ಮಹಾರಾಷ್ಟ್ರಾ ವಿಧಾನ ಸಭಾ ಚುನಾವಣೆ ಹಾಗೂ 2019 ರ ಲೋಕ ಸಭಾ ಚುನಾವಣೆ : ಕಾಂಗ್ರೆಸ್ – ಎನ್.ಸಿ.ಪಿ ಮೈತ್ರಿ!



ಮಹಾರಾಷ್ಟ್ರಾ ವಿಧಾನ ಸಭಾ ಚುನಾವಣೆ ಹಾಗೂ 2019 ರ ಲೋಕ ಸಭಾ ಚುನಾವಣೆ : ಕಾಂಗ್ರೆಸ್ – ಎನ್.ಸಿ.ಪಿ ಮೈತ್ರಿ! February 7, 2018





ಮುಂಬೈ [ ಬ್ರೇಕಿಂಗ್ ನ್ಯೂಸ್ ಮಂಗಳೂರು ]  ಫೆ: 07, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ ಮೈತ್ರಿಯಾಗಿ ಸ್ಪರ್ಧಿಸಲಿದೆ. ಮಹಾರಾಷ್ಟ್ರಾ ವಿಧಾನ ಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ ಎಂದು ಎನ್.ಸಿ.ಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಕೇರಳದಲ್ಲಿ ಎನ್.ಸಿ.ಪಿ ಎಡರಂಗದೊಂದಿಗಿರುವ ಮೈತ್ರಿ ಮುಂದುವರಿಯಲಿದೆಯೆಂದು ಪಕ್ಷ ಹೇಳಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತ್ರತ್ವದಲ್ಲಿ ಕಾಂಗ್ರೆಸ್ ಬಿ.ಜೆ.ಪಿ ವಿರುದ್ಧ ವಿಪಕ್ಷಗಳ ಜೊತೆ ಹೊಂದಾಣಿಕೆ ಮಾಡುವುದಕ್ಕೆ ಎನ್.ಸಿ.ಪಿ ಜೊತೆಗಿನ ಮೈತ್ರಿ ಗುಣವಾಗಲಿದೆಯೆಂಬ ವಿಶ್ವಾಸದಲ್ಲಿದೆ ಕಾಂಗ್ರೆಸ್.
2016 ಸೆಪ್ಟಂಬರ್ 26ರಂದು ಎನ್.ಸಿ.ಪಿ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಬ್ರೇಕ್ ಹಾಕಿತ್ತು. ಮಹಾರಾಷ್ಟ್ರಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ ಬೇರೆ ಬೇರೆ ಸ್ಪರ್ಧಿಸಿದ್ದವು. ಇದಲ್ಲದೆ ಬಿ.ಜೆ.ಪಿ ಯನ್ನು ಎನ್.ಸಿ.ಪಿ ಬೆಂಬಲಿಸಿದ್ದವು.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ