ಜಿಯೋ - ಏರ್ಟೆಲ್ ಸೇರಿದಂತೆ ಇನ್ನಿತರ ದೂರಸಂಪರ್ಕ ನೆಟ್ವರ್ಕ್ಗಳನ್ನು ಮಣ್ಣುಮುಕ್ಕಿಸಲಿದೆ ಈ ಚಾಟ್ ಸಿಮ್ -2 ?

ಮುಗಿತು ಜಿಯೋ-ಏರ್ಟೆಲ್ ಕಥೆ: ಬರುತ್ತಿದೆ ಚಾಟ್ ಸಿಮ್ 2, ಡೇಟಾ, ಕರೆಗೆ ಮಿತಿ ಇಲ್ಲ, ಫುಲ್ Free..!*


ಬ್ರೇಕಿಂಗ್ ನ್ಯೂಸ್ ಮಂಗಳೂರು ವಿಷೇಶ ವರದಿ
ದೆಹಲಿ : ಫೆ :26, ಇದು ಎರಡನೇ ತಲೆ ಮಾರಿನ ಚಾಟ್ ಸಿಮ್ ಆಗಲಿದ್ದು, ಇದು ಬಳಕೆದಾರರಿಗೆ ವಾರ್ಷಿಕ ಪ್ಲಾನ್‌ಗಳನ್ನು ನೀಡಲಿದ್ದು, ಬಳಕೆದಾರರಿಗೆ ಯಾವುದೇ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮಿತಿಯನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ದೇಶದಲ್ಲಿ ಒಂದು GB ಡೇಟಾ ಸಲುತ್ತಿಲ್ಲ ಎನ್ನುವವರಿಗೆ ಇದು ಸರಿಯಾದ ಪರಿಹಾರವಾಗಿದೆ.*

ದೇಶದಲ್ಲಿ ಜಿಯೋ ಉಚಿತ ಸೇವೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿಯೇ ಮೂಗಿನ ಮೇಲೆ ಬೆರಳು ಇಟ್ಟವರು ಹಲವು ಮಂದಿ, ಆದರೆ ಜಿಯೋವನ್ನು ಮೀರಿಸುವ ಸೇವೆಯೊಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಲಾಂಚ್ ಆಗಲಿದೆ ಎನ್ನಾಗಿದೆ.

ಈಗಾಗಲೇ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ ಚಾಟ್ ಸಿಮ್ ತನ್ನ ಮುಂದಿನ ತಲೆ ಮಾರಿನ ಚಾಟ್ ಸಿಮ್ 2 ಬಿಡುಗಡೆ ಮಾಡಲು ಮುಂದಾಗಿದೆ.

ಇದು ಎರಡನೇ ತಲೆ ಮಾರಿನ ಚಾಟ್ ಸಿಮ್ ಆಗಲಿದ್ದು, ಇದು ಬಳಕೆದಾರರಿಗೆ ವಾರ್ಷಿಕ ಪ್ಲಾನ್‌ಗಳನ್ನು ನೀಡಲಿದ್ದು, ಬಳಕೆದಾರರಿಗೆ ಯಾವುದೇ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮಿತಿಯನ್ನು ವಿಧಿಸುವುದಿಲ್ಲ ಎನ್ನಲಾಗಿದೆ. ದೇಶದಲ್ಲಿ ಒಂದು GB ಡೇಟಾ ಸಲುತ್ತಿಲ್ಲ ಎನ್ನುವವರಿಗೆ ಇದು ಸರಿಯಾದ ಪರಿಹಾರವಾಗಿದೆ.

*ಯಾವುದೇ ಮಿತಿಯಿಲ್ಲ*

ಚಾಟ್ ಸಿಮ್ 2 ಬಳಕೆದಾರರಿಗೆ ಯಾವುದೇ ಮಿತಿ ಇಲ್ಲದೇ ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಇದಲ್ಲದೇ ರೋಮಿಂಗ್ ಚಾರ್ಜ್‌ಗಳು ಸಹ ಇದರಲ್ಲಿ ಇಲ್ಲ ಎನ್ನಲಾಗಿದೆ. ಇದಲ್ಲದೇ ವೈ-ಫೈ ಕನೆಕ್ಟಿವಿಯ ಮೇಲೆಯೂ ಯಾವುದೇ ದರಗಳನ್ನು ವಿಧಿಸುವುದಿಲ್ಲ. ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದೆ.

*165 ದೇಶಗಳಲ್ಲಿ ಕಾರ್ಯಚರಣೆ:*

ಚಾಟ್ ಸಿಮ್ ಒಟ್ಟು 165 ದೇಶಗಳಲ್ಲಿ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದ್ದು, ಒಂದು ಬಾರಿ ವಾರ್ಷಿಕ ಸೇವೆಯನ್ನು ಪಡೆದುಕೊಂಡರೆ ಸಾಕು, ಬಳಕೆದಾರರು ಯಾವುದೇ ಮಿತಿ ಇಲ್ಲದೇ ಉಚಿತ ಕರೆ ಮಾಡುವ ಮತ್ತು ಹಲವು ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡುವ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ.

*ಹಲವು ಆಪ್‌:*

ವಾಟ್ಸ್‌ಆಪ್, ಫೇಸ್ಬುಕ್ ಮೆಸೆಂಜರ್, ವಿಚಾಟ್, ಟೆಲಿಗ್ರಾಮ್, ಲೈನ್ ಆಪ್‌ಗಳನ್ನು ಯಾವುದೇ ಮಿತಿ ಇಲ್ಲದೇ ಬಳಕೆ ಮಾಡಿಕೊಳ್ಳಲು ಅವಕಾವನ್ನು ನೀಡಲಾಗಿದೆ. ಅಲ್ಲದೇ ಇದರಲ್ಲಿ ಮೇಸೆಜ್, ವೀಡಿಯೊ, ಫೋಟೋಗಳನ್ನು ಬಳಕೆದಾರರು ಸೆಂಡ್ ಮಾಡಬಹುದು.

*ಎಲ್ಲಾ ಫೋನ್‌ಗಳಿಗೂ:*

ಈ ಚಾಟ್ ಸಿಮ್ 2 ಆಪಲ್, ವಿಂಡೋಸ್ ಮತ್ತು ಆಂಡ್ರಾಯ್ಡ್ ಫೋನಿನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಅಲ್ಲದೇ ಯಾವುದೇ ಗಾತ್ರದಲ್ಲಿಯಾದರು ಬಳಕೆ ಮಾಡಿಕೊಳ್ಳಬಹುದಾಗಿದೆ.

*ಶೀಘ್ರ ಭಾರತಕ್ಕೂ*

ದೇಶದಲ್ಲಿ ಮೊಬೈಲ್ ಮಾರುಕಟ್ಟೆಯು ವಿಸ್ತಾರವಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿಯೂ ತನ್ನ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಚಾಟ್ ಸಿಮ್ ರೂಪಿಸಿದೆ ಎನ್ನಲಾಗಿದೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ