ಮೋದಿಯವರೇ ಅಭಿವೃದ್ಧಿಯನ್ನು ಸಿದ್ದರಾಮಯ್ಯರವರಿಂದ ನೋಡಿ ಕಲಿಯಿರಿ - ರಾಹುಲ್ ಗಾಂಧಿ
ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಗೆ ಚಾಲನೆ!
ಮೋದಿಯವರೇ ಸಿದ್ದರಾಮಯ್ಯರನ್ನು ನೋಡಿ ಕಲಿತುಕೊಳ್ಳಿ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ
ಬ್ರೇಕಿಂಗ್ ನ್ಯೂಸ್ ಮಂಗಳೂರು, ವರದಿ
ಬಳ್ಳಾರಿ, ಫೆ.10:ಇಲ್ಲಿನ ಹೊಸಪೇಟೆಯ ಮುನ್ಸಿಪಾಲ್ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಐತಿಹಾಸಿಕ ಸಮಾವೇಶದಲ್ಲಿ ಜನಾಶೀರ್ವಾದ ಯಾತ್ರೆ ಗೆ ಚಾಲನೆ ನೀಡಿದರು.
*"ಎಲ್ಲರಿಗೂ ನಮಸ್ಕಾರ"*
ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಸತ್ಯದ ಪರವಾಗಿದೆ. ಕಾಂಗ್ರೆಸ್ ಪಕ್ಷ ನುಡಿಯುದಂತೆ ನಡೆಯುತ್ತದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಮೋದಿ ಅವರು ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದಿಲ್ಲ. ಅವರ ಉದ್ಯೋಗ ಸೃಷ್ಟಿ ಯೋಜನೆ ಸುಳ್ಳಾಗಿದೆ. ದೇಶವನ್ನು ಸರಿಯಾಗಿ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಹಿಂದೆ ನೋಡಿಕೊಂಡು ಅವರು ಗಾಡಿ ಓಡಿಸುತ್ತಿದ್ದಾರೆ ಎಂದು ಆರೋಪಿಸಿದರು.
*ಮೋದಿಯವರೇ ನೀವು ಸಿದ್ದರಾಮಯ್ಯ ಅವರ ಬಳಿ ಬಂದು ಪಾಠ ಕಲಿಯಿರಿ.*
ಅವರು ಯಾವ ರೀತಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎನ್ನುವುದನ್ನು ತಿಳಿಯಿರಿ ಎಂದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹೊಸಪೇಟೆಯಲ್ಲಿ ಯಾವುದೇ ಪಕ್ಷದ ಸಮಾವೇಶ ಈ ರೀತಿ ನಡೆದಿರಲಿಲ್ಲ. ಹಂಪಿ ವಿಜಯ ನಗರ ಅರಸರ ರಾಜಧಾನಿಯಾಗಿತ್ತು. ಆಹೊತ್ತು ಆಳಿದ್ದ ರಾಜರುಗಳು ಇತಿಹಾಸದಲ್ಲಿ ನೆನಪು ಮಾಡುವ ಆಡಳಿತ ಕೊಟ್ಟಿದ್ದರು. ಅದೇ ರೀತಿ ಜನ ನೆನಪಿಸುವ ಆಡಳಿತವನ್ನು ನಾವು ನೀಡಿದ್ದೇವೆ. ಎಲ್ಲ ಬಡವರಿಗೂ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ. ನವ ಕರ್ನಾಟಕ ನಿರ್ಮಿಸಲು ಮರಳಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿಯವರೆ ನೀವು ದೇಶದ ಪ್ರಧಾನಿಯಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಿರಿ. ನಿಮ್ಮನ್ನು ಜನ ನಂಬುವುದಿಲ್ಲ.
*ಕರ್ನಾಟದ ಜನ ನಮ್ಮ ಸರಕಾರವನ್ನು ಮೆಚ್ಚಿಕೊಂಡಿದ್ದಾರೆ.*
ಸರಕಾರದ ವಿರೋಧಿ ಅಲೆ ಎಲ್ಲಿಯೂ ಇಲ್ಲ. ಜನ ಮತ್ತೆ ಕಾಂಗ್ರೆಸ್ ಸರಕಾರವನ್ನು ಬಯಸಿದ್ದಾರೆ. ಬಿಜೆಪಿ ಮನುಷ್ಯತ್ವ ಇಲ್ಲದ ಪಕ್ಷ . ಆ ಪಕ್ಷ ಯಾವತ್ತೂ ಅಧಿಕಾರಕ್ಕೆ ಬರಬಾರದು. ಇದಕ್ಕಾಗಿ ಬಳ್ಳಾರಿ, ಕರ್ನಾಟದ ಜನ ಸಂಕಲ್ಪ ಮಾಡಬೇಕು ಎಂದರು.
ಸಮಾವೇಶದಲ್ಲಿ ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ ಅವರು ಕರ್ನಾಟಕದಲ್ಲಿ ನುಡಿದಂತೆ ಕಾಂಗ್ರೆಸ್ ನಡೆದಿದೆ. ಸ್ವಚ್ಛ, ಸಮರ್ಥ ನಾಯಕತ್ವ ನೀಡಲಾಗಿದೆ. ಬಡವರನ್ನು ಮೇಲೆಕ್ಕೆತ್ತುವ ಪ್ರಯತ್ನ ಮಾಡಲಾಗಿದೆ ಎಂದರು.
ನಾವು ಏನು ಮಾಡದಿದ್ದರೆ ನಿಮಗೆ ಪ್ರಧಾನಿಯಾಗಲು ಸಾಧ್ಯವಿರಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

Comments
Post a Comment