ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ ! ಬ್ರೇಕಿಂಗ್ ನ್ಯೂಸ್ ಮಂಗಳೂರು , ಮಾ 07, ಮುಂದಿನ ವಿಧಾನಸಭಾ ಚುನಾವಣೆಗೆ , ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಇನ್ನಿತರ ಪಕ್ಷಗಳು ಮತದಾರರನ್ನು ಇನ್ನಿತರ ಆಮಿಷಗಳನ್ನು ಒಡ್ಡಿ ಚುನಾವಣೆಗೆ ತಯಾರಾಗುತ್ತಿದ್ದಂತೆಯೇ , ಬಿಜೆಪಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ , ತನ್ನ ನಕಲಿ ಹಿಂದುತ್ವ ಸಿದ್ದಾಂತವನ್ನು ಚುನಾವಣೆಗೆ ಬಳಸಿಕೊಳ್ಳುವ ಮುಖಾಂತರ ತನ್ನ ಕಪಟ ರಾಜಕೀಯ ಶುರು ಮಾಡಿದೆ . ನಿನ್ನೆ ತಾನೆ ಬಿಜೆಪಿಯ ಜನಸುರಕ್ಷಾ ಯಾತ್ರೆಯಲ್ಲಿ ಬಿಜೆಪಿಯ ಭ್ರಷ್ಟ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಭಾಷಣ ಮಾಡುತ್ತಾ " ನಾವು ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದಾರೆ . ಚುನಾವಣೆಗೆ ಹೋಗಲು ಬೇರೆ ಯಾವ ಅಸ್ತ್ರವೂ ಕಾಣದಿದ್ದಾಗ ಹಿಂದೂಗಳ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ರಾಜ್ಯದ ಬಿಜೆಪಿ ನಾಯಕರು . ಈ ಯಡಿಯೂರಪ್ಪ ನಿಗೆ ಹೀಗೂ ಹೇಳಬಹುದಿತ್ತು ! ಭಾಷಣದಲ್ಲಿ ಕೇವಲ ಹಿಂದೂಗಳ ಕೇಸು ಮಾತ್ರ ಹಿಂಪಡೆಯುತ್ತೇವೆ ಅಂದದ್ದು , ಅದೊಂದು ಸಂವಿಧಾನದ ಕಗ್ಗೊಲೆಯಾಗಿದೆ , ಅದರ ಬದಲಾಗಿ "ಅಮಾಯಕರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಲಾಗುವುದು" ಎಂಬ ಹೇಳಿಕೆ ಕೊಡಬಹುದಿತ್ತು ! ಆದರೆ ಬಿಜೆಪಿಗೆ ಸೌಹಾರ್ದ ಕರ್ನಾಟಕ ಬೇಕಾಗಿಲ್ಲ , ಅ...
Comments
Post a Comment