ಮನ್ಶರ್ ಸಮೂಹ ಸಂಸ್ಥೆಗಳ ಲಾಂಛನ ಎ.ಪಿ.ಉಸ್ತಾದರಿಂದ ಪ್ರಕಾಶನ
ಫೆ : 2 - 2018 ಶುಕ್ರವಾರ
ವರದಿ : ಬ್ರೇಕಿಂಗ್ ನ್ಯೂಸ್, ಕರ್ನಾಟಕ
ಮನ್ಶರ್ ಸಮೂಹ ಸಂಸ್ಥೆಗಳ ಲಾಂಛನ ಎ.ಪಿ.ಉಸ್ತಾದರಿಂದ ಪ್ರಕಾಶನ!
ವಿಧ್ಯಾಭ್ಯಾಸ ರಂಗದಲ್ಲಿ ಉನ್ನತಿಯನ್ನು ಸಾಧಿಸಿ ಮನ್ ಶರ್ ಸಂಸ್ಥೆಯು ತನ್ನ ವಿವಿಧ ಸಂಸ್ಥೆಗಳಾದ ದಅವಾ ಕಾಲೇಜು,ಇಂಗ್ಲಿಷ್ ಮೀಡಿಯಂ, ಪ್ರೀ ಸ್ಕೂಲ್ , ಮಹಿಳಾ ಕಾಲೇಜ್, ಹಿಫ್ಲುಲ್ ಖುರಾನ್, ಎಜು ವಿಲೇಜ್ , ಸಹಿತವಿರುವ ವಿವಿಧ ಸಂಸ್ಥೆಯ ಏಕೀಕ್ರತ ಸಂಸ್ಥೆಯಾದ ಮನ್ಶರ್ ಗ್ರೂಪ್ ಇದರ ಅಧಿಕ್ರತ ಲೋಗೋ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಬಿಡುಗಡೆಗೊಳಿಸಿದರು....
ಗುಣಮಟ್ಟದ ಶಿಕ್ಷಣದೊಂದಿಗೆ 2009ರಲ್ಲಿ ಆರಂಭವಾದ ಸಂಸ್ಥೆಯು ಶೀಘ್ರವಾಗಿ ಉನ್ನತಿಯನ್ನು ಸಾಧಿಸಿ ಮನ್ ಶರ್ ಸಂಸ್ಥೆಯು ಸಧ್ಯ 1500ರಷ್ಟು ವಿಧ್ಯಾರ್ಥಿಗಳು ವಿವಿಧ ಸಮುಚ್ಚಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು ಎಲ್ಲಾ ಸಂಸ್ಥೆಯು ಮನ್ ಶರ್ ಗ್ರೂಪ್ ಎಂಬ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುದಾಗಿದ್ದು ಇನ್ನು ಹಲವು ಹೊಸ ಸಂಸ್ಥೆಯ ಯೋಜನೆಗಳು ಪ್ರಗತಿಯಲ್ಲಿದೆ....
ಸಂಸ್ಥೆಯ ಲೋಗೋ ಬಿಡುಗಡೆ ಕಾರ್ಯಾಕ್ರಮದಲ್ಲಿ ಮನ್ ಶರ್ ಗ್ರೂಪ್ ಚೆಯರ್ಮಾನ್ ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್, ಜನರಲ್ ಮ್ಯಾನೇಜರ್ ಸಯ್ಯದ್ ಆಬಿದ್ ಅಸ್ಸಖಾಫ್ ತಂಙಲ್, ಸಯ್ಯದ್ ಕೋಟೇಶ್ವರ ತಂಙಳ್, ಬೆಳ್ತಂಗಡಿ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ತಂಙಲ್ ಉಜಿರೆ, ಎಸ್ ವೈ ಎಸ್ ಸ್ಟೇಟ್ ಜನರಲ್ ಸೆಕ್ರೆಟರಿ ಎಮ್ ಎಸ್ ಎಮ್ ಝೈನಿ ಕಾಮಿಲ್ ಸಖಾಫಿ, ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಎಂ ಸ್ವಾಧಿಕ್ ಮಾಸ್ಟರ್ ಮಲೆಬೆಟ್ಟು, ಉಮರ್ ಸಖಾಫಿ ಕೊಡಗು ಉಪಸ್ಥಿತರಿದ್ದರು.
Comments
Post a Comment