Skip to main content

ಯುಪಿ, ಗುಜರಾತ್ ಇವಿಎಮ್ ಮೆಷಿನ್ ರಾಜ್ಯಕ್ಕೆ ; ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಆರೋಪ! , ದೊಡ್ಡ ಮಟ್ಟದ ಚುನಾವಣಾ ಗೋಲ್ಮಾಲ್ ಗೆ ಬಿಜೆಪಿ ಸಿದ್ಧತೆ ಶಂಕೆ !


ಯುಪಿ, ಗುಜರಾತ್ ಇವಿಎಮ್ ಮೆಷಿನ್ ರಾಜ್ಯಕ್ಕೆ ; ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಆರೋಪ! -


ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ 
ಬೆಂಗಳೂರು:ಫೆ : 26 ,  ಇದೇ ಮೇ ತಿಂಗಳಲ್ಲಿ ನಡೆಯಲ್ಲಿಕ್ಕಿರುವ ರಾಜ್ಯ ಚುನಾವಣೆಗೆ ಪೂರ್ವ ತಯಾರಿಗಾಗಿ ಈಗಾಗಲೇ ಉತ್ತರ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಬಳಸಲಾದ ಸರಿಸುಮಾರು 3,000 ಇವಿಎಮ್ ಮತ ಯಂತ್ರವನ್ನು ರಾಜ್ಯಕ್ಕೆ ತರಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಉತ್ತರ ಪ್ರದೇಶ ಹಾಗೂ ಗುಜರಾತ್‌ ಚುನಾವಣೆಯಲ್ಲಿ ಬಳಸಲಾದ ಇವಿಎಮ್ ಮತ ಯಂತ್ರವನ್ನು ಚುನಾವಣಾ ಆಯೋಗವು ಬೆಂಗಳೂರಿನ ಕಂದಾಯ ಇಲಾಖೆಗೆ ತರಿಸಿದ್ದು ಇದರ ವಿರುದ್ಧ ಇದೀಗ ಸಾರ್ವಜನಿಕ ವಲಯದಲ್ಲಿ ಸಂಶಯಗಳು ವ್ಯಕ್ತ ವಾಗತೊಡಗಿದ್ದು, ಅದಕ್ಕೆ ಮುಖ್ಯ ಕಾರಣ ಉತ್ತರ ಪ್ರದೇಶ ಹಾಗೂ ಗುಜರಾತ್ ಚುನಾವಣಾ ಫಲಿತಾಂಶ ಮತ್ತು ಇವಿಎಮ್ ಮೆಷಿನ್ ಹ್ಯಾಕ್ ಮಾಡಿದ ಆರೋಪ. ಈ ಹಿಂದೆ ಇವಿಎಮ್ ಮೆಷಿನ್ ಹ್ಯಾಕ್ ವಿರುದ್ಧ ಹಲವರು ಧ್ವನಿ ಎತ್ತಿದ್ದರು.
ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಸಾಕಷ್ಟು ಆರೋಪಗಳು ವ್ಯಕ್ತವಾಗಿದ್ದು, ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುತ್ತಿತ್ತು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ನಡೆದಿತ್ತು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ಅದನ್ನು ಅಲ್ಲಗೆಳೆದಿತ್ತು. ಅಂತಹ ಯಾವುದೇ ರೀತಿಯ ಹ್ಯಾಕ್ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಜನರ ಮನಸ್ಸಿನ ಆತಂಕ ದೂರವಾಗಿರಲಿಲ್ಲ.
ನೆರೆಯ ರಾಜ್ಯವಾದ ತಮಿಳುನಾಡು ಹಾಗೂ ಆಂದ್ರ ಪ್ರದೇಶದಲ್ಲಿ ಇವಿಎಮ್ ಮೆಷಿನ್ ಇದ್ದು ಅದನ್ನು ರಾಜ್ಯಕ್ಕೆ ಯಾಕೆ ತರಲಿಲ್ಲ ಮತ್ತು ಉತ್ತರ ಪ್ರದೇಶ ಮತ್ತು ಗುಜರಾತಿನ ಬಳಸಲಾದ ಮೆಷಿನ್ ಯಾಕೆ ರಾಜ್ಯಕ್ಕೆ ತರಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂದು ನೋಡಬೇಕಾಗಿದೆ.
ಇವಿಎಮ್ ಮೆಷಿನ್ ಯಾವ ಕಾರಣಕ್ಕೂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ