ಕಾಂಗ್ರೆಸ್ ನ ಸುಳ್ಳು ರಾಜಕೀಯಕ್ಕೆ ವಿರುದ್ದವಾಗಿ ಚಾಲೆಂಜ್ ಹಾಕಿದ ರಿಯಾಝ್ ಫರಂಗಿಪೇಟೆ !

ಪುದು ಗ್ರಾಮ ಪಂಚಾಯತ್ ಚುನಾವಣೆ ಬಿಜೆಪಿ ಮೈತ್ರಿ ಸಾಬೀತು ಪಡಿಸಿದರೆ ಎಲ್ಲಾ ನಾಮ ಪತ್ರ ಗಳನ್ನು ಹಿಂಪಡೆಯಲಾಗುವುದು. - - - - ರಿಯಾ‌ಝ್ ಫರಂಗಿಪೇಟೆ! 

ಬ್ರೇಕಿಂಗ್ ನ್ಯೂಸ್, ‌ಮಂಗಳೂರು ವರದಿ.
ಮಂಗಳೂರು: ಫೆ : 10 ,ಕಾಂಗ್ರೆಸ್ ಪಕ್ಷದ ನಾಯಕರು ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಭ್ರಮನಿರಸರಾಗಿದ್ದಾರೆ.ಆದ್ದರಿಂದ ಎಸ್ ಡಿ ಪಿ ಐ ಪಕ್ಷದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಎಸ್ ಡಿ ಪಿ ಐ ಪಕ್ಷವು ಬಿಜೆಪಿ ಮತ್ತು ಸಂಘ ಪರಿವಾರದ ವಿನಾಶಕ್ಕಾಗಿ ಜನ್ಮ ತಾಳಿರುವಾಗ ನಾವು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಣ್ಣ ಮಕ್ಕಳಿಗೂ ತಿಳಿದಿರುವ ಸತ್ಯವಾಗಿರುವಾಗ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾತ್ರ ಈ ವಿಚಾರ ತಿಳಿಯದಿರುವುದು ವಿಪರ್ಯಾಸವಾಗಿರುತ್ತದೆ.
    ಆದರೆ ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಬಿಜೆಪಿ ಜೊತೆ ನಂಟಿರುವುದನ್ನು ಕಾಣಲು ಸಾಧ್ಯ ಇದೆ ಡಿಬಿ ಚಂದ್ರೇ ಗೌಡರಿಂದ ಎಸ್ ಎಂ ಕೃಷ್ಣ ರವರೆಗೆ ದೊಡ್ಡ ದಂಡೇ ನಮ್ಮ ನಡಿಗೆ ಬಿಜೆಪಿ ಕಡೆಗೆ ಎಂದು ಪ್ರಯಾಣ ಬೆಳೆಸಿದ್ದಾರೆ. ಮುಂಬೈಯ ಗೊಂಡಿಯಾ ಜಿಲ್ಲಾ ಪರಿಷತ್ ನಿಂದ ಇತ್ತೀಚೆಗೆ ಮೈಸೂರು ನಗರ ಪಾಲಿಕೆಯ ವರೆಗಿನ ಒಳ ಒಪ್ಪಂದಗಳು, ಪುದು ಗ್ರಾಮ ಪಂಚಾಯತ್ ನ ವಾರ್ಡ್ ಸಂಖ್ಯೆ 1 ರಲ್ಲಿ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಬಿಜೆಪಿ ಯಲ್ಲಿ ಈ ರೀತಿಯ ಅಕ್ರಮ ಸಂಬಂಧಗಳನ್ನಿಟ್ಟು ಕೊಂಡು ಎಸ್ ಡಿ ಪಿ ಐ ಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ರಿಯಾ‌ಝ್ ಫರಂಗಿಪೇಟೆ ಯವರು ಪ್ರತಿಕ್ರಿಯಿಸಿರುತ್ತಾರೆ.
     ನಾವು ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ನಾವು ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಲ್ಲಿಸಿರುವ ಎಲ್ಲಾ ನಾಮ ಪತ್ರ ಗಳನ್ನು ಹಿಂಪಡೆಯುತ್ತೇವೆ ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲಿ ಹಾಗೂ ಬಿಜೆಪಿಯಿಂದ ಒಂದು ರೂಪಾಯಿ ಪಡೆದು ಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಇಲ್ಲವಾದಲ್ಲಿ ಫಾರೂಕ್ ರವರು ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿರುತ್ತಾರೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ