ಫೆಬ್ರವರಿ 17 ಕ್ಕೆ ಪಿಎಫ್ಐ ಯಿಂದ ರಾಷ್ಟ್ರವ್ಯಾಪಿ "ಪಾಪ್ಯುಲರ್ ಫ್ರಂಟ್ ಡೇ" ಆಚರಣೆ!

ಫೆಬ್ರವರಿ 17 ಕ್ಕೆ ಪಿಎಫ್ಐ ಯಿಂದ ರಾಷ್ಟ್ರವ್ಯಾಪಿ "ಪಾಪ್ಯುಲರ್ ಫ್ರಂಟ್ ಡೇ" ಆಚರಣೆ!

ಬ್ರೇಕಿಂಗ್ ನ್ಯೂಸ್ ಮಂಗಳೂರು
ಫೆ: 14 , ದಿನಾಂಕ ಫೆಬ್ರವರಿ 17 ರಂದು ರಾಜ್ಯದಲ್ಲಿ ದಾವಣಗೆರೆ ಮತ್ತು ಸುಳ್ಯದಲ್ಲಿ ಯೂನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.
ಪಾಪ್ಯುಲರ್ ಫ್ರಂಟ್ ಡೇ “ನಾವು ಜನರೊಂದಿಗೆ - ಜನರು ನಮ್ಮೊಂದಿಗೆ”  ಸಾಮಾಜಿಕ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಸಕ್ರಿಯವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೀಗ ತನ್ನ 11ನೇ ವರ್ಷಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ.  ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಅಲ್ಪಸಂಖ್ಯಾತ, ದಲಿತ, ರೈತ, ಹಿಂದುಳಿದ ವರ್ಗಗಳು ನಿರಂತರವಾಗಿ ಶೋಷಣೆಗೊಳಗಾಗಿ, ಹಕ್ಕುಗಳಿಂದ ವಂಚಿತರಾದ ವೇಳೆ, 80ರ ದಶಕದ ಕೊನೆಯ ಮತ್ತು 90ರ ದಶಕದ ಆದಿಯಲ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಸಂಘಟನೆಯು 2007ರ ವೇಳೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಚಳುವಳಿಯ ರೂಪದಲ್ಲಿ ಹೊರಹೊಮ್ಮಿತು.
ವಿವಿಧ ಸರಕಾರಗಳು ಮುಸ್ಲಿಮ್ ಸಮುದಾಯದ ಹಿಂದುಳಿವಿಕೆಯ ಬಗ್ಗೆ ಹಲವಾರು ಆಯೋಗಗಳನ್ನು ರಚಿಸಿ ಮುಸ್ಲಿಮರು ಶೈಕ್ಷಣಿಕ, ಔದ್ಯೋಗಿಕ ಮತ್ತು ಅಧಿಕಾರ ಕ್ಷೇತ್ರಗಳಿಂದ ವಂಚಿತರಾಗಿದ್ದಾರೆ ಎಂಬುವುದನ್ನು ಖಚಿತಪಡಿಸಿದೆ. ಈ ವೇಳೆ ನಾಗರಿಕರ ಮಧ್ಯೆ ಸಾಮಾಜಿಕ ನ್ಯಾಯದ  ಪ್ರಜ್ಞೆಯನ್ನು ಮೂಡಿಸಿ ಸಮಗ್ರ ಸಬಲೀಕರಣದ ಅಜೆಂಡಾದೊಂದಿಗೆ ಪಾಪ್ಯುಲರ್ ಫ್ರಂಟ್ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯು ತನ್ನ 11ನೇ ವರ್ಷಾಚರಣೆಯ ಸಂದರ್ಭವಾದ ಫೆಬ್ರವರಿ 17ರಂದು  ನಡೆಯುವ ಕಾರ್ಯಕ್ರಮದ ಅಂಗವಾಗಿ ಸಂಘಟನೆಯ ಸ್ಥಳೀಯ ಘಟಕಗಳು ಮನೆ ಮನೆಗೆ ಭೇಟಿ ನೀಡಿ “ನಾವು ಜನರೊಂದಿಗೆ – ಜನರು ನಮ್ಮೊಂದಿಗೆ” ಎಂಬ   ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಕೈಗೊಂಡಿವೆ. ಈ ಪ್ರಯುಕ್ತ ಪಾಪ್ಯುಲರ್ ಫ್ರಂಟ್‍ನ ಪ್ರತಿನಿಧಿಗಳು 23 ರಾಜ್ಯಗಳಾದ್ಯಂತ ಸುಮಾರು 5 ದಶಲಕ್ಷ ಮಂದಿಯನ್ನು ಭೇಟಿಯಾಗಿದ್ದಾರೆ. ಅದರೊಂದಿಗೆ ಸಮಾಜ ಸೇವಾ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನಗಳು ನಡೆದಿದೆ.
ಈ ಬಾರಿಯೂ ಸಂಘಟನೆಯು ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ  ಯೂನಿಟ್ ಮಟ್ಟದಲ್ಲಿ ಧ್ವಜಾರೋಹಣ ಮತ್ತು ಜನಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ ಫೆಬ್ರವರಿ 17 ರಂದು ರಾಜ್ಯದಲ್ಲಿ ದಾವಣಗೆರೆ ಮತ್ತು ಸುಳ್ಯದಲ್ಲಿ ಯೂನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯ ಸಮಿತಿಯು ವಿನಂತಿಸಿಕೊಳ್ಳುತ್ತಿದೆ.

ವರದಿ : ಮಾಧ್ಯಮ ಸಂಯೋಜಕರು
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ