ಯೂ ಟರ್ನ್ ಹೊಡೆದ ಟಿಡಿಪಿ ! ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂದ ಟಿಡಿಪಿ ನಾಯಕ!
ಬಿಜೆಪಿ ಜತೆ ಮೈತ್ರಿ ಕಡಿದುಕೊಳ್ಳುವುದಿಲ್ಲ: ಟಿಡಿಪಿ
ಹೊಸದಿಲ್ಲಿ: ಕೇಂದ್ರ ಬಜೆಟ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ತೆಲುಗುದೇಶಂ ಪಕ್ಷವು ಬಿಜೆಪಿ ಜತೆ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿನ್ನೆಯಷ್ಟೇ ಕೆಲ ಟಿಡಿಪಿ ನಾಯಕರು , ಬಿಜೆಪಿಯ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ಸುಳಿವು ನೀಡಿದ್ದು ಇಂದು ಇಲ್ಲ ಎನ್ನುವ ಮೂಲಕ ಯೂಟರ್ನ್ ಹೊಡೆದಿದ್ದಾರೆ !
'ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಟಿಡಿಪಿ ಮೈತ್ರಿ ಕಡಿದುಕೊಳ್ಳುವುದಿಲ್ಲ' ಎಂದು ಪಕ್ಷದ ನಾಯಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈಎಸ್ ಚೌಧರಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಆಂಧ್ರಪ್ರದೇಶಕ್ಕೆ ಇನ್ನಷ್ಟು ಹೆಚ್ಚಿನ ನೆರವು ಪಡೆದುಕೊಳ್ಳಲು ಕೇಂದ್ರದ ಮೇಲೆ ಹೆಚ್ಚಿನ ಒತ್ತಡ ಹೇರಲು ಟಿಡಿಪಿ ನಿರ್ಧರಿಸಿದೆ.
'ಪಕ್ಷದ ಮುಖಂಡರ ಸಭೆಯಲ್ಲಿ 2018ರ ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಯಾವುದೇ ಅನುದಾನ ನೀಡದ ವಿಚಾರ ಚರ್ಚೆಯಾಗಿಲ್ಲ. ನೆರವಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವುದನ್ನು ಮುಂದುರಿಸುತ್ತೇವೆ. ಅಗತ್ಯವೆನಿಸಿದರೆ ಸಂಸತ್ತಿನಲ್ಲೂ ಈ ವಿಚಾರ ಪ್ರಸ್ತಾಪಿಸುತ್ತೇವೆ' ಎಂದು ಚೌಧರಿ ಅವರು ಅಮರಾವತಿಯಲ್ಲಿ ನಡೆದ ಟಿಡಿಪಿ ಸಂಸದೀಯ ಮಂಡಳಿ ಸಭೆಯ ಬಳಿಕ ತಿಳಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶಿವಸೇನೆ ಜತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದೂ ಅವರು ತಿಳಿಸಿದರು. ಮುಂದಿನ ಮಹಾಚುನಾವಣೆಗೆ ಬಿಜೆಪಿ ಮೈತ್ರಿ ಕಡಿದುಕೊಂಡು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ಇತ್ತೀಚೆಗೆ ಘೋಷಿಸಿತ್ತು.
'ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ನಾಯ್ಡು ನಡುವೆ ಯಾವುದೇ ಮಾತುಕತೆ ನಡೆದಿಲ್ಲ' ಎಂದೂ ಚೌಧರಿ ಸ್ಪಷ್ಟಪಡಿಸಿದರು

Comments
Post a Comment