ಉತ್ತರ ಪ್ರದೇಶ: ಭಯೋತ್ಪಾದಕರಿಗೆ ಹಣ ಪೂರೈಸುತ್ತಿದ್ದ ಹಿಂದುತ್ವವಾದಿಗಳ ಬಂಧನ

ಉತ್ತರ ಪ್ರದೇಶ: ಭಯೋತ್ಪಾದಕರಿಗೆ ಹಣ ಪೂರೈಸುತ್ತಿದ್ದ ಇಬ್ಬರ ಬಂಧನ

ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ
ಲಕ್ನೊ, ಫೆಬ್ರವರಿ 05: ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಹಣ ಪೂರೈಸುತ್ತಿದ್ದ ಇಬ್ಬರು ಉತ್ತರ ಪ್ರದೇಶದ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.

ಹವಾಲಾ ಹಣ ಪೂರೈಸುತ್ತಿದ್ದ ಈ ಇಬ್ಬರನ್ನು ದಿನೆಶ್ ಗಾರ್ಗ್ ಮತ್ತು ಆದೇಶ್ ಜೈನ್ ಎಂದುದ ಗುರುತಿಸಲಾಗಿದೆ. ಗಲ್ಫ್ ರಾಷ್ಟ್ರಗಳ ಮೂಲಕ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಹಣ ಪೂರೈಸಲು ಈ ಇಬ್ಬರು ಸಹಾಯ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಇತ್ತೀಚಿಗೆ ಬಂಧಿಸಲಾದ ಲಷ್ಕರ್ ಭಯೋತ್ಪಾದಕ ಮಹ್ಫೂಜ್ ಅಲಾಮ್ ಎಂಬುವವನು ವಿಚಾರಣೆಯ ವೇಳೆ ಈ ವಿಷಯವನ್ನು ಬಾಯ್ಬಿಟ್ಟಿದ್ದಾನೆ.

ದಿನೆಶ್ ಗಾರ್ಗ್ ಇಂದ ಎನ್ ಐಎ ಪೊಲೀಸರು 15 ಲಕ್ಷ ರೂ. ನಗದು, ಪಿಸ್ತೂಲ್, ನೋಟ್ ಕೌಂಟಿಗ್ ಮಶಿನ್, ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆದೇಶೈನ್ ಕಡೆಯಿಂದ 32.84 ಲಕ್ಷ ರೂ.ನಗದು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!