ನಗ್ನವಾದ ಬಿಜೆಪಿಯ ಸುಳ್ಳಿನ ಕಂತೆ ! ಅನ್ನಭಾಗ್ಯ ನಮ್ಮದು ಎನ್ನುವ ಬಿಜೆಪಿಗರ ಸೋಗಲಾಡಿತನಕ್ಕೆ ಏನನ್ನೋಣ ?

"ಅನ್ನಭಾಗ್ಯ ನಮ್ಮದು!" ಎನ್ನುವ ಬಿಜೆಪಿ ಹೇಳುವ ಹಸೀಸುಳ್ಳನ್ನು EXPOSE ಮಾಡಿರುವೆ. ಓದಿ!

ಈ ಸತ್ಯಗಳು ಕಾಂಗ್ರೆಸಿಗರ ತಲೆಗೆ ಹೊಳೆಯುವುದಿಲ್ಲವೋ... ಇಲ್ಲಾ, ಈ ದಿವ್ಯ ಮೌನಗಳ ಹಿಂದೆ ಬೇರ್ಯಾವ ದೂ(ದು)ರಾಲೋಚನೆಗಳಿವೆಯೋ ನನಗಂತೂ ತಿಳಿಯದು. ಬಿಜೆಪಿ ಹೇಳುವ ಈ ಸುಳ್ಳುಗಳನ್ನು ಹಸಿ ಸುಳ್ಳು ಎಂದು ತೋರಿಸಲೂ ಸಹ ಇವರ ಪಕ್ಷ ಮತ್ತು ಇವರ ಐಟಿ ಸೆಲ್‌ಗೆ ಸಾದ್ಯವಾಗುತ್ತಿಲ್ಲವೆನ್ನೋದು ಮಾತ್ರ ವಿಚಿತ್ರ. ಅಂದಹಾಗೆ, ಜನಪ್ರಿಯ ಅನ್ನ ಭಾಗ್ಯದ ಬಗ್ಗೆ ಬಿಜೆಪಿ ಹೇಳುವ ಹಸಿ ಸುಳ್ಳು ಎಕ್ಸ್‌ಪೋಸ್ ಮಾಡುವುದು ಅಷ್ಟೇನೂ ಕಷ್ಟವೇನಲ್ಲ.

ಈ ಅನ್ನ ಭಾಗ್ಯ ಯೋಜನೆಯಲ್ಲಿ ಕೇಂದ್ರದ ಪಾಲು 29 ರೂಪಾಯಿಯಾದರೆ ರಾಜ್ಯದ ಪಾಲು ಕೇವಲ 3 ರೂ. ಎನ್ನುವುದು ಬಿಜೆಪಿಯ ರಾಗ. ಇವತ್ತು ಇದನ್ನೇ ಸಿ. ಟಿ. ರವಿ ಕೂಡ ತಮ್ಮ ಟ್ವಿಟರ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ ಪ್ರತಿ ಕಿಲೋ ಅಕ್ಕಿಗೆ ರಾಜ್ಯ ಸರ್ಕಾರ ಭರಿಸುವ ವೆಚ್ಚ ಕೇವಲ ರೂ 3 ಮಾತ್ರ. ಉಳಿದಂತೆ ಕೇಂದ್ರ ಸರ್ಕಾರ ಪ್ರತಿ ಕಿಲೋ ಅಕ್ಕಿಗೆ ರೂ 29.94 ವೆಚ್ಚ ಭರಿಸುತ್ತದಂತೆ. ಅಷ್ಟೆ ಅಲ್ಲ 'ಅನ್ನ ಭಾಗ್ಯ' ಯೋಜನೆ ಜಾರಿಗೆ ತಂದು ಕೋಟ್ಯಂತರ ಜನರ ಆಹಾರ ಭದ್ರತೆಗೆ ಕಾರಣವಾದ ನೈಜ ಶ್ರೇಯಸ್ಸು ನಮ್ಮ ಮೋದೀಜಿ ಸರ್ಕಾರಕ್ಕೇ ಸಲ್ಲಬೇಕೆನ್ನೋದು ಸಿ. ಟಿ ರವಿ ವಾದ.

ಇವೆಲ್ಲ ಎಂಥಾ ಹಸಿ ಹಸಿ ಸುಳ್ಳು ಎಂಬುವುದನ್ನ ಇಲ್ಲಿ ವಿವರಿಸಿದ್ದೇನೆ ಕೇಳಿ.

1. ಅನ್ನ ಭಾಗ್ಯ ಯೋಜನೆಗಾಗಿಯೇ ರಾಜ್ಯ ಸರ್ಕಾರ ಪ್ರತಿ ವರ್ಷವೂ ಪ್ರತ್ಯೇಕ ಹಣ ತೆಗೆದಿಡುತ್ತದೆ. ಕೇಂದ್ರ 30 ರೂ ಕೊಡುವುದಾದರೆ ಈ ಹಣ ತೆಗೆದಿಡಬೇಕಾದ ಅಗತ್ಯವೇನು?

2. ಕೇಂದ್ರ ನಿಜಕ್ಕೂ 1 ಕೆಜಿ ಅಕ್ಕಿಗೆ 30 ರೂ. ಕೊಡುವುದೇ ಹೌದಾದರೆ ಬೇರೆ ಯಾವುದೇ ರಾಜ್ಯದಲ್ಲಿ ಅದರಲ್ಲೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲೂ ಈ ಯೋಜನೆ ಜಾರಿಗೆ ತರಬಹುದಲ್ವಾ..? ಯಾಕೆ ಅಲ್ಲೆಲ್ಲೂ ಈ ಘನ ಯೋಜನೆ ಜಾರಿಗೆ ಬಂದಿಲ್ಲ?

3. ಅನ್ನಭಾಗ್ಯ ಯೋಜನೆ ಮೋದಿಯದ್ದೇ ಆಗಿದ್ದರೆ ಅದು ಜಾರಿಗೆ ಬಂದಾಗ *"ಉಚಿತ ಅಕ್ಕಿ ಕೊಟ್ಟರೆ ಜನರೆಲ್ಲ ಸೋಮಾರಿಗಳಾಗುತ್ತಾರೆ"* ಎಂದು ಬಿಜೆಪಿಯವರು ಸಿದ್ದು ಸರಕಾರವನ್ನು ಹಿಗ್ಗಾಮುಗ್ಗಾ ಲೇವಡಿ ಮಾಡಿದ್ದು ಯಾಕೆ? ಮೀಡಿಯಾ ಚರ್ಚೆಗಳಲ್ಲಿ ಸರಕಾರವನ್ನು ಬೇಕಾಬಿಟ್ಟಿ  ಹೀಯಾಳಿಸಿದ್ದು ಯಾಕೆ?

4. ಇನ್ನು, ಅತ್ಯಂತ ಮುಖ್ಯವಾದ ಪಾಯಿಂಟ್ ಇದು. ಮೈ ಡಿಯರ್ ಬಿಜೆಪಿಗಾಸ್..., ರಾಜ್ಯದಲ್ಲಿ ಅನ್ನಭಾಗ್ಯ ಜಾರಿಗೆ ಬಂದಿದ್ದು ಜುಲೈ 2013ರಿಂದ. ಅಂದರೆ ಆಗ ನಿಮ್ಮ ಮೋದಿ ಸರ್ಕಾರ ಇನ್ನೂ ಗುಜರಾತ್‌ನಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಅಂದರೆ, ಆಗ ಕೇಂದ್ರದಲ್ಲಿದ್ದದ್ದು ಮನಮೋಹನ್ ಸಿಂಗ್ ಸರ್ಕಾರ. ಒಂದು ವೇಳೆ ನೀವನ್ನುವಂತೆ ಕೇಂದ್ರವೇ ಅನ್ನ ಭಾಗ್ಯದ 1 ಕೆಜಿ ಅಕ್ಕಿಯ 30 ರೂಪಾಯಿಯನ್ನು ಭರಿಸುತ್ತದೆ ಎಂಬುದನ್ನ ಕೇವಲ ವಾದಕ್ಕಾಗಿ (ವಾದಕ್ಕಾಗಿ ಮಾತ್ರ) ಹೌದೆಂದು ಒಪ್ಪಿಕೊಂಡರೂ ಆಗಲೂ ಈ ಅನ್ನಭಾಗ್ಯ ಯೋಜನೆಯ ಶ್ರೇಯ 2013ರಲ್ಲಿದ್ದ ಮನಮೋಹನಸಿಂಗ್ ಸರ್ಕಾರಕ್ಕೆ ಸೇರುತ್ತದೆಯೇ ವಿನಃ ಇಂದಿನ ಮೋದಿ ಸರ್ಕಾರಕ್ಕೆ ಅಲ್ಲವೇ ಅಲ್ಲ ತಾನೇ...?

ಓಯ್.. ಸಿ. ಟಿ. ರವಿಯಣ್ಣ ಮತ್ತು ಮೋದಿ ಭಕ್ತರೆ, ಸುಳ್ಳು ಹೇಳಿ. ಆದರೆ ಸ್ವಲ್ಪ ಮುಖ ಉಳಿಸಿಕೊಳ್ಳೋ ತರದ ಸುಳ್ಳನ್ನಾದರೂ ಹೇಳಿ. ಹೇಳಿ ಕೇಳಿ ಅನ್ನ ಭಾಗ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯೋಜನೆ. ಇದರ ಶ್ರೇಯ ಏನಿದ್ದರೂ ಈಗಿನ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಬೇಕು. ಕೇಂದ್ರ ಮುಂದಾದರೂ ಮನಸ್ಸು ಮಾಡಿ ಇದಕ್ಕೆ ಹೆಚ್ಚಿನ ಅನುದಾನ ಸಹಾಯಗಳನ್ನು ನಿಜಕ್ಕೂ ಒದಗಿಸಿದಲ್ಲಿ ಈ ಯೋಜನೆ ಇನ್ನಷ್ಟು ವಿಸ್ತಾರಗೊಳ್ಳಬಹುದು. ಜನರೂ ನಿಮ್ಮನ್ನು ನಿಜಕ್ಕೂ  ಹರಸಿಯಾರು. ಸದ್ಯಕ್ಕೆ ಟ್ವೀಟರ್..ಫ್ಲೆಕ್ಸ್ ಫೋಸ್ಟರ್, ಭಾಷಣ ಇತ್ಯಾದಿಗಳಲ್ಲಿ ಈ ಬಗ್ಗೆ ಬುರುಡೆ ಬಿಡುವುದನ್ನ ದಯವಿಟ್ಟು ನಿಲ್ಲಿಸಿ.

Share ಮಾಡಿ.
ಬಿಜೆಪಿಯ ಸುಳ್ಳನ್ನು EXPOSE ಮಾಡಿ #AnnaBhagya #Siddaramiah

ವರದಿ -ಶಶಿಧರ ಹೆಮ್ಮಾಡಿ

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ