ಲೆಕ್ಕ ಕೇಳಿದ ಪ್ರಧಾನಿ ವಿರುಧ್ದ ಟೀಕೆ ಮಾಡಿದ ಪರಂ ! ಇದರಿಂದ ಕೆರಳಿದ ಬಿಜೆಪಿ ಆಯಿತು ಗರಂ !

ಲೆಕ್ಕ ಕೇಳಿದ ಪ್ರಧಾನಿ ವಿರುಧ್ದ ಟೀಕೆ ಮಾಡಿದ ಪರಂ ! ಇದರಿಂದ ಕೆರಳಿದ ಬಿಜೆಪಿ ಆಯಿತು ಗರಂ ! 

ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ
ಬೆಂಗಳೂರು , ಫೆ : 05 , ಕೇಂದ್ರ ಸರ್ಕಾರ, ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಲೆಕ್ಕ ಕೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ವಿರುದ್ಧ ಗರಂ ಆಗಿರುವ ಬಿಜೆಪಿ ನಾಯಕರು, ಪ್ರಧಾನಿ ಅವರು ಲೆಕ್ಕ ಕೇಳದೆ ಇನ್ಯಾರು ಕೇಳಬೇಕು? ಎಂದು ಪ್ರಶ್ನಿಸಿದ್ದಾರೆ.

ಸ್ವಚ್ಛ ಭಾರತ, ಕುಡಿಯುವ ನೀರು ಸೇರಿದಂತೆ, ಹಲವು ಯೋಜನೆಗಳಿಗೆ ಸುಮಾರು 3,500 ಕೋಟಿ ರೂ.ಗೂ ಹೆಚ್ಚು ಹಣ ಈಗಾಗಲೇ ಬಿಡುಗಡೆಯಾಗಿದೆ. ತೆರಿಗೆ ಹಣ ಲೋಪವಾದರೆ, ಸಾಮಾನ್ಯ ಜನರು ಚುನಾಯಿತ ಪ್ರತಿನಿಧಿಗಳಿಗೂ ಕೇಳುವ ಹಕ್ಕು ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಾಂಖ್ಯಿಕ ಯೋಜನೆಗಳ ಸಚಿವ ಸದಾನಂದ ಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ರೈಲ್ವೆ ಯೋಜನೆಗಳಿಗೆ ಶೇ. 50:50 ಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲನ್ನು ನಿರ್ಧರಿಸಿ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಆದರೂ ರಾಜ್ಯದ ಜನರ ಹಿತಾಸಕ್ತಿಯಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ, ಶೇ. 10 ರಷ್ಟು ಕಮಿಷನ್ ಅಲ್ಲ, ಅದು ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಶೇ. 30 ರಷ್ಟಕ್ಕೆ ತಲುಪುತ್ತದೆ ಎಂದರು.ಸಾಲ ಮನ್ನಾ ಮಾಡಬೇಕು ಎಂದು ಪದೇ ಪದೇ ಕೇಂದ್ರ ಸರ್ಕಾರವನ್ನು ಗೋಗರೆಯುತ್ತಾರೆ.

ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಈಗಾಗಲೇ ರಾಷ್ಟ್ರೀಯ ಬ್ಯಾಂಕ್‌ಗಳಿಂದ ರೈತರು ಪಡೆದ ಸಾಲವನ್ನು ಮನ್ನಾ ಮಾಡಿವೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಿತುಕೊಳ್ಳಬೇಕು ಎಂದರು.

ಮಹದಾಯಿ ನದಿ ನೀರು ಅಂತಾರಾಜ್ಯ ವಿಷಯಕ್ಕೆ ಸಂಬಂಧಪಟ್ಟದ್ದು, ಇದು 2 – 3 ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ. ಪ್ರಧಾನಿ ನರೇಂದ್ರ ಮೋದಿ ಅವರು, ಈ ವಿಷಯವನ್ನು ಪ್ರಸ್ತಾಪಿಸಿಲ್ಲ ಎಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ. ಪ್ರಧಾನಿ ನಗರಕ್ಕೆ ಬಂದಿದ್ದು ಪಕ್ಷದ ರಾಜಕೀಯ ಸಮಾವೇಶಕ್ಕೆ ಎಂಬುದನ್ನು ಟೀಕಾಕಾರರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಮಹದಾಯಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವಾಗ ಕೆಲವರು ಅಡ್ಡಗಾಲು ಹಾಕಿದರು ಎಂದು ಆರೋಪಿಸಿದರು.ಕೇಂದ್ರ ಸರ್ಕಾರ 3.6 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಸೂಚಿಸಿತ್ತು. ಆದರೆ ಕಟ್ಟಿದ್ದು, ಕೇವಲ 36 ಸಾವಿರ. ಉಳಿದದ್ದು ಏನಾಯಿತು? ಎಂದು ಪ್ರಶ್ನಿಸಿದ ಸದಾನಂದಗೌಡರು, ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರಬಾರದು ಎಂದು ಪರಮೇಶ್ವರ್ ಅವರಿಗೆ ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳ ಬಗ್ಗೆ ಟೀಕೆಗಳನ್ನು ಮಾಡುವ ಬದಲು ರಾಜ್ಯವನ್ನು ಅಭಿವೃದ್ಧಿ ದೃಷ್ಟಿಯತ್ತ ಕೊಂಡೊಯ್ಯುವ ಬಗ್ಗೆ ಆಲೋಚಿಸಬೇಕು. ಆಧಾರ ರಹಿತ ಅಂಕಿ ಅಂಶಗಳನ್ನಿಟ್ಟುಕೊಂಡು ಕಾಲಹರಣ ಮಾಡಬಾರದು ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸದಾಗಿ ಕರ್ನಾಟಕ ನಂ. 1 ಎಂಬ ದೊಡ್ಡ ಬ್ಯಾನರ್‌ಗಳನ್ನು ಹಾಕಿಕೊಂಡು ಬೀಗುತ್ತಿದ್ದಾರೆ.

2013-14 ರಿಂದ 2017-18ರವರೆಗೆ 3 ಲಕ್ಷದ 5 ಸಾವಿರದ 113 ರೂ. ಗಳನ್ನು ಬಂಡವಾಳ ಹೂಡಿಕೆ ಸಂಗ್ರಹಿಸಬೇಕಿತ್ತು. ಆದರೆ ಎಷ್ಟು ಬಂಡವಾಳ ಹೂಡಿಕೆಯಾಗಿದೆ ಎಂಬುದನ್ನು ಅಂಕಿ ಅಂಶಗಳಲ್ಲೇ ನೋಡಿಕೊಳ್ಳಲಿ ಎಂದರು.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಪರಮೇಶ್ವರ್ ಅವರು ಸಜ್ಜನರು. ಸಾಯುವಾಗ ಸಸ್ಯಹಾರಿ ತಿಂದು ಸಜ್ಜನನೂ ಸತ್ತನಂತೆ ಎಂಬಂತಹ ಪರಿಸ್ಥಿತಿ ಅವರದ್ದು ಎಂದು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಷ್ಟಾಚಾರದಂತೆ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಮಾಡುವ ಶಿಷ್ಟಾಚಾರವನ್ನು ತೋರಲಿಲ್ಲ ಎಂದು ಸದಾನಂದ ಗೌಡ ಟೀಕಿಸಿದರು.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ