ಸಂಪಾಜೆ ಕೊಯನಾಡಿನಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕು!
ಸಂಪಾಜೆ ಕೊಯನಾಡಿನಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕು
ಬ್ರೇಕಿಂಗ್ ನ್ಯೂಸ್ , ಕರ್ನಾಟಕ ವರದಿ
ಫೆ : 03- ಶನಿವಾರ,
ಮಡಿಕೇರಿ ತಾಲ್ಲೂಕಿನ ಕೊಯನಾಡು ಭಾಗ ಹಾಗೂ ಸಂಪಾಜೆ, ಸುಳ್ಯ, ಸುಬ್ರಮಣ್ಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳದ ಎರಡು ತಂಡ ಹಾಗೂ ಕೊಡಗು ಪೊಲೀಸರು ಕೂಂಬಿಕ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಫೆ.೨ ರಂದು ರಾತ್ರಿ ವೇಳೆ ಕೊಯನಾಡಿನ ಕೆಲವು ಮನೆಗಳಿಗೆ ಭೇಟಿ ನೀಡಿದ ನಕ್ಸಲರು ನಿವಾಸಿಗಳಲ್ಲಿ ಭಯ ಮೂಡಿಸಿದ್ದರು.
ಹಸಿರು ಬಣ್ಣದ ಮಿಲಿಟಿರಿ ಉಡುಪಿನಲ್ಲಿದ್ದ ಮೂವರು ನಕ್ಸಲರು ಕೊಯನಾಡಿಗೆ ಆಗಮಿಸಿ ಗುಡ್ಡಗದ್ದೆಯ ನಿವಾಸಿಗಳಾದ ಕುಡಿಯರ ಸಂಕಪ್ಪ, ನಾರಾಯಣ, ಕೃಷ್ಣಪ್ಪ, ವನಜಾಕ್ಷಿ ಎಂಬವರ ಮನೆಯಿಂದ ಅಕ್ಕಿ ಮತ್ತಿತರ ಸಾಮಾಗ್ರಿಗಳನ್ನು ಪಡೆದುಕೊಂಡು ಮತ್ತಷ್ಟು ಸಾಮಾಗ್ರಿಗಳು ಬೇಕೆಂದು ಒತ್ತಾಯಿಸಿದ್ದಾರೆ.
ಸಂಕಪ್ಪ ಅವರ ಇಬ್ಬರು ಮಕ್ಕಳಾದ ಚಿದಾನಂದ ಹಾಗೂ ಗಣೇಶ್‌ಗೆ ರೂ.೨ ಸಾವಿರ ನೀಡಿ ಪಕ್ಕದ ಅಂಗಡಿಯಿಂದ ಸಾಮಾಗ್ರಿ ತರುವಂತೆ ತಿಳಿಸಿದ್ದಾರೆ. ಅಲ್ಲದೆ ಸಂಕಪ್ಪ ಹಾಗೂ ತಾಯಿ ಇಂದಿರಾ ಅವರನ್ನು ನಾವು ನೋಡಿಕೊಳ್ಳುತ್ತೇವೆ, ನಾವಿರುವ ಬಗ್ಗೆ ಯಾರಿಗಾದರು ಮಾಹಿತಿ ನೀಡಿದರೆ ತೊಂದರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಭಯಭೀತರಾದ ಸಂಕಪ್ಪ ಅವರ ಇಬ್ಬರು ಮಕ್ಕಳು ಸಂಪಾಜೆಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ತಂದು ಕೊಟ್ಟಿದ್ದಾರೆ. ನಾವು ನಕ್ಸಲರು ಎಂದು ಖುದ್ದು ಪರಿಚಯ ಮಾಡಿಕೊಂಡಿದ್ದ ಮೂವರು ಸಂಕಪ್ಪ ಅವರ ಮನೆಯಲ್ಲೇ ಊಟ ಮಾಡಿ ತೆರಳಿದ್ದಾರೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಕ್ಸಲರು ಗುಡ್ಡ ಹತ್ತಿ ಸುಬ್ರಹ್ಮಣ್ಯ ಅರಣ್ಯ ಪ್ರದೇಶದಲ್ಲಿ ನುಸುಳಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್, ಡಿವೈಎಸ್ಪಿ ಸುಂದರರಾಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ತೆರಳಿ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದ್ದಾರೆ. ಇಂದು ಸ್ಥಳಕ್ಕೆ ನಕ್ಸಲ್ ನಿಗ್ರಹ ದಳದ ಎರಡು ತಂಡ ಆಗಮಿಸಿದ್ದು, ಸಂಪಾಜೆ, ಸುಳ್ಯ, ಸುಬ್ರಮಣ್ಯ ಹಾಗೂ ಕೊಯನಾಡು ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಅಪರಿಚಿತ ವಾಹನಗಳ ತಪಾಸಣೆ ಕೂಡ ಮಾಡಲಾಗುತ್ತಿದ್ದು, ಸಂಪಾಜೆ ಗೇಟ್ ಸೇರಿದಂತೆ ಗಡಿಭಾಗಗಳಲ್ಲಿ ನಿಗಾ ಇಡಲಾಗಿದೆ. ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಿದ್ದ ಮೂವರು ನಕ್ಸಲರು ಸುಬ್ರಮಣ್ಯ ಅರಣ್ಯ ಭಾಗದಲ್ಲಿ ನುಸುಳಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
::: ವಿಕ್ರಂ ಗೌಡನೂ ಇದ್ದನಂತೆ :::
ಮೂವರು ನಕ್ಸಲರಲ್ಲಿ ಪೊಲೀಸರಿಗೆ ಬೇಕಾಗಿರುವ ಉಡುಪಿಯ ವಿಕ್ರಂ ಗೌಡನೂ ಇದ್ದನೆನ್ನುವ ಮಾಹಿತಿ ಲಭಿಸಿದೆ. ಪೊಲೀಸರು ಸಂಕಪ್ಪ ಅವರ ಕುಟುಂಬಕ್ಕೆ ವಿಕ್ರಂ ಗೌಡನ ಫೋಟೋ ತೋರಿಸಿದಾಗ ಆತ ಇದ್ದನೆಂದು ಖಾತ್ರಿ ಪಡಿಸಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರುವ ಕೆಲವರ ಪ್ರಯತ್ನಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಆರೋಪ ವಿಕ್ರಂ ಗೌಡನ ಮೇಲಿದೆ.

Comments
Post a Comment