ಕಳಚಿ ಬಿತ್ತು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ನ ಹಿಂದುತ್ವವಾದಿ ಮುಖ !
ಕಳಚಿ ಬಿತ್ತು ಸುವರ್ಣ ನ್ಯೂಸ್ ಸಂಪಾದಕ ಅಜಿತ್ ನ ಹಿಂದುತ್ವವಾದಿ ಮುಖ !
ಅತ್ಯಂತ ಕೀಳುಮಟ್ಟದ ಭಾಷೆ ಬಳಸಿ ಸಂದೇಶ ರವಾನಿಸಿದ ಸುವರ್ಣ ಟಿವಿ ‘ಅಜಿತ್’: ಫೇಸ್ಬುಕ್‌ನಲ್ಲಿ ಸಖತ್ ವೈರಲ್ !
ಬೆಂಗಳೂರು,ಎ.9: ಸುವರ್ಣ ನ್ಯೂಸ್‌ನ ಸಂಪಾದಕರಾದ
‘ಅಜಿತ್ ಹನುಮಕ್ಕನವರ್’ ಎಂಬ ವ್ಯಕ್ತಿ ಅತ್ಯಂತ ಕೀಳುಮಟ್ಟದಲ್ಲಿ ಸಂದೇಶದ ರವಾನಿಸಿ ಅವಹೇಳಿಸಿದ ಬಗ್ಗೆ ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸ್ಕ್ರೀನ್ ಶಾಟ್ ಒಂದು ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಜೆಪಿ ಸಂಸದ ರಾಜೀವ್ ಚಂದ್ರ ಶೇಖರ್ ಅವರ ಮಾಲಕತ್ವದ ಸುವರ್ಣ ನ್ಯೂಸ್ ಎಂಬ ಕನ್ನಡ ವಾರ್ತಾವಾಹಿನಿಯ ಸಂಪಾದಕರಾದ ಅಜಿತ್ ಹನುಮಕ್ಕನವರ್ ಈ ಹಿಂದಿನಿಂದಲೂ ಸದಾ ಬಲಪಂಥೀಯ ವಿಚಾಧಾರೆಯನ್ನು ಓಲೈಸಿ ಮಾತನಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿತ್ತು.
ಮೊನ್ನೆ ಚಿತ್ರದುರ್ಗದ ಸಭೆಯೊಂದರಲ್ಲಿ ಮಾತನಾಡಿ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮೋದಿಯ ಸಭೆಯಲ್ಲಿ ಕುರ್ಚಿ ಎಸೆದು ಗದ್ದಲವೆಬ್ಬಿಸಿ 2ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಶ್ನಿಸಿ ಎಂದು ಕನ್ನಡಿಗರಲ್ಲಿ ವಿನಂತಿಸಿದ ಬಗ್ಗೆ ಫೇಸ್ಬುಕ್ ಲೈವ್ ಮಾಡಿದ ಸುವರ್ಣ ಟಿವಿ ಅಜಿತ್ ಜಿಗ್ನೇಶ್ ಈ ರೀತಿ ಹೇಳಬಹುದೇ..? ಇವರು ಕರ್ನಾಟಕಕ್ಕೆ ಬರುವುದು ಜಗಳ ಮಾಡಿಸುವುದಕ್ಕಾ ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತಿ ಪಕ್ಕಾ ಬಿಜೆಪಿ ಕಾರ್ಯಕರ್ತನಂತೆ ಮಾತನಾಡಿದ್ದರು ಎನ್ನಲಾಗಿದೆ.
ಅಜಿತ್ ಅವರ ಲೈವ್ ವೀಡಿಯೋದ ವಿಚಾರವನ್ನು ಪ್ರಶ್ನಿಸಿ ಫೇಸ್ಬುಕ್ ಬಳಕೆದಾರರೊಬ್ಬರು, ಬಿಜೆಪಿ ನಾಯಕರು ಬೇಕಾಬಿಟ್ಟಿ ಹೇಳಿಕೆ ಕೊಡುವಾಗ ನೀವ್ಯಾಕೆ ಮಾತಾಡಲ್ಲ? ನಿಮ್ಮ ಬಿಜೆಪಿ ಮುಖಂಡನಾದ ಮಾಲಕನನ್ನು ಓಲೈಸಲು ಒಂದು ಪ್ರತ್ಯೇಕ ಪಕ್ಷದ ಮತ್ತು ಪ್ರತ್ಯೇಕ ಧರ್ಮದ ವಿರುದ್ಧ ನಾಮರ್ಧರ ಹಾಗೆ ನೀವು ಯಾವಾಗಲೂ ಚರ್ಚೆ ಮಾಡುತ್ತಿರುತ್ತೀರಲ್ಲ, ನಿಮ್ಮ ಸುವರ್ಣ ಚಾನಲ್‌ಗೆ ನನ್ನ ಧಿಕ್ಕಾರ ಎಂದು ಕೇಳಿ ಅಜಿತ್‌ಗೆ ವೈಯುಕ್ತಿಕ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.
ಈ ಸಂದೇಶಕ್ಕೆ ಉತ್ತರಿಸಿರುವ ಅಜಿತ್ ನನ್ನನ್ನು ನಾಮರ್ಧ ಅಂತ ಕರೆದವರು ಒಂದೊಂದು ರಾತ್ರಿಯ ಮಟ್ಟಿಗೆ ತಮ್ಮ ಅಕ್ಕನನ್ನೋ-ಅಮ್ಮನನ್ನೋ ಕಳುಹಿಸಿ ಕೊಡಿ ಎಂದು ಕೀಳು ಮಟ್ಟದಲ್ಲಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಇದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಇಂತಹ ಸೆಲೆಬ್ರಿಟಿ ಇಮೇಜಿನ ಜನಗಳು ಈ ರೀತಿ ಅಡ್ನಾಡಿಗಳ ಭಾಷೆ ಬಳಸುವುದು ಎಷ್ಟು ಸಮಂಜಸ ಎಂಬ ಪ್ರತಿಕ್ರಿಯೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
Comments
Post a Comment