ಯುಟಿ ಗೆ ಸೆಡ್ಡು ಹೊಡೆಯಲು ಬಿಜೆಪಿ ಸಿದ್ದತೆ!



By-breaking news Mangalore
ಯುಟಿ ಗೆ ಸೆಡ್ಡು ಹೊಡೆಯಲು ಬಿಜೆಪಿ ಸಿದ್ದತೆ! 

ಬ್ರೇಕಿಂಗ್ ನ್ಯೂಸ್, ಮಂಗಳೂರು, 

ಮಂಗಳೂರು,ಫೆ.09: ಕಾಂಗ್ರೆಸ್ ನ ಭದ್ರ ಕೋಟೆಯಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಈ ಬಾರಿ ಕಾರ್ಯಕರ್ತರ ಜೊತೆ ಕೆಲಸಮಾಡುವ, ಸಂಘಟನಾತ್ಮಕವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಉತ್ಸಾಹಿತವಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ . ಬಂಟ್ವಾಳದಂತೆಯೇ ಉಳ್ಳಾಲ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಹೈಕಮಾಂಡ್ ವಹಿಸಿರುವ ಕಾರಣ ಅಭ್ಯರ್ಥಿಯನ್ನು ಅಳೆದು ತೂಗಿ ಆರಿಸುವ ಲಕ್ಷಣ ಕಾಣುತ್ತಿದೆ.82128 ಮುಸ್ಲಿಂ ಮತಗಳನ್ನು ಹೊಂದಿರು ಕ್ಷೇತ್ರದಲ್ಲಿ 95576 ಹಿಂದುಗಳ ಮತಗಳು, 9113 ಕ್ರಿಶ್ಚಿಯನ್ ಮತಗಳು ಇದೆ‌‌.
ಮುಸ್ಲಿಂ ಮತಗಳು ಸುನ್ನಿ ಮತ್ತು ಸಲಫಿ ಮತಗಳಾಗಿ ಚದುರಿದರೆ, ಹಿಂದುಗಳಲ್ಲಿ ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಅತಿ ಹೆಚ್ಚಿನ‌ ಸಂಖ್ಯೆಯಲ್ಲಿ ಬಿಲ್ಲವ ಮತಗಳು ಇರುವ ಕ್ಷೇತ್ರದಲ್ಲಿ ಇದೂ ಕೂಡ ಒಂದು. ಸುಮಾರು 54408 ಬಿಲ್ಲವ ಮತಗಳು ಈ ಕ್ಷೇತ್ರದಲ್ಲಿ ಇದೆ. 13900 ಬಂಟ ಸಮಾಜ, 7112 ಕುಲಾಲ್ ಸಮಾಜ, 3200 ಮೊಗವೀರ ಸಮಾಜ, 2970 ಗಟ್ಟಿ ಸಮಾಜ ಹಾಗೂ 12968 ಇತರೆ ಸಮಾಜದವರ ಮತಗಳು ಇವೆ‌‌.
ಮುಸ್ಲಿಂ ಸಮಾಜಕ್ಕೆ ಹಲವು ಅಭಿವೃದ್ಧಿಯ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿ ಕೊಂಡು ಕೇಂದ್ರ ಸರಕಾರ, ಅವರ ಮತಗಳನ್ನು ಸೆಳೆಯಲು ಸತತ ಪ್ರಯತ್ನ ಪಡುತ್ತಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿ ಧರ್ಮದ ಹೆಚ್ಚಿನ ಮಹಿಳೆಯರು ತಲಾಖ್ ವಿಷಯದಲ್ಲಿ ಬಿಜೆಪಿ ಯನ್ನು ಬೆಂಬಲಿಸಿದ್ದಾರೆ ಎಂದು ಜನರಲ್ಲಿ ಬಿಂಬಿಸಿದ ಉದಾಹರಣೆಯೂ ಇದೆ. ಇದೇ ಮಾದರಿ ಕರ್ನಾಟಕದಲ್ಲಿ ಇದೇ ಫಾರ್ಮುಲಾವನ್ನು ಮುಂದುವರಿಸಿ ಮುಸ್ಲಿಂ ಮಹಿಳೆಯರ ಬೆಂಬಲದ ನಿರೀಕ್ಷೆಯಲ್ಲಿ ಇರುವ ಭಾರತೀಯ ಜನತಾ ಪಾರ್ಟಿ ಮಂಗಳೂರು ಕ್ಷೇತ್ರದಲ್ಲಿ ಯು ಟಿ ಖಾದರ್ ಅವರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದೆ.
ಬಿಜೆಪಿಯಿಂದ ಸತೀಶ್, ಕುಂಪಲ,ರಹೀಮ್ ಉಚ್ಚಿಲ, ಮತ್ತು ಕಾಂಗ್ರೆಸ್ ನಿಂದ ಯುಟಿ ಖಾದರ್, ಕಣಚೂರು ಮೋನು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಎಸ್ ಡಿ ಪಿ ಐ ನಿಲುವು:

ಹೌದು ಎಸ್ಡಿಪಿಐ ನಿಲುವು ನಿಗೂಢವಾಗಿದೆ.!ಒಂದು ವೇಲೆ ಎಸ್ಡಿಪಿಐ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಅದರ ನೇರ ಪರಿಣಾಮ ಖಾದರ್ ಮೇಲೆ ಬೀಳುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ