ಕಾಂಗ್ರೆಸ್ ಗೆ ಮತ ಹಾಕಿ ಬಿಜೆಪಿಯನ್ನು ಗೆಲ್ಲಿಸುವಂತಹ ತಪ್ಪನ್ನು ಪುದು ಗ್ರಾಮ ಪಂಚಾಯತ್ ನ ಮತದಾರರು ಖಂಡಿತಾ ಮಾಡಲಾರು -ರಿಯಾಝ್ ಫರಂಗಿಪೇಟೆ
ಕಾಂಗ್ರೆಸ್ ಗೆ ಮತ ಹಾಕಿ ಬಿಜೆಪಿಯನ್ನು ಗೆಲ್ಲಿಸುವಂತಹ ತಪ್ಪನ್ನು ಪುದು ಗ್ರಾಮ ಪಂಚಾಯತ್ ನ ಮತದಾರರು ಖಂಡಿತಾ ಮಾಡಲಾರು -ರಿಯಾಝ್ ಫರಂಗಿಪೇಟೆ
ಪುದು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ಸರ್ವಾಧಿಕಾರಿ ಧೋರಣೆ ಮತ್ತು ಭ್ರಷ್ಟಾಚಾರದ ನೀತಿಯಿಂದ ಜನರು ತೀವ್ರ ಅಸಮಾಧಾನ ಗೊಂಡಿರುವುದರಿಂದ ಕಾಂಗ್ರೆಸ್ ನ ಮತಗಳಿಕೆಯು ತೀವ್ರವಾಗಿ ಕುಸಿಯಲಿದೆ.ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪುದು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮತಗಳಿಕೆಯ ಹಿನ್ನಡೆಯನ್ನು ಅರಿಯದ ಮತದಾರರು ಕಾಂಗ್ರೆಸ್ ಗೆ ಮತ ನೀಡಿರುವುದರಿಂದ ಬಿಜೆಪಿ ಪಕ್ಷವು ಗೆದ್ದಿರುತ್ತದೆ.
ಈ ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಮತಗಳು ಜಿಲ್ಲಾ ಪಂಚಾಯತ್ ಚುನಾವಣೆಗಿಂತಲೂ ತೀವ್ರ ಕುಸಿದಿರುವುದರಿಂದ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಮತ ನೀಡಿ ಬಿಜೆಪಿಯ ಗೆಲುವಿಗೆ ಮತದಾರರು ಕಾರಣರಾಗಬಾರದಾಗಿ ಕೇಳಿಕೊಳ್ಳುತ್ತಾ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸೋಲಿಸುವ ಸಲುವಾಗಿ ಮತ್ತು ಪುದು ಕ್ಷೇತ್ರದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಗಾಗಿ ಮತದಾರ ಬಾಂಧವರು ಎಸ್ ಡಿ ಪಿ ಐ ಜೊತೆಗೆ ಕೈ ಜೋಡಿಸಬೇಕಾಗಿ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ರಿಯಾಝ್ ಫರಂಗಿಪೇಟೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Comments
Post a Comment