ಕನ್ನಡ ದ್ರೋಹಿ ಬಿಜೆಪಿಯನ್ನು ಕರ್ನಾಟಕದಿಂದ ಒದ್ದೋಡಿಸಬೇಕಾಗಿದೆ !

ಬ್ರೇಕಿಂಗ್ ನ್ಯೂಸ್ ಮಂಗಳೂರು ವಿಶೇಷ ವರದಿ
ಬೆಂಗಳೂರು : ಮಾ , 13, ವಿಧಾನ ಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಹಿನ್ನಲೆಯಲ್ಲಿ ಈ ಎರಡೂ ಪಕ್ಷದವರು ಎಂತಹ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದಾರೆ ಎಂಬುದನ್ನು ಈ ಕೆಳಕಾಣಿಸಿದಂತೆ ಗಮನಿಸಬಹುದಾಗಿದೆ.*
ಈ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯ ಸಭೆಗೆ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಹಾಗೂ ಎಲ್.ಹನುಮಂತಯ್ಯನವರಿಗೆ ಅವಕಾಶ ನೀಡಿದೆ. ಹಾಗೆಯೇ ಬಿಜೆಪಿ ಪಕ್ಷವು ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು ವಾಸ್ತವದಲ್ಲಿ ಆಯ್ಕೆಯಾಗಬೇಕಾಗಿದ್ದ ಎನ್.ಶಂಕರಪ್ಪ ಅವರನ್ನು ಆಶ್ಚರ್ಯಕರ ರೀತಿಯಲ್ಲಿ ಕೈಬಿಡಲಾಗಿದೆ. ಆದರೆ ಯಡಿಯೂರಪ್ಪನವರೇ ಇವರಿಗೆ ನಾಮಪತ್ರವನ್ನು ಸಿದ್ಧ ಮಾಡಿಕೊಳ್ಳಲು ಸೂಚಿಸಿದ್ದರು.
ಕಾಂಗ್ರೆಸ್ ಪಕ್ಷವು ತನ್ನ ಪಕ್ಷಕ್ಕಾಗಿ ಬಹು ಕಾಲದಿಂದ ದುಡಿಯುತ್ತಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಾಸೀರ್ ಹುಸೇನ್ ಅವರಿಗೆ ಅವಕಾಶ ನೀಡಿದ್ದು ಒಕ್ಕಲಿಗರ ಪ್ರತಿನಿಧಿಯಾಗಿ ಸಿ.ಜಿ.ಚಂದ್ರಶೇಖರ್ ಅವರಿಗೆ ಮತ್ತು ಪರಿಶಿಷ್ಟ ಜಾತಿಯ ವಿಭಾಗಕ್ಕೆ ಸೇರಿದ ಹಾಗೂ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಎಲ್.ಹನುಮಂತಯ್ಯನವರಿಗೆ ಅವಕಾಶ ನೀಡಿದ್ದಾರೆ. *ರಾಜ್ಯ ಸಭೆಗೆ ಈ ಬಾರಿ ಮೂವರು ಕನ್ನಡಿಗರನ್ನೇ ನೇಮಿಸಲು ಕಾಂಗ್ರೆಸ್ ಸರ್ಕಾರವು ನಿರ್ಧರಿಸಿದ್ದು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿಯವರ ಬಳಿ ತಮ್ಮ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದು ಇಂತಹ ಉತ್ತಮ ಬೆಳವಣಿಗೆಗೆ ಕಾರಣವಾಗಿದೆ.*
ಇನ್ನು ಬಿಜೆಪಿ ಆಯ್ಕೆಗಳ ಕುರಿತು ನೋಡುವುದದಾದರೆ ಇವರಿಗೆ ಕನ್ನಡಿಗರಿಗಿಂತ ಬೇರೆ ರಾಜ್ಯದವರ ಮೇಲೆಯೇ ಹೆಚ್ಚಿನ ವ್ಯಾಮೋಹ ಇದ್ದು ಪಕ್ಷಕ್ಕಾಗಿ ದುಡಿದವರಿಗೂ ಸಹ ಯಾವುದೇ ಅವಕಾಶವನ್ನು ನೀಡದೇ ಇರುವುದು ಸ್ಪಷ್ಟವಾಗಿದೆ.
*ಬಿಜೆಪಿಯು ಕನ್ನಡಿಗರನ್ನು ಕಡೆಗಣಿಸಿದ್ದು ಇದೇ ಮೊದಲಲ್ಲ!*
ಬಿಜೆಪಿ ಪಕ್ಷದವರು ಸದಾ ಕನ್ನಡ ವಿರೋಧೀಯಾಗಿ ವರ್ತಿಸುತ್ತಿರುವುದು ಸಹಜವೇ ಆಗಿದ್ದು ಈ ಬೆಳವಣಿಗೆಯೂ ಸಹ ಅದಕ್ಕೆ ಹೊರತಾಗಿಲ್ಲ. 2010 ರಲ್ಲಿ ತೆಲುಗು ನಾಡಿನ ವೆಂಕಯ್ಯನಾಯ್ಡು ಅವರಿಗೆ ಅವಕಾಶ ನೀಡಿದ್ದ ಬಿಜೆಪಿಯು 2011 ರಲ್ಲಿ ತಮಿಳುನಾಡಿನ ಹೇಮಾ ಮಾಲಿನಿಯವರಿಗೆ ಅವಕಾಶವನ್ನು ನೀಡಿತ್ತು. 2013 ರಲ್ಲಿ ತಮಿಳು ನಾಡಿನ ರಂಗಸಾಯೆ ರಾಮಕೃಷ್ಣ ಅವರಿಗೆ ಅವಕಾಶ ನೀಡಿದ್ದ ಬಿಜೆಪಿಯವರು ಈ ಬಾರಿ ಕೇರಳದ ಶ್ರೀಮಂತ ಉದ್ಯಮಿ ರಾಜೀವ್ ಚಂದ್ರಶೇಖರ್ ಗೆ ಅವಕಾಶ ನೀಡಿದ್ದಾರೆ.
ಆದರೆ ಕರ್ನಾಟಕದ ನೆಲ, ಜಲ . ಭಾಷೆ ಮತ್ತು ನಮ್ಮ ಜನತೆಯ ಬಗ್ಗೆ ಯಾವುದೇ ಕಾಳಜಿಯಿಲ್ಲದ *ಕನ್ನಡ ವಿರೋಧೀ ರಾಜೀವ್ ಚಂದ್ರಶೇಖರ್ ಅವರಿಗೆ ಮತ್ತೊಮ್ಮೆ ಬಿಜೆಪಿಯು ಅವಕಾಶ ನೀಡಿದ್ದು, ಕನ್ನಡಿಗರ “ ರಾಜೀವ್ ಈ ಬಾರಿ ಬೇಡ” ಎಂಬ ವಿನಂತಿಗೆ ಕಿಂಚಿತ್ ಬೆಲೆ ನೀಡದಂತೆ ವರ್ತಿಸಿದ್ದಾರೆ. ಇದರೊಂದಿಗೆ ಕೇರಳದ ಉದ್ಯಮಿಗೆ ಕರ್ನಾಟಕದಲ್ಲಿ ಅಧಿಕಾರ ನೀಡಿರುವುದು ಏಕೆ ಎಂಬುದೂ ಸಹ ಬಹುತೇಕ ಕನ್ನಡಿಗರ ಪ್ರಶ್ನೆಯೂ ಆಗಿದೆ.* ಒಟ್ಟಿನಲ್ಲಿ ಕನ್ನಡೇತರರಿಗೆ ಬಿಜೆಪಿಯು ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಸ್ಪಷ್ಟವಾಗಿದೆ.
ರಾಜ್ಯ ಸಭೆಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಯು ಎರಡೂ ಪಕ್ಷಗಳ ನಿಲುವನ್ನು ಸ್ಪಷ್ಟಪಡಿಸಿವೆ. *ಕಾಂಗ್ರೆಸ್ ಪಕ್ಷವು ಪಕ್ಷಕ್ಕಾಗಿ ದುಡಿದವರಿಗೆ, ಹಿಂದುಳಿದ ವರ್ಗಗಳಿಗೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯವನ್ನು ನೀಡಿ ಸಾಮಾಜಿಕ ನ್ಯಾಯ ಸಾಧನೆ ಕಡೆ ಹೆಜ್ಜೆ ಹಾಕಿದ್ದರೆ, ಬಿಜೆಪಿ ಪಕ್ಷವು ಮತ್ತೆ ಕನ್ನಡೇತರರಿಗೆ ಹಾಗೂ ಶ್ರೀಮಂತರಿಗೆ ಮಾತ್ರ ಮನ್ನಣೆ ನೀಡಿ ಕನ್ನಡಿಗರ ವಿನಂತಿಯನ್ನು ತಳ್ಳಿ ಹಾಕಿ ಕರ್ನಾಟಕದ ಜನರಿಗೆ ಮತ್ತೊಮ್ಮೆ ಅನ್ಯಾಯ ಮಾಡಿದೆ.*
#ಕರ್ನಾಟಕವಿರೋಧಿಬಿಜೆಪಿ
#KarnatakaVirodhiBJP

Comments
Post a Comment