ರುಚಿ ರುಚಿಯಾದ ಸ್ಪೆಶಲ್ ಚಿಕನ್ ಬಿರಿಯಾನಿ ಮಾಡಲು ಇಲ್ಲಿದೆ ಸಂಪೂರ್ಣ ಮಾಹಿತಿ!

ಚಿಕನ್ ಬಿರಿಯಾನಿಯನ್ನು ಮನೆಯಲ್ಲಿ ಮಾಡಿ ತಿನ್ನ ಬಯಸುವುದಾದರೆ ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್‌ ಸರಳ ರೆಸಿಪಿ. 

ಬೇಕಾಗುವ ಸಾಮಗ್ರಿಗಳು

600 ಗ್ರಾಂ ಬಾಸುಮತಿ ಅಕ್ಕಿ (ಸ್ವಲ್ಪ ಉಪ್ಪು ಹಾಕಿ ಬೇಯಿಸಿ) 
4 ಚಮಚ ಪುದೀನಾ ಪೇಸ್ಟ್ 
ರುಚಿಗೆ ತಕ್ಕ ಉಪ್ಪು 
2 ಚಮಚ ಕೊತ್ತಂಬರಿ ಪುಡಿ 
1 ಚಮಚ ಬೆಳ್ಳುಳ್ಳಿ ಪೇಸ್ಟ್ 
2 ಸೌಟು ಟೊಮೆಟೊ ಪೇಸ್ಟ್ 
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 4-5

(ಅರ್ಧ ಈರುಳ್ಳಿಯನ್ನು ಚಿಕನ್ ಮಾಡುವಾಗ ಹಾಕಿ ಉಳಿದ ಈರುಳ್ಳಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಇಡಿ) 
5-6 ಏಲಕ್ಕಿ 
ಅರ್ಧ ಚಮಚ ಖಾರದ ಪುಡಿ 
1/2 ಲೀಟರ್ ಮೊಸರು 
1 ಕೆಜಿ ಚಿಕನ್‌ ಲೆಗ್ ಪೀಸ್‌ 
1 ಚಮಚ ಗರಂ ಮಸಾಲ 
ಚಿಟಿಕೆಯಷ್ಟು ಕೇಸರಿ 
1 ಚಮಚ ಶುಂಠಿ ಪೇಸ್ಟ್ 
4 ಹಸಿ ಮೆಣಸಿನಕಾಯಿ (ಕತ್ತರಿಸಿದ್ದು) 
3 ಟೊಮೆಟೊ 
2 ಚಮಚ ಜೀರಿಗೆ 
1 ಚಮಚ ಅರಿಶಿಣ 
1 ಚಮಚ ಹಾಲು 
ಎಣ್ಣೆ 2 ಚಮಚ 

ಮಾಡುವ ವಿಧಾನ: 


ಸ್ಟೆಪ್‌ 1 
ಒಂದು ಬೌಲ್‌ಗೆ ಮೊಸರು, ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ಈಗ ಚಿಕನ್‌ ಪೀಸ್‌ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ. ಕೇಸರಿಯನ್ನು ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆ ಹಾಕಿ. 







ಸ್ಟೆಪ್ 2 
ನಂತರ ತಳ ದಪ್ಪವಿರುವ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ, ಸಾಧಾರಣ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಏಲಕ್ಕಿ ಹಾಕಿ, ಜೀರಿಗೆ ಚಟ್‌ಪಟ್‌ ಅಂತ ಶಬ್ದ ಬಂದ ಮೇಲೆ ಈರುಳ್ಳಿ ಹಾಕಿ 15 ನಿಮಿಷ ಫ್ರೈ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಟೊಮೆಟೊ ಹಾಕಿ, ನಂತರ ಟೊಮೆಟೊ ಪೇಸ್ಟ್ ಹಾಕಿ 5 ನಿಮಿಷ ಫ್ರೈ ಮಾಡಿ. 






ಸ್ಟೆಪ್‌ 3 
ಈಗ ಕತ್ತರಿಸಿದ ಹಸಿ ಮೆಣಸು ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ, ಈಗ ಕೊತ್ತಂಬರಿ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ಮಿಕ್ಸ್‌ ಮಾಡಿಟ್ಟ ಚಿಕನ್‌ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಚಿಕನ್‌ ಬೇಯುವವರೆಗೆ ಆಗಾಗ ಸೌಟ್‌ನಿಂದ ಮೆಲ್ಲನೆ ಆಡಿಸಿ. ಚಿಕನ್ ಬೆಂದ ಮೇಲೆ ಗ್ಯಾಸ್‌ ಆಫ್‌ ಮಾಡಿ. 







ಸ್ಟೆಪ್ 4 
ಈಗ ಚಿಕನ್ ಅನ್ನ ಒಂದು ಪಾತ್ರೆಗೆ ಹಾಕಿ, ಚಿಕನ್ ಮಾಡಿದ ಪಾತ್ರೆಗೆ ಮೊದಲು ಸ್ವಲ್ಪ ಚಿಕನ್‌ ಹಾಕಿ ನಂತರ ಅನ್ನ ಹಾಕಿ ಅದರ ಮೇಲೆ ಕೇಸರಿ, ಗರಂ ಮಸಾಲ, ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಮತ್ತೆ ಸ್ವಲ್ಪ ಚಿಕನ್‌ ಹಾಕಿ ನಂತರ ಅನ್ನ ಹಾಕಿ,
ಈ ರೀತಿ ಪದರ-ಪದರವಾಗಿ ಚಿಕನ್‌ ಹಾಗೂ ಅನ್ನ ಹಾಕಿ ಮೇಲ್ಭಾಗದಲ್ಲಿ ತುಪ್ಪದಲ್ಲಿ ಫ್ರೈ ಮಾಡಿದ ಈರುಳ್ಳಿ ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ ಮಿಕ್ಸ್ ಮಾಡಿ. 
ರೆಡಿಯಾದ ಬಿರಿಯಾನಿಯನ್ನು ಮೊಸರು ಬಜ್ಜಿ ಜತೆ ಸರ್ವ್ ಮಾಡಿ

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ