ಈ ಬಾರಿಯ ಪುದು ಕ್ಷೇತ್ರದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಸ್ ಡಿ ಪಿ ಐ ಪಕ್ಷದಿಂದ 22 ಅಭ್ಯರ್ಥಿಗಳು ಕಣಕ್ಕೆ !
By-Breaking news, Karnataka

ಬಂಟ್ವಾಳ,ಫೆ.01: ಈ ಬಾರಿಯ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್ ಡಿ ಪಿ ಐ ಪಕ್ಷವು ತನ್ನ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಪುದು ಪಂಚಾಯತ್ನ ಅಧಿಕಾರವನ್ನು ಹಿಡಿಯುವ ಪ್ರಯತ್ನದಲ್ಲಿದೆ ಎಂದು ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ಫರಂಗಿಪೇಟೆಯ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣಾ ತಯಾರಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇದಕ್ಕಾಗಿ ಕಳೆದ ಒಂದು ವರ್ಷದಿಂದ ಬೂತ್ ಮಟ್ಟದಲ್ಲಿ ತನ್ನ ಕಾರ್ಯಗಾರ ಮೂಲಕ ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಪ್ರತಿಜ್ಞೆಯೊಂದಿಗೆ ಹಲವಾರು ಪ್ರಗತಿಪರ ಕೆಲಸಗಳನ್ನು ಮಾಡಿ ಪ್ರತಿ ಮತದಾರರ ಮನಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಈ ಪ್ರೀತಿ, ವಿಶ್ವಾಸಗಳು ಖಂಡಿತವಾಗಿಯೂ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂಬ ವಿಶ್ವಾಸ ನಮಗಿದೆ ಎಂದರು.

ಪುದು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ಸರ್ವಾಧಿಕಾರಿ ಧೋರಣೆ ಮತ್ತು ಭ್ರಷ್ಟಾಚಾರದ ನೀತಿಯಿಂದ ಜನರು ತೀವ್ರ ಅಸಮಾಧಾನಗೊಂಡಿರುವುದರಿಂದ ಕಾಂಗ್ರೆಸ್ನ ಮತಗಳಿಕೆಯು ತೀವ್ರವಾಗಿ ಕುಸಿಯಲಿದೆ ಎಂದ ಅವರು, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸುವ ಸಲುವಾಗಿ ಹಾಗೂ ಪುದು ಕ್ಷೇತ್ರದಲ್ಲಿ ಬದಲಾವಣೆ, ಅಭಿವೃದ್ಧಿಗಾಗಿ ಮತದಾರರು ಎಸ್ ಡಿ ಪಿ ಐ ಜೊತೆಗೆ ಕೈ ಜೋಡಿಸಲಿದ್ದಾರೆ.
ಇದಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಹೇಳಿದರು.
Comments
Post a Comment