ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !
ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು ! ಬ್ರೇಕಿಂಗ್ ನ್ಯೂಸ್ ಮಂಗಳೂರು ವಿಷೇಶ ವರದಿ, ಜಾಲತಾಣಗಳಲ್ಲಿ ಯುವತಿರೊಂದಿಗಿನ ಸೆಲ್ಫಿ ವೈರಲ್, ಹೋಮ್ ಗಾರ್ಡ್ ಪರಾರಿ ಉಡುಪಿ, : ಯುವಕನೋರ್ವ ಹತ್ತಾರು ಯುವತಿಯರೊಂದಿಗೆ ತೆಗೆಸಿಕೊಂಡ ಸೆಲ್ಪಿ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಕಾರ್ಕಳ ತಾಲೂಕಿನ ಹೋಮ್ ಗಾರ್ಡ್ ಎಂದು ಹೇಳಲಾಗಿದ್ದು ಈತ 10ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಈ ಪ್ರಸಂಗದ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ. ಯುವತಿಯರೊಂದಿಗೆ ಸೆಲ್ಫಿ ಪೋಟೋಗಳಲ್ಲಿ ಇರುವ ಯುವಕ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಮಂಜರಪಲ್ಕೆ ನಿವಾಸಿ ಸುಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಂದು ಹೇಳಲಾಗಿದೆ. ಪರಿಸರದ ಹಲವಾರು ಯುವತಿಯರಿಗೆ ತಾನು ಪೊಲೀಸ್ ಎಂದು ಸುಳ್ಳು ಹೇಳಿ ಸ್ನೇಹ ಸಂಪಾದಿಸಿ ಸಂಬಂಧ ಬೆಳೆಸುತ್ತಿದ್ದ. ನಂತರ ಯುವತಿಯರನ್ನು ಯಾಮಾರಿಸಿ ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಮಜಾ ಮಾಡುತ್ತಿದ್ದ. ಹಾಗೂ ಈ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈತನ ಶೋಕಿ ಎಂದು ಹೇಳಲಾಗಿದೆ. ಈತನ ಮೋಡಿ ಮಾತಿನ ಬಲೆಗೆ ಹಲವಾರು ಯುವತಿಯರು ಸಿಲುಕಿದ್ದು, ಅವರನ್ನು ರಕ್ಷಿಸಬ...
Comments
Post a Comment