ಐಸಿಸ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಕ್ಕಳ ಮಧ್ಯೆ, ಉಳಿದ ಮಗುವೊಂದು ಕೈ ಎತ್ತಿ ಆಹಾರ ತೋರಿಸಿದ್ದು ಯಾರಿಗೆ ಗೊತ್ತಾ?

ಐಸಿಸ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಕ್ಕಳ ಮಧ್ಯೆ, ಉಳಿದ ಮಗುವೊಂದು ಕೈ ಎತ್ತಿ ಆಹಾರ ತೋರಿಸಿದ್ದು ಯಾರಿಗೆ ಗೊತ್ತಾ?

ಬ್ರೇಕಿಂಗ್ ನ್ಯೂಸ್, ಕರ್ನಾಟಕ 
ಫೆ, 2 ಶುಕ್ರವಾರ.
ಸಿರಿಯಾ ಎಂದರೆ ಹಾಗೆಯೇ ಅಲ್ಲಿ ದಿನಬೆಳಗಾಗೋದು ಬಾಂಬ್, ಗುಂಡು ಫೈರಿಂಗ್ ಸದ್ದಿನೊಂದಿಗೆ. ನೆಮ್ಮದಿಯಿಂದ ಬದುಕಲು ಅಲ್ಲಿ ಅಷ್ಟು ಸುಲಭವಿಲ್ಲ. ದಿನಬೆಳಗಾದರೆ ಭಯೋತ್ಪಾದಕರ ಅಟ್ಟಹಾಸಕ್ಕೆ ಮಕ್ಕಳು ಮರಿಯೆನ್ನದೆ ಪ್ರಾಣಾರ್ಪಣೆ ಮಾಡಲೇಬೇಕು.*

ಇಲ್ಲಿ ಕೊಡಲಾದ ಎರಡು ಚಿತ್ರಗಳನ್ನು ಗಮನಿಸಿಬಹುದು‌. ಮಗುವೊಂದು ಆಹಾರದ ತುಂಡನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡರೆ ಇನ್ನೊಂದು ಚಿತ್ರದಲ್ಲಿ ಮಗು ಎರಡು ಕೈಯನ್ನು ಮೇಲಕ್ಕೆತ್ತಿ ಹಿಡಿದಿರುವುದು.

ಈ ಎರಡೂ ಚಿತ್ರಗಳು ಕಳೆದ ಒಂದೆರಡು ವರ್ಷಗಳಿಂದ ಸಾಮಾಜಿಕ ಮಾಧ್ಯಮದ ಮೂಲಕ ವೈರಲ್ ಅಗಿದೆ.‌ ದಿನನಿತ್ಯ ಬಾಂಬ್ ದಾಳಿ ನಡೆಯುತ್ತಿರುವ ದೇಶದಲ್ಲಿ, ಮಕ್ಕಳಿಗೂ ಅರ್ಥವಾಗದೆ ಅವರ ಭಾವನೆಯಲ್ಲಿ ತಿನ್ನುವ ಅನ್ನಕ್ಕಾಗಿ ಜನರನ್ನಿಲ್ಲಿ ಕೊಲ್ಲುತ್ತಿದ್ದಾರೆ ಎಂದಿತ್ತೇನೋ?! ಭಯೋತ್ಪಾದಕ ತೋರಿಸಿದ ಗನ್‌ಗೆ ಏನು ಅರಿಯದ ಮುಗ್ಧ ಮಗುವೊಂದು ಆಹಾರದ ತುಂಡೊಂದನ್ನು ಹಿಡಿದು ಅವರತ್ತ ತೋರಿಸುತ್ತಿರುವುದು ಎಂಥ ಕಲ್ಲು ಮನಸ್ಸನ್ನು ಕರಗಿಸಬಹುದು.

ಮತ್ತೊಂದು ಚಿತ್ರದಲ್ಲಿ ಪೋಟೊಗ್ರಾಪರ್ ಒಬ್ಬ ಕ್ಯಾಮರಾ ಹಿಡಿದಾಗ ಆ ಮಗು ತನ್ನೆರಡು ಕೈಯನ್ನು ಮೇಲಕ್ಕೆತ್ತಿದೆ. ತನ್ನೂರಿನಲ್ಲಿ ಗನ್‌ಗಳನ್ನು ಹಿಡಿದು ಬರುವ ಭಯೋತ್ಪಾದಕರ ಮುಂದೆ ಕೈ ಮೇಲಕ್ಕೆತ್ತಿ ಅಭ್ಯಾಸವಿರುವ ಮಗುವಿಗೆ ಕ್ಯಾಮರಾ ಕೂಡಾ ಗನ್ನಿನಂತೆ ಕಂಡಿದೆ.

ಸಾವಿರಾರು ಮಕ್ಕಳು ಲೆಬನಾನ್, ಸಿರಿಯಾ ಹಾಗೂ ಪ್ಯಾಲೆಸ್ತೀನ್ ಮಣ್ಣಿನಲ್ಲಿ ಶಹೀದ್ ಆಗಿರುವುದನ್ನು ನಾವಿಲ್ಲಿ ಸ್ಮರಿಸಬಹುದು.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ