ಬಿಜೆಪಿಗೆ ಮಗದೊಂದು ಶಾಕ್ ನೀಡಿದ ಶಿವಸೇನೆ! ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರದಲ್ಲಿ ಸ್ಪರ್ಧೆ ?
ಬಿಜೆಪಿಗೆ ಮಗದೊಂದು ಶಾಕ್ ನೀಡಿದ ಶಿವಸೇನೆ! ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರದಲ್ಲಿ ಸ್ಪರ್ಧೆ ?
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಬೆಳಗಾವಿ,ಎ.02: ಮುಂಬರುವಾ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮಹಾರಾಷ್ಟ್ರ ಮೂಲದ ಶಿವಸೇನೆ ಘೋಷಿಸಿದೆ.
ಕರ್ನಾಟಕ ಚುನಾವಣೆಯಲ್ಲಿ ಮರಾಠಿ ಜನರ ಹಿತ ಕಾಯುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ(ಎಂಇಎಸ್) ನಮ್ಮ ಬೆಂಬಲ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. 2019 ಬಿಜೆಪಿಯ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ರಾವತ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಬೆಳಗಾಂ ಹಾಗೂ ಉತ್ತರ ಕನ್ನ್ಡ ಜಿಲ್ಲೆಯ ಮರಾಠಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಿವಸೇನೆ ತನ್ನ ರಾಷ್ಟ್ರೀಯ ಮಿತ್ರ ಪಕ್ಷ ಬಿಜೆಪಿಯ ವಿರುದ್ಧ ಸ್ಪರ್ಧಿಸಲಿದೆ ಎಂದು ರಾವತ್ ತಿಳಿಸಿದ್ದಾರೆ.
Comments
Post a Comment