ಮನೆ ಇಲ್ಲದೆ ಕಂಗಾಲಾಗಿದ್ದ ಹಿಂದೂ ಕುಟುಂಬಕ್ಕೆ SDPI ಪಕ್ಷ ಆಸರೆ !
ಮನೆ ಇಲ್ಲದೆ ಕಂಗಾಲಾಗಿದ್ದ ಹಿಂದೂ ಕುಟುಂಬಕ್ಕೆ SDPI ಪಕ್ಷ ಆಸರೆ !
ಮಂಜೇಶ್ವರ,ಮಾ.28: ಮನೆ ಇಲ್ಲದೆ ಮುರುಕು ಗುಡಿಸಲಿನಲ್ಲಿದ್ದ ಪೈವಳಿಕೆ ಸಮೀಪದ ಬಾಯಿ ಕಟ್ಟೆ ನಿವಾಸಿ ಶ್ಯಾಮಲ ಹಾಗೂ ಮಕ್ಕಳ ಕಷ್ಟವನ್ನು ಅರಿತ SDPI ಮಂಡಳ ಸಮಿತಿ ಕುಟುಂಬಕ್ಕೆ ಆಸರೆಯಾಗಿದೆ.
ಹಲವಾರು ವರ್ಷಗಳಿಂದ ತಿನ್ನಲೂ ಕೂಡ ಸಿಗದೆ ಮಳೆ ನೀರಿನಿಂದ ಒದ್ದೆಯಾಗಿ ಶ್ಯಾಮಲ ಹಾಗೂ ಮಕ್ಕಳು ಜೀವಿಸಿತ್ತಿದ್ದರು.ಮನೆ ಎಂಬುದು ಕೇವಲ ಇವರಿಗೆ ಕನಸಾಗಿ ಉಳಿದಿತ್ತು. ಈ ಸಂಧರ್ಭದಲ್ಲಿ ಮಾಹಿತಿ ಅರಿತ SDPI ಮಂಜೇಶ್ವರ ಮಂಡಳ ಸಮಿತಿಯ ಕಾರ್ಯಕರ್ತರು ಶ್ಯಾಮಲ ಕುಟುಂಬವನ್ನು ಭೇಟಿಯಾಗಿ , ಅಲ್ಪ ಕಾಲಾವಧಿಯಲ್ಲಿ ಸುಮಾರು 2.5 ಲಕ್ಷ ಸಂಗ್ರಹಿಸಿ ಮೂರು ಕೊಠಡಿಯ ಮನೆಯನ್ನು ನಿರ್ಮಿಸಿಕೊಟ್ಟರು.
ಇದರ ಕೀಳಿ ಹಸ್ತಾಂತರ SDPI ಜಿಲ್ಲಾದ್ಯಕ್ಷ ಎನ್ ಯು ಅಬ್ದುಲ್ ಸಲಾಂ ನಿರ್ವಹಿಸಿದರು. ಈ ಸಂದರ್ಭದಲ್ಲಿ ನೇತಾರರರು ಹಾಗೂ ಹಲವರು ಉಪಸ್ಥಿತರಿದ್ದರು.ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಮನೆ ಒಕ್ಕಲೂ ಮಾಡಲಾಯಿತು.ಮಳೆ ನೀರಿನಲ್ಲಿ ಒದ್ದೆಯಾಗಿ ಜೀವಿಸುತ್ತಿದ್ದ ಶ್ಯಾಮಲ ಕುಟುಂಬ ಈಗ ಭದ್ರತೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಕೀಳಿ ಹಸ್ತಾಂತರಿಸುವಾಗಿ ಶ್ಯಾಮಲ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಹಾಗೂ ಸಾಮಗ್ರಿಗಳನ್ನು ನೀಡಲಾಯಿತು. SDPI ಪಕ್ಷದ ಕಾರ್ಯ ಸಾರ್ವಜನಿಕ ವಲಯದಲ್ಲಿ ಬಹಳ ಪ್ರಶಂಸೆಗೆ ಮಾತ್ರವಾಗಿದೆ ಮತ್ತು ಸೌಅರ್ತದೆಗೆ ಸಾಕ್ಷಿಯಾಗಿದೆ.
Comments
Post a Comment