ಎಸ್ ಡಿ ಪಿ ಐ ! ಸತ್ಯ ಎಷ್ಟು ? ಮಿತ್ಯ ಎಷ್ಟು ?

ಎಸ್ಡಿಪಿಐ ಎಂಬುದು ಶೋಷಿತ ದಮನಿತ ದಲಿತ ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತ್ತಿರುವಂತಹ ಒಂದು ಸಾಮಾಜಿಕ ಚಳುವಳಿ ಯಾಗಿದೆ.ಇದು ಚುನಾವಣೆಯಲ್ಲಿ ಮಾತ್ರ ಸ್ಫರ್ದಿಸಲು ಸೀಮಿತವಾದ ಪಕ್ಷವಲ್ಲ  ಜನರ ಹಕ್ಕುಗಳನ್ನು ಪಡೆಯಲು ಹೋರಾಟ ಚಳುವಳಿ ಗಳ ಮೂಲಕ ತೆಗೆಸಿಕೊಟ್ಟಂತಹ ಹಲವಾರು ನಿದರ್ಶನಗಳಿವೆ.

*ನ್ಯಾಯ ನಿಷ್ಟುರತೆ ಯು ಎಸ್ಡಿಪಿಐ ಯ ಹುಟ್ಟಿನಿಂದ ಬಂದ ಗುಣ ಎಂಬುದನ್ನು ಜನರು ಮನಗಂಡಿದ್ದಾರೆ*
ಇಂತಹ ಒಂದು ಚಳವಳಿಯ ವಿರುದ್ಧ ಚುನಾವಣಾ ಸಮಯದಲ್ಲಿ ಮಾತ್ರ ಜನರೆದುರು ಕಾಣ ಸಿಗುವ ನಕಲಿ ಜಾತ್ಯತೀತ ಪಕ್ಷದ ಕೆಲವೊಂದು ರಾಜಕಾರಣಿ ಗಳು ಮತ್ತು ಕಾರ್ಯ ಕರ್ತರು ವ್ಯರ್ಥ ಆರೋಪ ಮಾಡುವುದರಲ್ಲಿ ತಲ್ಲೀನಾರಾಗಿದ್ದಾರೆ.
ಏನೆಂದರೆ ಯು.ಪಿ.ಯಲ್ಲಿ ಎಸ್ಡಿಪಿಐ ಸ್ಫರ್ದಿಸಿದ್ದರಿಂದ ಪರೋಕ್ಷವಾಗಿ ಬಿಜೆಪಿ ಗೆಲ್ಲುವಂತಾಯಿತು ಎಂದು
ಆದರೆ ನಿಜವಾಗಿಯೂ *ಯು.ಪಿ.ಯಲ್ಲಿ ಒಂದು ಕಡೆಯಲ್ಲಿಯು ಎಸ್ಡಿಪಿಐ ಸ್ಪರ್ದಿಸರಲಿಲ್ಲ ಬದಲಾಗಿ ತ್ರತೀಯ ರಂಗಕ್ಕೆ ಬೆಂಬಲ ನೀಡಿತ್ತು.*
ಮತ್ತೆ ಓವೈಸಿ ಯ ಪಕ್ಷ ಸ್ಫರ್ದಿಸಿದರ ಬಗ್ಗೆ ಅವರಲ್ಲಿಯೆ ಕ್ಲಾರಿಫಿಕೇಶನ್ ಕೇಳಿ
ಹಾಗೆಯೇ ಇನ್ನೊಂದು ಇವರ ಆರೋಪ ಎಸ್ಡಿಪಿಐ ಗೆ ಓಟು ಹಾಕಿದರೆ ಬಿಜೆಪಿ ಬರುತ್ತದೆ ಎಂದು.
ಮಾತ್ರ ವಲ್ಲ ಕಾಂಗ್ರೆಸ್ ಗೆ ಅದಿಕಾರ ಸಿಕ್ಕಿದರೆ ಕೋಮುವಾದಿ ಗಳ ಅಟ್ಟಹಾಸ ವನ್ನು ನಿಲ್ಲಿಸಬಹುದೆಂದು .ಈಗ ಯು.ಪಿ.ಯಲ್ಲಿ ಮುಸ್ಲಿಂ ರ ಅವಸ್ಥೆ ಯನ್ನು ಗಮನಿಸಿ ಎಂದು ತಿಳಿಸಿದ್ದಾನೆ. ಕರ್ನಾಟಕ ದಲ್ಲು ಬಿಜೆಪಿ ಬಂದರೆ ಅದೇ ರೀತಿ ಯಾಗುತ್ತದೆ ಎಂದು ಎಚ್ಚರಿಸಿದ್ದಾನೆ.ಆದರೆ *ಕಾಂಗ್ರೆಸ್ ಬಂದರೆ ಇಷ್ಟು ದೊಡ್ಡ ಅನಾಹುತ ಗಳು ಸಂಭವಿಸುವುದಿಲ್ಲ ಎಂದು ತಿಳಿಸಿದ್ದಾನೆ*
*ಆದರೆ ಹೀಗೆ ಹೇಳುವವರು ಚಿಂತಿಸಬೇಕು*

1) ಬಾಬರಿ ಮಸ್ಜಿದ್ ಶಹೀದ್ ಆಗುವಾಗ ಕೇಂದ್ರದಲ್ಲಿ ಯಾವ ಸರಕಾರವಿತ್ತು.
2)2002 ರಲ್ಲಿ ಗುಜರಾತ್ ನಲ್ಲಿ ಮುಸ್ಲಿಂ ರ ಮಾರಣ ಹೋಮ ನಡೆದು ಕಾಂಗ್ರೆಸ್ ನ ಸಂಸದ ಇಹ್ಸಾನ್ ಜಾಫ್ರಿಯವರ ಕೊಲೆ ನಡೆದಾಗ  ಕೇಂದ್ರದಲ್ಲಿ ಯಾರ ಸರಕಾರವಿತ್ತು 3)ಗಲಬೆಗಳ ಸೂತ್ರದಾರ ಮೋದಿಯವರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ.
ಮೋದಿಯ ಮೇಲೆ ಕ್ರಮ ಕೈಗೊಂಡಿದ್ದರೆ ಇಂದು ಆತನನ್ನು ನಮ್ಮ ದೇಶದ ಪ್ರದಾನಿ ಎಂದು ಹೇಳಿ ತಲೆ ತಗ್ಗಿಸಿಕೊಳ್ಳುವಂತಹ ಗತಿ ಈ ದೇಶದ ಜನರಿಗೆ ಬರ್ತಾ ಇರಲಿಲ್ಲ
4)2012 ರಲ್ಲಿ ಮುಝಪ್ಪರ್ ನಗರ ಗಲಬೆಯಲ್ಲಿ ಸಾವಿರಾರು ಮುಸ್ಲಿಂರು ಜೀವ ಕಳೆದುಕೊಳ್ಳಾಬೇಕಾಗಿ ಬಂದಾಗ ಕೇಂದ್ರದಲ್ಲಿ ಇದ್ದ ಕೇಂದ್ರ ಸರಕಾರಕ್ಕೆ ಏನು ಕ್ರಮ ಕೈಗೊಂಡಿತು.
ಯು.ಪಿ.ಯಲ್ಲಿ ಮುಸ್ಲಿಂ ರನ್ನು ಕಡೆಗಣಿಸಿದ ಕಾರಣದಿಂದಾಗಿ ಅಖಿಲೇಶ್ ಯಾದವ್ ಸೋಲು ಕಾಣಬೇಕಾಯಿತು
5)ಮಾತ್ರವಲ್ಲದೆ ಬಾಬರಿ ಮಸೀದಿ ದುಷ್ಕ್ರತ್ಯ ದ ವರದಿಯನ್ನು ಸೋರಿಕೆ ಮಾಡಿ ಆರೋಪಿಗಳನ್ನು ರಕ್ಷಿಸಿದ್ದು ಯಾರು?
ಬಾಬರಿ ಮಸ್ಜಿದ್ ಒಡೆಯುತ್ತಿದ್ದಾಗ ನಮ್ಮ ದೇಶದ ಪ್ರಧಾನಿ ಯಾಗಿದ್ದ ನರಸಿಂಹ ರಾವ್ ಏನು ಮಾಡುತ್ತಿದ್ದರು
6)ಹಾಗಯೇ ಮುಸ್ಲಿಮ್ ರ ಮತಗಳನ್ನು ಪಡೆದು ಜಯಿಸಿ ಸರಕಾರದಲ್ಲಿ ಎಲ್ಲಾ ಅಧಿಕಾರ ಪಡೆದು ನಂತರ ಕೊನೆಗೆ ಎಸ್ ಎಂ ಕ್ರಷ್ಣ ಮಾಡಿದ್ದಾದರು ಏನು.
ಒಟ್ಟಿನಲ್ಲಿ ಹೇಳುವುದಾದರೆ ಕೇಂದ್ರದ ಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೇರ ಕಾರಣ ಕಾಂಗ್ರೆಸ್ ನ ವೈಫಲ್ಯ ಎಂದರೆ ತಪ್ಪಿಲ್ಲ.ಅದನ್ನು ಬಿಟ್ಟು ನಿಮ್ಮ ವೈಫಲ್ಯ ಗಳನ್ನು ಮರೆಮಾಚಲು ಎಸ್ಡಿಪಿಐ ಯ ವಿರುದ್ಧ ವಾಗಿ ವ್ರಥಾ ಆರೋಪ ಮಾಡಿ ಪ್ರಯೋಜನ ವಿಲ್ಲ.

ಇದೆಲ್ಲವು ರಾಷ್ಟ್ರೀಯ ಕಾಂಗ್ರೆಸ್ ಗೆ ಸಂಬಂಧಿಸಿದ ಉದಾಹರಣೆ ಗಳಾದರೆ *ಇನ್ನು ರಾಜ್ಯ ಕಾಂಗ್ರೆಸ್ ನ ಬಗ್ಗೆ ಚರ್ಚೆ ನಡೆಸುವುದಾದರೆ* ನಿಜವಾಗಿಯು
1)ಕಾಂಗ್ರೆಸ್ ನ್ನು ಸೋಲಿಸುತ್ತಿರುವುದು ಯಾರು??"
ಅಂದು ವಿದಾನಪರಿಷತ್ ಚುನಾವಣೆಯಲ್ಲಿ ಬಹುಮತವಿದ್ದರು ಇಕ್ಬಾಲ್ ಅಹ್ಮದ್ ಸರಡಗಿ ಯನ್ನು ಸೋಲಿಸಿದ್ದು ಯಾರು?
2)ಅದೇ ರೀತಿ ಅಂದು ಪುತ್ತೂರು ಪುರಸಭೆ ಯಲ್ಲಿ ಕಾಂಗ್ರೆಸ್ ಗೆ ಬಹುಮತ ವಿದ್ದರು ಬಿಜೆಪಿ ಹೇಗೆ ಅಧಿಕಾರ ಪಡೆಯುವಂತಾಯಿತು.
3)ಅದೇ ರೀತಿ ಮೊನ್ನೆ ಚಾಮರಾಜನಗರ ದಲ್ಲಿ ಕಾಂಗ್ರೆಸ್ ನ ಸದಸ್ಯರೆ ನಿಮಗೆ ವಿರುದ್ದವಾಗಿ ಮತ ಹಾಕಿದಾಗ ನಿಮ್ಮ ಮಾನ ಕಾಪಾಡಿದ್ದು ಯಾರು?
4)ಬಿಬಿಎಂಪಿ ಯಲ್ಲಿ ನಿಮಗೆ ಅಧಿಕಾರ ದೊರೆಯಲು ಕಾರಣ ಕರ್ತರು ಯಾರು?
5)ಮಡಿಕೇರಿ ನಗರ ಸಭೆಯಲ್ಲಿ ನಿಮಗೆ ಬೆಂಬಲ ನೀಡಿದ್ದು ಯಾರು?
ಇಂತಹ ಸಾವಿರಾರು ಉದಾಹರಣೆ ಗಳಿವೆ.
*ಇನ್ನು ಕೋಮುವಾದಿಗಳ ಅಟ್ಟಹಾಸದ ಬಗ್ಗೆ ಮಾತನಾಡುವುದಾದರೆ*
1) ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕ್ಕೆ ಬಂದರೆ ಕಲ್ಲಡ್ಕದ ಕೋಮುವಾದಿಯನ್ನು ಬಂದಿಸುತ್ತೇವೆ ಎಂದು ಹೇಳಿ ವಚನ ಬ್ರಷ್ಟತೆ ಮಾಡಿಲ್ಲವೇ ನೀವು?
2)ಮಾತ್ರವಲ್ಲ ಉಲ್ಳಾಲ ಮತ್ತು ಉಳಾಯಿಬೆಟ್ಟುವಿನಲ್ಲಿ ಕೋಮುಗಲಬೆ ನಡೆಸಿದ ಸಂಘಪರಿವಾರದ ಏನು ಕ್ರಮ ಕೈಗೊಂಡಿದ್ದಾರ?
3)ಹಾಗೆಯೇ ರಾತ್ರೋ ರಾತ್ರಿ ವೇಳೆ ಯಲ್ಲಿ ಅಮಾಯಕ ಮುಸ್ಲಿಂ ರ ಮನೆಗೆ ಪೋಲಿಸ್ ರು ದಾಳಿ ನಡೆಸಿ ಮುಸ್ಲಿಂ ಯುವಕರನ್ನು ಸುಳ್ಳು ಕೇಸ್ ಹಾಕಿಸಿ ಬಂದಿಸಿದಾಗ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಏನು ಕ್ರಮ ಕೈಗೊಳ್ಳಲು ಸಾಧ್ಯವಾಯಿತು.
4)ಕೇವಲ ದ.ಕ ಜಿಲ್ಲೆಯಲ್ಲಿಯೇ ಸುಮಾರು ನಲ್ವತ್ತು ಕೊಲೆ ನಡೆಸಿದ ಸಂಘಪರಿವಾರದ ವಿರುದ್ದವಾಗಿ ನೀವು ಎಷ್ಟು ಬಾರಿ ತುಟಿ ಬಿಚ್ಚಿ ಮಾತನಾಡಿದ್ದೀರಿ
5)ಮುಸ್ಲಿಮ್ ರನ್ನು ಮತ್ತು ಪ್ರವಾದಿ ಯನ್ನು ಸೋಷಿಯಲ್ ಮೀಡಿಯಾದಲ್ಲಿ ನಿಂದಿಸಿದ ಎಷ್ಟು ಮಂದಿಯ ಮೇಲೆ ನೀವು ಪ್ರಕರಣ ದಾಖಲಿಸಿದ್ದೀರಿ.ದಾಖಲು ಮಾಡುವುದು ಬಿಡಿ ಆ ಕೆಲಸವನ್ನು ಹೆಚ್ಚುಕಡಿಮೆ ಎಲ್ಲಾ ಕಡೆಗಲಳ್ಳು ಎಸ್ಡಿಪಿಐ ಯವರು ಮಾಡಿದ್ದಾರೆ. ಆದರೆ ಅಧಿಕಾರ ದಲ್ಲಿರುವ ನೀವು ಎಷ್ಟು ಮಂದಿಯನ್ನು ಬಂದಿಸಿ ಶಿಕ್ಷೆ ಕೊಡಿಸಿದ್ದೀರಿ ಅಥವಾ ಶಿಕ್ಷೆ ಕೊಡಿಸಲು ಒತ್ತಡ ಹಾಕಿಸಿ ಪ್ರಯತ್ನ ಪಟ್ಟಿದ್ದೀರಿ
5)ಮುಸ್ಲಿಂ ರ ಕ್ಷೇಮ ಬಯಸುವವ ಆಲೋಚಿಸಬೇಕು ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ವಿದ್ದಾಗ ಮೆಮನ್ ನನ್ನು ಕೊಲ್ಲಲು ಮದ್ಯರಾತ್ರಿ ಕೋರ್ಟ್ನ ನ ಬಾಗಿಲು ತೆರೆಯಿತು. ಅದೇ ರೀತಿ ಇಂದು ಕರ್ನಾಟಕ ದಲ್ಲಿ ಕಾಂಗ್ರೆಸ್ ಸರಕಾರ ಇರುವ ಈ ಸಂದರ್ಭದಲ್ಲಿ ಕಾರಂತ ಎಂಬ ಕೋಮುವಾದಿ ಜೈಲು ಪಾಲಾಗುವುದನ್ನು ತಪ್ಪಿಸಲು‌ ಮಧ್ಯರಾತ್ರಿ ಯಲ್ಲಿ ಕಲಾಪ ನಡೆಸಲಾಯಿತು.ಹೀಗಾಗುವುದಾದರೆ ಯಾವ ಪಕ್ಷ ಅಧಿಕಾರ ದಲ್ಲಿದ್ದರೇನು.*
*ಎಸ್ಡಿಪಿಐ ಕೇವಲ ಮುಸ್ಲಿಂ ರ ಕ್ಷೇಮವನ್ನು ನೋಡುತ್ತಿಲ್ಲ ಬದಲಾಗಿ ಶೋಷಿತ  ದಮನಿತ ಅಲ್ಪಸಂಖ್ಯಾತ ಅನ್ಯಾಯಕ್ಕೆ ಒಳಗಾದವರ ಕ್ಷೇಮಕ್ಕಾಗಿ ಕೆಲಸ ಮಾಡುತ್ತಿರುವ ಪಕ್ಷವಾಗಿದೆ.*
ಒಟ್ಟಿನಲ್ಲಿ ಹೇಳುವುದಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು......
...............

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ