ಮೋದಿಯವರೇ ನಮ್ಮದು ಭ್ರಷ್ಟ ಸರಕಾರ ಎನ್ನುವುದನ್ನು ನಿರೂಪಿಸಿ: ಪಿಎಂಗೆ ಸಿಎಂ ಚಾಲೆಂಜ್!

ಮೋದಿಯವರೇ ನಮ್ಮದು ಭ್ರಷ್ಟ ಸರಕಾರ ಎನ್ನುವುದನ್ನು ನಿರೂಪಿಸಿ: ಪಿಎಂಗೆ ಸಿಎಂ ಚಾಲೆಂಜ್ !

Monday, 06
ಬೆಂಗಳೂರು,: ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.*
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಕರ್ನಾಟಕದ ಕಾಂಗ್ರೆಸ್ ಸರಕಾರವು ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ.

 ರಾಜ್ಯದ ಹಾಗು ಜನರ ಒಳಿತಿನ ಬದಲಾಗಿ ರಾಜ್ಯ ಸರಕಾರ ಪಕ್ಷದ ಒಳಿತಿಗೆ ಹೆಚ್ಚು ಗಮನ ನೀಡಿದೆ. ರೈತರು, ಯುವಕರು, ಮಧ್ಯಮ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೂ ಸರಕಾರದ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ್ದರು.
ಪ್ರಧಾನಿ ಹೇಳಿಕೆಗೆ ಟ್ವಿಟರ್ ಮೂಲಕ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, "ಪ್ರೀತಿಯ ನರೇಂದ್ರ ಮೋದಿಯವರೇ, ದೇಶದ ಪ್ರಧಾನಮಂತ್ರಿಯಾಗಿ ನಿಮ್ಮ ಮಾತುಗಳು ಹೆಚ್ಚು ವಿಶ್ವಾಸಾರ್ಹತೆಯನ್ನು ಹೊಂದಿರಬೇಕು.
ಭ್ರಷ್ಟಾಚಾರ ಹಾಗು ಕೆಟ್ಟ ಆಡಳಿತದ ಎಂಬ ನಿಮ್ಮ ಆರೋಪಗಳನ್ನು ಸತ್ಯಾಂಶದೊಂದಿಗೆ ನೀವು ನಿರೂಪಿಸಬೇಕು ಎಂದು ನಾನು ವಿನಂತಿಸುತ್ತೇನೆ. ಘನತೆ ಹಾಗು ಸತ್ಯದ ಆಧಾರದಲ್ಲಿ ಈ ಚುನಾವಣೆಯಲ್ಲಿ ಹೋರಾಡುವ" ಎಂದಿದ್ದಾರೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ