ಬ್ರೇಕಿಂಗ್ ನ್ಯೂಸ್ , ಮೂಡಬಿದಿರೆ :ಬೈಕಿಗೆ ಬಸ್ ಡಿಕ್ಕಿ ಸವಾರ ದಾರುಣ ಸಾವು‌!

ಮೂಡಬಿದಿರೆ :ಬೈಕಿಗೆ ಬಸ್ ಡಿಕ್ಕಿ ಸವಾರ ದಾರುಣ ಸಾವು‌! 
ಮೂಡುಬಿದಿರೆ:ಫೆ :06 ಮಂಗಳೂರಿನ ಕಡೆಯಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಹಂಡೇಲ್ ಬಳಿಯ  ಮೈಟ್ ಇಂಜಿನಿಯರಿಂಗ್ ಕಾಲೇಜು ಎದುರುಗಡೆ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತಲೆ ಚಿದ್ರಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ . 



ಮೃತ ವ್ಯಕ್ತಿಯನ್ನು ಸ್ಥಳೀಯ ಹಂಡೇಲ್ ನಿವಾಸಿ ಯಾಸೀರ್ (*23 ವ) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ವ್ಯಕ್ತಿ  ಕಾರೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರಥಮ ಮಾಹಿತಿ ಸಿಕ್ಕಿದೆ. ಈಗಾಗಲೇ ಮೂಡುಬಿದಿರೆ ಪೋಲೀಸರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಈ ಭೀಕರ ಅಪಘಾತದ ವೀಡಿಯೋ ವೈರಲ್ ಆಗಿದ್ದು , ನೋಡುಗರಿಗೆ ಭಯ ಬೀಳಿಸುವ ರೀತಿಯಲ್ಲಿ ತಲೆ ಚಿದ್ರಗೊಂಡಿರುವುದರಿಂದ ನಾವು ಆ ವೀಡಿಯೋವನ್ನು ಇದರಲ್ಲಿ ಲಗತ್ತಿಸಿಲ್ಲ ! 

Comments

Popular posts from this blog

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!