ಮೋದಿ ವಿಕೆಟ್ ಕೀಪರನ್ನು ನೋಡಿ ಬ್ಯಾಟ್ ಮಾಡುವ ಕ್ರಿಕೆಟಿಗ: ಪ್ರಧಾನಿಗೆ ರಾಹುಲ್ ಚಾಟಿ !

ಮೋದಿ ವಿಕೆಟ್ ಕೀಪರನ್ನು ನೋಡಿ ಬ್ಯಾಟ್ ಮಾಡುವ ಕ್ರಿಕೆಟಿಗ: ಪ್ರಧಾನಿಗೆ ರಾಹುಲ್ ಚಾಟಿ !

ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಸಿಂಧನೂರು, ಫೆ.12: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿರುವ ರಾಹುಲ್ ಗಾಂಧಿ ಮೋದಿ ವಿಕೆಟ್ ಕೀಪರನ್ನು ನೋಡಿ ಬ್ಯಾಟ್ ಮಾಡುವ ಕ್ರಿಕೆಟಿಗ ಎಂದು ಗೇಲಿ ಮಾಡಿದ್ದಾರೆ,

ಇಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, “ಸಚಿನ್ ತೆಂಡೂಲ್ಕರ್ ಅವರು ವಿಕೆಟ್ ಕೀಪರನ್ನು ನೋಡುತ್ತಾ ಬ್ಯಾಟಿಂಗ್ ಮಾಡಿದ್ದರೆ ಒಂದು ರನ್ ಗಳಿಸಲು ಸಾಧ್ಯವಾಗುತ್ತಿತ್ತೇ? ನಮ್ಮ ಪ್ರಧಾನಿಯವರು ಕೂಡ ಇಂತಹದ್ದೇ ಕ್ರಿಕೆಟಿಗನಾಗಿದ್ದಾರೆ. ವಿಕೆಟ್ ಕೀಪರನ್ನು ನೋಡಿಕೊಂಡು ಬ್ಯಾಟ್ ಮಾಡುವ ಇವರಿಗೆ ಬಾಲ್ ಎಲ್ಲಿಂದ ಬರುತ್ತದೆ ಎನ್ನುವುದೇ ಗೊತ್ತಿಲ್ಲ” ಎಂದು ರಾಹುಲ್ ಹೇಳಿದ್ದಾರೆ.

ಇದಕ್ಕೂ ಮೊದಲು ರಾಯಚೂರಿನಲ್ಲಿ ಮಾತನಾಡಿದ ಅವರು, ಮೋದಿಯವರ ಆಡಳಿತಾವಧಿ ಮುಗಿದಿದೆ. ಆದ್ದರಿಂದ ಅವರು ಸರಕಾರದ ಸಾಧನೆಯ ಬಗ್ಗೆ ಮಾತ್ರ ಮಾತನಾಡಬೇಕು ಎಂದರು.

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪೋಲಿಸ್ ಹೋಮ್ ಗಾರ್ಡ್ ನ ಬೃಹತ್ ಕಾಮಕಾಂಡ ಬಯಲು !

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!