ಫೆಬ್ರವರಿ 19 ರಂದು ಪುಚ್ಚಮೊಗರಿನಲ್ಲಿ ಬೃಹತ್ ವಾರ್ಷಿಕ "ಸ್ವಲಾತ್ ಮಜ್ಲಿಸ್" !

ಫೆಬ್ರವರಿ 19 ರಂದು ಪುಚ್ಚಮೊಗರಿನಲ್ಲಿ ಬೃಹತ್ ವಾರ್ಷಿಕ "ಸ್ವಲಾತ್ ಮಜ್ಲಿಸ್" !

ವರದಿ : ನೌಫಲ್ , ಪುಚ್ಚಮೊಗರು.
ಸಂಪಾದಕರು : ಬ್ರೇಕಿಂಗ್ ನ್ಯೂಸ್, ಕರ್ನಾಟಕ

ಧಾರ್ಮಿಕ ವಿಷಯದಲ್ಲಿ ಮುಂಚೂಣಿಯಲ್ಲಿರುವ ಪುಚ್ಚಮೊಗರು ಜಮಾಅತ್ಗರಿಗೆ ಫೆಬ್ರವರಿ ತಿಂಗಳು ಬಹಳ ಪ್ರಧಾನ್ಯವಾದ ತಿಂಗಳು , ಯಾಕೆಂದರೆ ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲಿ ಊರಿನ ಹಿರಿಯ ಧಾರ್ಮಿಕ ಮುಂದಾಳುಗಳು ಸೇರಿ ಮಾಡಿದಂತಹ "ಸ್ವಲಾತ್ ಮಜ್ಲಿಸ್ " ಇಂದು ಬಡವರ ಪಾಲಿನ ಆಶಾಕಿರಣವಾಗಿದೆ. ಇಲ್ಲಿ ಪ್ರತೀ ತಿಂಗಳಿಗೊಮ್ಮೆ ಸ್ವಲಾತ್ ನಡೆಯಲಿದ್ದು , ಅದರಲ್ಲಿ  ಕಷ್ಟಕಾರ್ಪಣ್ಯ ಇರುವ , ಅನಾರೋಗ್ಯದಿಂದ ಇರುವ , ವ್ಯಾಪಾರದಲ್ಲಿ ನಷ್ಟ ಹೊಂದಿದ ಹಾಗೂ ಇನ್ನಿತರ ಅನೇಕ ಜನರು ಇಲ್ಲಿನ "ಸ್ವಲಾತ್ ಮಜ್ಲಿಸ್ " ನ ಸಹಾಯದಿಂದ ಅವರ ಕಷ್ಟದಿಂದ  ಮುಕ್ತಿ ಹೊಂದಿದ್ದಾರೆ ,  ಹಾಗಾಗಿ ಇಲ್ಲಿನ "ಸ್ವಲಾತ್ ಮಜ್ಲಿಸ್" ಗೆ ಅದರದ್ದೇ ಆದ ವಿಷೇಶತೆ ಇದೆ , ಹಾಗಾಗಿ ಈ ಬಾರಿಯ ವಾರ್ಷಿಕ " ಸ್ವಲಾತ್ ಮಜ್ಲಿಸ್ " ನ ನೇತೃತ್ವವನ್ನು ಬಹು | ಅಸ್ಸಯ್ಯದ್ , ಶಿಹಾಬುದ್ದೀನ್ ಅಲ್ ಹೈದ್ರೋಸಿ ತಞಳ್ (ಕಿಲ್ಲೂರು ತಞಳ್ ) ರವರು ನೆರವೇರಿಸಲಿದ್ದಾರೆ.
ಹಾಗೆಯೇ ಫೆಬ್ರವರಿ 17, 18 ಕ್ಕೆ  ವಿವಿಧ ವಿಧ್ವಾಂಸರಿಂದ ಧಾರ್ಮಿಕ ಮತಪ್ರವಚನ ಹಾಗೂ 19 ಕ್ಕೆ ಬೃಹತ್ ಸ್ವಲಾತ್ ಮಜ್ಲಿಸ್ ಪುಚ್ಚಮೊಗರಿನ ಮಸ್ಜಿದುಲ್ ಹುದಾ ಮಸೀದಿ ವಠಾರದಲ್ಲಿ ನಡೆಯಲಿದೆ , ದೀನೀ ಪ್ರೇಮಿಗಳಾದ ತಾವೆಲ್ಲರೂ ಈ ಬೃಹತ್ " ಸ್ವಲಾತ್ ಮಜ್ಲಿಸ್ " ಗೆ ಆಗಮಿಸಿ ,ಈ ಮಹತ್ತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ .

ವಿ.ಸೂ : ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನವಿದೆ
           : ಸ್ತ್ರೀ ಯರಿಗೆ ಪ್ರತ್ಯೇಕ ಸ್ಥಳದ ಅವಕಾಶವಿದೆ! 

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ