ಬಹುಭಾಷಾ ನಟಿ ಶ್ರೀದೇವಿ ಇನ್ನಿಲ್ಲ!
ಬಹುಭಾಷಾ ನಟಿ ಶ್ರೀದೇವಿ ಇನ್ನಿಲ್ಲ!
ಫೆ : 25, ಆದಿತ್ಯವಾರ ಬಹುಭಾಷಾ ತಾರೆ ಶ್ರೀದೇವಿ ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಮದುವೆ ಸಮಾರಂಭವೊಂದಕ್ಕೆ ದುಬೈಗೆ ತೆರಳಿದ್ದ ವೇಳೆ ಅಲ್ಲೇ ತೀವ್ರ ಹೃದಯಾಘಾತದಿಂದ ಶ್ರೀದೇವಿ ಮೃತಪಟ್ಟಿದ್ದಾರೆ.
ಹಿಂದಿ ಚಿತ್ರರಂಗದ ಪ್ರಥಮ ಮಹಿಳಾ ಸೂಪರ್ ಸ್ಟಾರ್ ಅನಿಸಿಕೊಂಡಿದ್ದ ಶ್ರೀದೇವಿ ಅವರಿಗೆ 54 ವರ್ಷ ವಯಸ್ಸಾಗಿತ್ತು. ತಮ್ಮ ಅಳಿಯ ಮೋಹಿತ್ ಮರ್ವಾ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಶ್ರೀದೇವಿ ತಮ್ಮ ಪತಿ ಭೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ದುಬೈಗೆ ತೆರಳಿದ್ದರು.
ಚಿತ್ರ ನಿರ್ಮಾಪಕ ಬೋನಿ ಕಪೂರ್‌ರನ್ನು ವಿವಾಹವಾಗಿದ್ದ ಶ್ರೀದೇವಿ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಶ್ರೀದೇವಿ ಅವರ ಅಕಾಲಿಕ ನಿಧನ ಬಾಲಿವುಡ್ ಚಿತ್ರರಂಗವನ್ನು ದಿಗ್ಭಮೆಗೊಳಿಸಿದೆ. ಶ್ರೀದೇವಿ ನಿಧನವನ್ನು ಅವರ ಬಾಮೈದ ಸಂಜಯ್ ಕಪೂರ್ ಖಚಿತಪಡಿಸಿದ್ದಾರೆ.
ಶ್ರೀದೇವಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ನೂರಾರು ಅಭಿಮಾನಿಗಳು ಶ್ರೀದೇವಿ ಅವರ ಮುಂಬೈನಲ್ಲಿರುವ ನಿವಾಸದ ಮುಂದೆ ಜಮಾಯಿಸಿದ್ದಾರೆ.
Comments
Post a Comment