ಮೋದಿ ಪತ್ನಿ ಜಶೋಧಬೆನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!
ಬ್ರೇಕಿಂಗ್ ನ್ಯೂಸ್, ಮಂಗಳೂರು ವರದಿ
ಅಹಮದಾಬಾದ್: ಫೆ: 08 , ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ಮತ್ತು ಇಬ್ಬರು ಮಹಿಳೆಯರು ಪಯಣಿಸುತ್ತಿದ್ದ ಕಾರು ರಾಜಸ್ಥಾನದಲ್ಲಿ ಅಪಘಾತಕ್ಕೀಡಾಗಿದ್ದು, ಚಾಲಕ ಮೃತಪಟ್ಟಿದ್ದಾರೆ. ಜಶೋದಾಬೆನ್ ಅವರು ಗಾಯಗೊಂಡಿದ್ದಾರೆ.
ಕೋಟಾ-ಚಿತ್ತೋರ್‌ಗಢ ಚತುಷ್ಪಥ ಹೆದ್ದಾರಿಯಲ್ಲಿ ಬೇಗು ಎಂಬಲ್ಲಿಗೆ ಸಮೀಪ ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.
ಜಶೋದಾಬೆನ್ ಅವರು ಉದಯಪುರದತ್ತ ಪ್ರಯಾಣಿಸುತ್ತಿದ್ದ ಕಾರು ಬೆಳಗ್ಗೆ 10 ಗಂಟೆ ಸುಮಾರಿಗೆ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆಯಿತು ಎಂದು ಮೂಲಗಳು ತಿಳಿಸಿವೆ.
'ಜಶೋದಾಬೆನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿತ್ತೋರ್‌ಗಢದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತ ಟ್ರಕ್ ಚಾಲಕನ ವಿರುದ್ಧ ಕೇಸು ದಾಖಲಿಸಲಾಗಿದೆ' ಎಂದು ಬರ್ಗುನ್ ವೃತ್ತ ನಿರೀಕ್ಷಕ ರಾಜೇಶ್ ರಜೋರಾ ತಿಳಿಸಿದರು.
ಕಾರು ಚಾಲಕ ಬಸಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಶೋದಾಬೆನ್ ಅವರು ನಿವೃತ್ತ ಶಿಕ್ಷಕಿಯಾಗಿದ್ದು, ಮೋದಿ ಅವರ ಹುಟ್ಟೂರು ವಡ್ನಗರದಿಂದ 35 ಕಿ.ಮೀ ದೂರದ ಬ್ರಾಹ್ಮಣ್‌ವಾಡದಲ್ಲಿ ವಾಸಿಸುತ್ತಿದ್ದಾರೆ.
Comments
Post a Comment