ಮೋದಿ ಬಂದರೂ ಏರದ ಬಿಜೆಪಿ ಸೂಚ್ಯಂಕ !

ಮೋದಿ ಬಂದರೂ ಏರದ ಬಿಜೆಪಿ ಸೂಚ್ಯಂಕ !

ಬ್ರೇಕಿಂಗ್ ನ್ಯೂಸ್, ಮಂಗಳೂರು ವರದಿ
ಬೆಂಗಳೂರು , ಫೆ : 06 ,ಕರ್ನಾಟಕದಲ್ಲಿ ಬಿಜೆಪಿ ಗ್ರಹಗತಿ ಸರಿಯಿದ್ದಂತೆ ಕಾಣುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭಾನುವಾರ ಬರತ್ತಾರೆಂದಾಗ ಕರ್ನಾಟಕದ ಬಿಜೆಪಿ ಮುಖಂಡರಿಗೆ ಹಾಗೂ ರಾಜ್ಯದ ಜನತೆಗೆ ಪ್ರತ್ಯೇಕ ಕಾರಣಗಳಿಗೆ ಒಂದಷ್ಟು ನಿರೀಕ್ಷೆ ಇತ್ತು, ವಿಶ್ವಾಸವಿತ್ತು.

ಪಕ್ಷ ಹಾಗೂ ರಾಜ್ಯಕ್ಕೆ ಒಳಿತಾಗುವ ಘೋಷಣೆಗಳು ಹೊರಬೀಳುತ್ತವೆ ಎಂಬ ಆಸೆಯೂ ಇತ್ತು. ಎಷ್ಟೆಲ್ಲ ಬಿಜೆಪಿಗೆ ರಾಜ್ಯದಲ್ಲಿ 2013 ರ ಸ್ಥಿತಿಯಿಂದ ಮೇಲೇಳಲು ಸಾಧ್ಯವೇ ಆಗುತ್ತಿಲ್ಲ. ಚುನಾವಣೆ ಹೊಸ್ತಿಲಲ್ಲಿ ಕಾಣಿಸಿಕೊಳ್ಳ ಬೇಕಿದ್ದ ಲವಲವಿಕೆ ಕೂಡ ಗೋಚರಿಸುತ್ತಿಲ್ಲ. ಪಕ್ಷದೊಳಗೆ ಗುಪ್ತಗಾಮಿನಿ ಯಂತೆ ಹರಿಯುತ್ತಿರುವ ನಾಯಕರ ನಡುವಣ ವಿರಸ, ಪರಸ್ಪರ ಅಸಹಿಷ್ಣು ತೆಯೇ ಇದಕ್ಕೆ ಕಾರಣ. ಜತೆಗೆ ಸಹಜ ಆಡಳಿತ ವಿರೋಧಿ ಅಲೆ ಕೂಡ ಅದರ ಕೈಗೆಟುಕಿಲ್ಲ. ಇಷ್ಟರ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ಕೊಟ್ಟು ರಾಜ್ಯ ಮುಖಂಡರನ್ನು ಇನ್ನಿಲ್ಲದಂತೆ ತಿವಿದು ಎಬ್ಬಿಸಿದರೂ ಮಾತ್ರ ಯಾಕೋ, ಏನೋ ಹಳಿಗೆ ಬಂದು ನಿಲ್ಲುತ್ತಿಲ್ಲ.

ಇದರ ಮಧ್ಯೆ, ಸುಮ್ಮನೆ ಇರಲಾರದೆ ಮಹದಾಯಿ ವಿವಾದವನ್ನು ತನ್ನ ತಲೆಗೇ ಕೊಟ್ಟಿಕೊಂಡ ಬಿಜೆಪಿ ಪರಿಹಾರ ಕುರಿತು ನೀಡಿ ದ್ದ ಮಾತು ಉಳಿಸಿಕೊಳ್ಳಲಾಗದೆ ಇನ್ನಿಲ್ಲದಂತೆ ಒದ್ದಾಡುತ್ತಿತ್ತು.

ಇಂಥ ಸನ್ನಿವೇಶದಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂ ರಿಗೆ ಬಂದಾಗ ಈ ಬಗ್ಗೆ ಮಾತಾಡುತ್ತಾರೆ. ಎದುರಾಳಿಗಳ ಆಗ್ರಹದಂತೆ ಈ ವಿಚಾರದಲ್ಲಿ ತಾವೇ ಮಧ್ಯಸ್ಥಿಕೆ ವಹಿಸಿ, ಪರಿಹಾರ ಕಲ್ಪಿಸುವ ಮಾತಾಡುತ್ತಾರೆ ಎಂಬ ನಿರೀಕ್ಷೆ ಜನರಿಗೆ ಇತ್ತು. ಇದರಿಂದ ಪಕ್ಷಕ್ಕೂ ಹೆಸರು ಬರುತ್ತದೆ. ಚುನಾವಣೆಯಲ್ಲಿ ಇದು ಉಪಯೋಗಕ್ಕೆ ಬರುತ್ತದೆ ಎಂಬುದು ಪಕ್ಷದ ಮುಖಂಡರ ಅನಿಸಿಕೆಯೂ ಆಗಿತ್ತು. ಆದರೆ ಮೋದಿ ಅವರು ಅಪ್ಪಿತಪ್ಪಿಯೂ ಮಹ ದಾಯಿ ವಿಚಾರ ಎತ್ತಲಿಲ್ಲ. ಅವರೇನಾದರೂ ತಾವೇ ಮುಂದೆ ನಿಂತು ಮಹದಾಯಿ ವಿವಾದ ಬಗೆಹರಿಸುತ್ತೇನೆ ಎಂದು ಒಂದೇ ಒಂದು ಹೇಳಿಕೆ ಕೊಟ್ಟಿದ್ದರೂ

 ‘ಬಿಜೆಪಿ ಸೂಚ್ಯಂಕ’

 ಕರ್ನಾಟಕದಲ್ಲಿ ದಿಢೀರನೆ ಮೇಲೇರುತ್ತಿತ್ತು.
ಆದರೆ ಈ ಅವಕಾಶ ಕೈ ಚೆಲ್ಲಿದ ಮೋದಿ ಅವರು ಸಿದ್ದರಾಮಯ್ಯ ಸರಕಾರದಲ್ಲಿ ಇರುವ, ಇರದ ಹುಳುಕುಗಳನ್ನು ಹೆಕ್ಕಿ ಮಾತಾ ಡಿದ್ದಾರೆ. ಸಿದ್ದರಾಮಯ್ಯನವರು ಮೋದಿ ಅವರು ಎತ್ತಿದ್ದ ಒಂದೊಂದೇ ಪ್ರಶ್ನೆಗಳಿಗೆ ಉತ್ತರ ನೀಡಿ ಬಿಜೆಪಿಯನ್ನು ನಿಶ್ಯಸ್ತ್ರರ ನ್ನಾಗಿಸಿದ್ದಾರೆ. ಅಲ್ಲಿಗೆ ಮೋದಿ ಅವರ ಬಗ್ಗೆ ಪಕ್ಷ ಹಾಗೂ ಜನ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಗಾಳಿಗೋಪುರದಂತಾಗಿದೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ