ಪುತ್ತೂರು: ಮೂವರು ಭಜರಂಗದಳದ ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ!

ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಪುತ್ತೂರಿನ ಬಜರಂಗದಳದ ಮೂವರು ಖದೀಮರು!


ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಪುತ್ತೂರು, ಫೆ. 17: ಪರಿಶಿಷ್ಟ ಜಾತಿಯ ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಓರ್ವ ಯುವಕ ಹಾಗೂ ಆತನ ಇಬ್ಬರು ಸ್ನೇಹಿತರು ದೈಹಿಕ ಸಂಬಂಧ ಬೆಳೆಸಿದ ಪರಿಣಾಮ ಇದೀಗ ಆಕೆ 8 ತಿಂಗಳ ಗರ್ಭವತಿಯಾಗಿದ್ದು, ಘಟನೆಗೆ ಕಾರಣರಾದ ಆರೋಪಿಗಳ ವಿರುದ್ಧ  ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೂವರ ಪೈಕಿ ಪ್ರಮುಖ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ಥೆಯನ್ನು ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ತೌಡಿಂಜೆಯ 24 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಮುಂಡೂರು ಗ್ರಾಮದ ಕಡ್ಯ ನಿವಾಸಿ  ದಿನೇಶ್ ಗೌಡ ಹಾಗೂ ಆತನ ಸ್ನೇಹಿತರಾದ ಸಂತೋಷ್ ಗೌಡ ಮತ್ತು ಸತೀಶ್ ಶೆಟ್ಟಿ ಆರೋಪಿಗಳು.ಆರೋಪಿಗಳು ಪುತ್ತೂರು ಸುತ್ತಮುತ್ತ ಬಜರಂಗದಳದ ಪುಂಡಾಟಿಕೆಯ ಸೂತ್ರದಾರಿಗಳಾಗಿದ್ದು, ಗೋ ರಕ್ಷಕ ಸಂಘದಲ್ಲಿ ಪ್ರಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ,ಪುತ್ತೂರಿನ ಹಿಂದುತ್ವ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಂಬಾತನ ಬಂಟರಾಗಿದ್ದಾರೆ.

ಯುವತಿಯ ತಂದೆ ಮತ್ತು ತಾಯಿ 10 ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಆಕೆ ತನ್ನ ಸಹೋದರ ಜೊತೆ ವಾಸ್ತವ್ಯವಿದ್ದರು. ಆರೋಪಿಗಳ ಪೈಕಿ ದಿನೇಶ್ ಗೌಡ 2016ರ ಜುಲೈ ತಿಂಗಳಲ್ಲಿ ಯುವತಿಯ ಸ್ನೇಹ ಬೆಳೆಸಿಕೊಂಡು ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ಕಳೆದ ಒಂದೂವರೆ ವರ್ಷದಿಂದ ಅಕ್ರಮ ದೈಹಿಕ ಸಂಬಂಧ ಬೆಳೆಸಿರುವುದಾಗಿ ಆರೋಪಿಸಲಾಗಿದೆ. ಈ ನಡುವೆ ಆತನ ಸ್ನೇಹಿತರಾದ ಸಂತೋಷ್ ಗೌಡ ಮತ್ತು ಸತೀಶ್ ಶೆಟ್ಟಿ ಎಂಬವರು ಕೂಡ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಯುವತಿ  ಗರ್ಭವತಿಯಾದ ಹಿನ್ನೆಲೆಯಲ್ಲಿ ಆರೋಪಿಗಳು ಕಳೆದ ನವಂಬರ್ ತಿಂಗಳಲ್ಲಿ ಆಕೆಯನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಲು ಪ್ರಯತ್ನಿಸಿದ್ದರೂ ಅಲ್ಲಿ ವೈದ್ಯರು ಸಿಗದ ಕಾರಣದಿಂದ ಅವರ ಪ್ರಯತ್ನ ವಿಫಲವಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಯುವತಿ  8 ತಿಂಗಳ ಗರ್ಭವತಿಯಾಗಿದ್ದಾರೆ.

ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಆರೋಪಿಗಳ ಪೈಕಿ ದಿನೇಶ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಅವರಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

 ನ್ಯಾಯಕ್ಕಾಗಿ ಆಗ್ರಹ- ಪ್ರತಿಭಟನೆಯ ಎಚ್ಚರಿಕೆ

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರ ಸಂಜೆ ಸಂಪ್ಯ ಠಾಣೆಯ ಮುಂದೆ ಜಮಾಯಿಸಿ ಯುವತಿಗೆ ನ್ಯಾಯ ಒದಗಿಸಿ ಕೊಡುವಂತೆ ಪೊಲೀಸರನ್ನು ಆಗ್ರಹಿಸಿದರು, ನ್ಯಾಯ ಸಿಗದಿದ್ದಲ್ಲಿ ಉಗ್ರ ಹೋರಾಟಕ್ಕೆ ಇಳಿಯುವ ಎಚ್ಚರಿಕೆಯನ್ನು ಈ ಸಂಘಟನೆಗಳ ಮುಖಂಡರು ನೀಡಿದ್ದಾರೆ.

ದಲಿತ್ ಸೇವಾ ಸಮಿತಿಯ ಪುತ್ತೂರು ತಾಲ್ಲೂಕು ಅಧ್ಯಕ್ಷ ರಾಜು ಹೊಸ್ಮಠ, ಉಪಾಧ್ಯಕ್ಷ ಮನೋಹರ್ ಕೋಡಿಜಾಲು, ತಾಲ್ಲೂಕು ಕಾರ್ಯದರ್ಶಿ ಸುಮಿತ್ರಾ ಪುರುಷರಕಟ್ಟೆ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಉದಯ ಕುಮಾರ್ ಎರಕ್ಕಲ, ತಾಲ್ಲೂಕು ಸಂಚಾಲಕ ಗಣೇಶ್ ಕಾರೆಕ್ಕಾಡ್, ತಾಲ್ಲೂಕು ಸಂಘಟನಾ ಸಂಚಾಲಕ ನಿಶಾಂತ್ ಮುಂಡೋಡಿ, ದಲಿತ್ ಸೇವಾ ಸಮಿತಿಯ ಪ್ರಮುಖರಾದ ಶಾಂತಪ್ಪ ಭಕ್ತಕ್ಕೋಡಿ, ರಮೇಶ್ ಭಕ್ತಕ್ಕೋಡಿ, ಉಮೇಶ್ ಭಕ್ತಕ್ಕೋಡಿ, ರವಿ ಮಡಿಕೇರಿ, ಸುರೇಶ್ ಪುರುಷರಕಟ್ಟೆ , ಅಂಬೆಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡ ಗಿರಿಧರ್ ನಾಯಕ್ ಮತ್ತಿತರರು ಠಾಣೆಯ ಮುಂದೆ ಜಮಾಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು. 

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ