ಕಾರ್ಕಳ: ದಂಪತಿಗೆ ಹಲ್ಲೆಗೈದು ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ

ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ
ಕಾರ್ಕಳ, ಫೆ.4: ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಮನೆಮಂದಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್ ಎಂಬನಲ್ಲಿ ನಡೆದಿದೆ.
ಬಂಗ್ಲೆಗುಡ್ಡೆ ಜಂಕ್ಷನ್ ಬಳಿ ಯ ಸಂಜೀವ ನಾಯ್ಕ ಮತ್ತು ಯಶೋಧಾ ಎಂಬ ದಂಪತಿಯ ಮನೆಯಿಂದ ಈ ಕಳವು ನಡೆದಿದೆ. ಇವರ ಮನೆಗೆ ನಿನ್ನೆ ತಡರಾತ್ರಿ ಹಿಂಬಾಗಿಲ ಮೂಲಕ ಒಳನುಗ್ಗಿದ ಮೂವರು ಕಳ್ಳರು ಮಾರಕಾಯುಧಗಳನ್ನು ತೋರಿಸಿ ಮನೆಮಂದಿಗೆ ಹಲ್ಲೆ ನಡೆಸಿದ್ದಾರೆ. ಮಲಗಿದ್ದ ಸಂಜೀವ ದಂಪತಿಯ ಮುಖಕ್ಕೆ ತಲೆದಿಂಬನ್ನು ಒತ್ತಿ ಹಿಡಿದು ಕೂಗಾಡಿದರೆ ಕೊಲ್ಲುವುದಾಗಿ ಬೆದರಿಸಿದ್ದಾರೆ.
ಬಳಿಕ ಮನೆಯನ್ನೆಲ್ಲ ಜಾಲಾಡಿದ ಕಳ್ಳರು ಹವಳದ ಕಂಟಿ, ಲಕ್ಷ್ಮೀ ಪೆಂಡೆಂಟ್ ಸರ, 4 ಬಳೆ ಹಾಗೂ ಉಂಗುರಗಳು ಸೇರಿದಂತೆ ಸುಮಾರು 21 ಪವನ್ ಚಿನ್ನಾಭರಣ ಹಾಗೂ 2:50 ಲಕ್ಷ ರೂ.
ನಗದು ಹಾಗೂ ಬೆಲೆಬಾಳುವ ಮೊಬೈಲ್ ಪೋನ್ಗಳನ್ನು ದರೋಡೆಗೈದು ಪರಾರಿಯಾಗಿದ್ದಾರೆ.
ಕಳ್ಳರು ಕನ್ನಡ ಮತ್ತು ತುಳುವಿನಲ್ಲಿ ಮಾತನಾಡುತ್ತಿದ್ದರು ಎಂದು ಸಂಜೀವ ನಾಯ್ಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳರು ಹಲ್ಲೆ ನಡೆಸಿದ್ದರಿಂದ ಅಸ್ವಸ್ಥರಾಗಿರುವ ಸಂಜೀವ ನಾಯ್ಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೀವ ನಾಯ್ಕೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದರೆ, ಅವರ ಪತ್ನಿ ಬಿಎಸ್ಸೆನ್ನೆಲ್ ಉದ್ಯೋಗಿಯಾಗಿದ್ದು, ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ಬಂಗ್ಲೆಗುಡ್ಡೆ ಜಂಕ್ಷನ್ ನಲ್ಲಿರುವ ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದರು. ಇವರ ಮಗ ಮತ್ತು ಸೊಸೆ ವಿದೇಶದಲ್ಲಿ ನೆಲೆಸಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿಯೇ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಎಎಸ್ಪಿಋಷಿಕೇಶ್ ಸೋನಾವಣೆ, ಕಾರ್ಕಳ ವೃತ್ತ ನೀರಿಕ್ಷಕ ಜಾಯ್ ಅಂತೋನಿ, ನಗರ ಪಿಎಸ್ಸೈ ನಂಜಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!