ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ!

ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ! 

ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಫೆ: 24, ಶನಿವಾರ , ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯ ವತಿಯಿಂದ “ ಸಾಂಸ್ಥಿಕ ದಬ್ಬಾಳಿಕೆ ನಿಲ್ಲಿಸಿ, ವಿದ್ಯಾರ್ಥಿಗಳ ರಕ್ಷಣೆ ಖಾತರಿಪಡಿಸಿ” ಎಂಬ ಘೋಷಣೆಯೊಂದಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ವಿದ್ಯಾರ್ಥಿ ಹೋರಾಟ ಸಮಾವೇಶವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷರಾದ ಇಮ್ರಾನ್ ಪಿ.ಜೆ ವಹಿಸಿದ್ದರು. 
ಮುಖ್ಯ ಭಾಷಣ ಮಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಧ್ಯಕ್ಷರಾದ ಮಹಮ್ಮದ್ ತಫ್ಸೀರ್ ರಾಜ್ಯದಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವು ಮಿತಿ ಮೀರುತ್ತಿದ್ದು, ದೇಶವನ್ನು ಕಟ್ಟಿಬೆಳೆಸಬೇಕಾದಂತವರು ಇಂದು ಸಾಂಸ್ಥಿಕ ದಬ್ಬಾಳಿಕೆಗಳಿಗೆ ಒಳಗಾಗಿ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ರಕ್ಷಣೆಯ ವಿಚಾರದಲ್ಲಿ ಆಡಳಿತ ವರ್ಗ ಹಾಗೂ ವಿರೋಧ ಪಕ್ಷದ ವೈಫಲ್ಯತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿ ಸಮುದಾಯವು ಖಾಸಗಿಕರಣ ಮತ್ತು ಕಪಟ ರಾಜಕಾರಣದ ಬಲಿಪಶುಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದಂತಹ  ರಾಷ್ಟ್ರೀಯ ಪ್ರ.ಧಾನ ಕಾರ್ಯದರ್ಶಿಗಳಾದ ಪಿ ಮಹಮ್ಮದ್ ನಾಸಿರ್ ಮಾತನಾಡಿ ದೇಶದಲ್ಲಿ ವಿದ್ಯಾರ್ಥಿ ಚಳುವಳಿಗಳನ್ನು ಧಮನಿಸುವಂತಹ ಷಡ್ಯಂತ್ರಗಳು ನಡೆಯುತ್ತಿದ್ದು, ಇದರ ಭಾಗವಾಗಿ ಕ್ಯಾಂಪಸ್ ಫ್ರಂಟ್ ಮೇಲೆ ನಿರಾಧಾರ ಆರೋಪಗಳು ಕೇಳಿ ಬರುತ್ತಿದ್ದು, ಇವೆಲ್ಲವನ್ನು ಮೆಟ್ಟಿ ನಿಂತು ಹೋರಾಡುವವಂತಹ  ಉನ್ನತ ಜವಾಬ್ದಾರಿ ವಿದ್ಯಾರ್ಥಿ ಸಮುದಾಯಕ್ಕಿದೆ ಎಂದು ಹೇಳಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಸರಕಾರ ಅಧೀನದಲ್ಲಿಯೇ ಮತ್ತು ಅದರ ಕೈಗೊಂಬೆಯಾಗಿರದೆ ಸ್ವತಂತ್ರವಾಗಿ ಕಾರ್ಯಾಚರಿಸುವಂತಹ ಶಿಕ್ಷಣ ಸಮಿತಿಯನ್ನು ನೇಮಿಸಬೇಕು. ಇದರಿಂದ ಬಡವ ಶ್ರೀಮಂತ ಎನ್ನದೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬಹುದು. ಅಲ್ಲದೆ ಇದರ ಬಗ್ಗೆ ಸಾರ್ವಜನಿಕ ಸಭೆಗಳು ಚರ್ಚೆಗಳು ನಡೆಯಬೇಕಾಗಿದೆ ಎಂದರು.

 ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗೆಪೇಟೆ ಮಾತನಾಡಿ ಕ್ಯಾಂಪಸ್‍ಗಳಲ್ಲಿ  ನಡೆಯುತ್ತಿರುವಂತಹ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಹಾಗೂ ಹಿಂದುತ್ವ ಶಕ್ತಿಗಳ  ಕ್ರೌರ್ಯತೆಯ ವಿರುದ್ಧ ವಿದ್ಯಾರ್ಥಿ ಸಮೂಹವು ಒಗ್ಗಾಟ್ಟಾಗಿ ಹೋರಾಡಿ ದೇಶದ ಸಾರ್ವಬೌಮತೆಯನ್ನು ಕಾಪಾಡಬೇಕಾಗಿದೆ ಎಂದರು . ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ಸಮಾರೋಪ ಭಾಷಣ ಮಾಡಿದರು.  
ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್, ಇರ್ಷಾದ್, ಅಥಾವುಲ್ಲಾ, ದಲಿತ ಹೋರಾಟಗಾರರಾದ ಹರ್ಷಿತ್ ಕುಮಾರ್ , ಪಿಎಫ್‍ಐ ಪುತ್ತೂರು ತಾಲೂಕು ಅಧ್ಯಕ್ಷ ರಿಝ್ವಾನ್ ಜಿಲ್ಲಾ ಉಪಾಧ್ಯಕ್ಷೆ ಮುರ್ಶಿದಾ, ಸಾಹುಲ್ ಹಮೀದ್, ವಝೀರ್, ನಬೀಲ್, ಸವಾದ್ ಉಪಸ್ಥಿತರಿದ್ದರು. ಮುಫೀದಾ ನಿರೂಪಿಸಿದರು ಜಿಲ್ಲಾ ಕಾರ್ಯದರ್ಶಿ ಸಾದಿಕ್ ಪುತ್ತೂರು ವಂದಿಸಿದರು.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ