ನಾನು ಸನ್ಯಾಸಿ ಏನಲ್ಲ, ಹೈಕಮಾಂಡ್, ಶಾಸಕರು ಹೇಳಿದರೆ ಮುಖ್ಯಮಂತ್ರಿ ಆಗುತ್ತೇನೆ: ಜಿ. ಪರಮೇಶ್ವರ್!
ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ
ಫೆ: 03 , ಶನಿವಾರ.
🎯ನಾನು ಸನ್ಯಾಸಿ ಏನಲ್ಲ, ಹೈಕಮಾಂಡ್, ಶಾಸಕರು ಹೇಳಿದರೆ ಮುಖ್ಯಮಂತ್ರಿ ಆಗುತ್ತೇನೆ: ಜಿ. ಪರಮೇಶ್ವರ್!
ಬೆಳಗಾವಿ: ‘ನಾನೇನು ಸನ್ಯಾಸಿ ಅಲ್ಲ’ ಎಂದು ಹೇಳುವ ಮೂಲಕ ಮಾಜಿ ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ರಾಜ್ಯದ ಮುಖ್ಯಮಂತ್ರಿ ಆಗಬೇಕೆನ್ನುವ ಆಕಾಂಕ್ಷೆಯನ್ನು ಮತ್ತೆ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ ಪರಮೇಶ್ವರ್, ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಯಾರು ಬೇಕಾದರೂ ಆಕಾಂಕ್ಷಿ ಎಂದು ಓಡಾಡಬಹುದು. ಆದರೆ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ಎಂದು ಹೇಳಿದರು.
ನಾನು ಈಗ ಪಕ್ಷದ ರಾಜ್ಯಾಧ್ಯಕ್ಷನಾಗಿ ಪಕ್ಷದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಇನ್ನು ಪಕ್ಷ ಚುನಾವಣೆಯಲ್ಲಿ ಬಹುಮತದ ಮೂಲಕ ಅಧಿಕಾರಕ್ಕೆ ತರುವುದು ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ನಾಯಕರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
Comments
Post a Comment