಟ್ ವಿದ್ಯಾರ್ಥಿನಿ.
ಕುಸಿದು ಬಿದ್ದ ಈಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಮೆದುಳಿನ ರಕ್ತಸ್ರಾವದಿಂದ ಈಕೆ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಪ್ರಥಮ ಸೆಮಿಸ್ಟರ್ ಪರೀಕ್ಷೆ ಬಳಿಕ ರಜೆ ಮುಗಿಸಿ ಜನವರಿ 31ರಂದು ಮನೆಯಿಂದ ಕಾಲೇಜಿಗೆ ಬಂದ ಈಕೆ ಫೆಬ್ರವರಿ 1ರಂದು ಬೆಳಿಗ್ಗೆ ತರಗತಿಗೆ ಹಾಜರಾಗಿದ್ದಳು. ಮಧ್ಯಾಹ್ನ 1.30ಕ್ಕೆ ಈ ದುರ್ಘಟನೆ  ನಡೆದಿದೆ.

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!