ರಾಜಸ್ಥಾನದಲ್ಲಿ ಭರ್ಜರಿ ಚುನಾವಣಾ ತಯಾರಿಯತ್ತ ಕಾಂಗ್ರೆಸ್!
ಜೈಪುರ್,ಫೆ.01: ರಾಜಸ್ತಾನದಲ್ಲಿ ಉಪಚುನಾವಣೆ ರಂಗೇರಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಚಲನ ಮೂಡಿಸಿದ್ದು, ಮಂಡಲ್‌ಗಢ್ ವಿಧಾನಸಭಾ ಕ್ಷೇತ್ರದಲ್ಲಿ `ಕೈ’ ಗೆದ್ದಿದೆ.
ಹೌದು, ಮಂಡಲ್‌ಗಢ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, `ಕೈ’ ಅಭ್ಯರ್ಥಿ ವಿವೇಕ್ ಧಾಕಡ್ 11 ಸಾವಿರ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಇನ್ನು ಅಲ್ವಾರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕರಣ್ ಸಿಂಗ್ 72 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದು, ಬಿಜೆಪಿ ಅಭ್ಯರ್ಥಿ ಜಸ್ವಂತ್ ಯಾದವ್ ಹಿಂದೆ ಬಿದ್ದಿದ್ದಾರೆ.
ಇನ್ನು ಅಜ್ಮೇರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘು ಶರ್ಮಾ ಮುನ್ನಡೆಯಲ್ಲಿದ್ದಾರೆ. ಇನ್ನು ಮಂಗಲ್‌ಗಢ್ ಉಪ ಚುನಾವಣೆ ಎರಡೂ ರಾಷ್ಟೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಆದ್ರೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಜಯ ಸಾಧಿಸಿತು. ಇನ್ನು ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.
Comments
Post a Comment