ಝೈಬುನ್ನಿಸ ಶಂಕಾಸ್ಪದ ಸಾವು ಪ್ರಕರಣ, ದ.ಕ. ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಪ್ರತಿಭಟನೆ!

ಬ್ರೇಕಿಂಗ್ ನ್ಯೂಸ್, ಕರ್ನಾಟಕ ವರದಿ,
ಫೆ :03, ಶನಿವಾರ,
ಮಂಗಳೂರು, ಫೆ. 3: ವಿದ್ಯಾರ್ಥಿನಿ ಝೈಬುನ್ನಿಸಾ ನಿಗೂಢ ಮೃತ್ಯು ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಮಾತನಾಡಿದ ಅವರು ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ಕೊಲೆ ಹೆಚ್ಚಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ,* ಇಲ್ಲವಾದಲ್ಲಿ ಇದು ಇನ್ನೂ ಹೆಚ್ಚಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಝೈಬುನ್ನಿಸಾ ನಿಗೂಢ ಮೃತ್ಯುವನ್ನು ಸಿಒಡಿ ತನಿಖೆ ನಡೆಸಬೇಕು, ಝೈಬುನ್ನಿಸಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಒತ್ತಾಯಿಸಲಾಯಿತು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಅಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿ.ಎಂ. ಕಾಮಿಲ್ ಸಖಾಫಿ, ಸುಫ್ಯಾನ್ ಸಖಾಫಿ, ಇಸಾಕ್ ಝುಹ್ರಿ, ಅಶ್ರಫ್ ಕಿನಾರ, ಶಾಕಿರ್ ಹಾಜಿ ಮಿತ್ತೂರು, ಅಬ್ದುಲ್ ಹಮೀದ್ ಬಜ್ಪೆ, ಮಾಜಿ ಮೇಯರ್ ಕೆ. ಅಶ್ರಫ್, ಮುನೀರ್ ಸಖಾಫಿ, ನಝೀರ್ ಹಾಜಿ ಕಾಶಿಪಟ್ನ, ಯೂಸುಫ್ ಹಾಜಿ ಹುಬ್ಬಳ್ಳಿ, ಝೈಬುನ್ನಿಸಾರ ತಂದೆ ಇಬ್ರಾಹೀಂ ಹಾಗು ಇತರರು ಉಪಸ್ಥಿತರಿದ್ದರು.

Comments
Post a Comment