ಗನ್ ಹಿಡಿದುಕೊಂಡು ರಾಜಕಾರಣಿಗಳನ್ನು ಬೆದರಿಸುತ್ತಿದ್ದ ಬಿಜೆಪಿ ಗೂಂಡಾ ಬಂಧನ !

ಮೈಸೂರು: ಬಿಜೆಪಿ ಕಾರ್ಯಕರ್ತನೋರ್ವ ಅನಧಿಕೃತ ಪಿಸ್ತೂಲ್ ಖರೀದಿಸಿ ರಾಜಕಾರಣಿಗಳ ಬೆದರಿಸಲು ಸ್ಕೆಚ್ ರೆಡಿ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಧನರಾಜ್ ಭೊಲಾ ಬಂಧಿತ ಬಿಜೆಪಿ ಕಾರ್ಯಕರ್ತ. ಬಂಧಿತನ ವಿಚಾರಣೆ ನಡೆಸಿದಾಗ ಈ ಪಿಸ್ತೂಲ್ ವ್ಯವಹಾರದ ಕಿಂಗ್ ಪಿನ್ ಮೈಸೂರು ಜೈಲಿನಲ್ಲಿರುವ ಖೈದಿ ಎಂಬುದು ಗೊತ್ತಾಗಿದೆ. ಮೈಸೂರಿನ ಜೈಲಿನಲ್ಲಿರುವ ಅಫ್ಸರ್ ಖಾನ್, ಶಾಹಿನ್ ಮತ್ತು ಸಾಧಿಕ್ ಪಾಷಾ ಎಂಬವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪಿಸ್ತೂಲಿಗಾಗಿ ಜೈಲಿಗೆ ಎಂಟ್ರಿ ಹಾಕುತ್ತಿದ್ದ ವ್ಯಕ್ತಿಗಳು ಹಣ ಪಾವತಿ ಮಾಡಿದ್ರೆ, ಅಫ್ಸರ್ ಖಾನ್ ಪಿಸ್ತೂಲು ಮಾರಾಟ ಮಾಡುವ ವ್ಯಕ್ತಿಯ ಮೊಬೈಲ್ ನಂಬರ್ ನೀಡುತ್ತಿದ್ದ. ಆ ಹಣವನ್ನು ಪಡೆಯಲು ಮತ್ತೊಬ್ಬ ವ್ಯಕ್ತಿ ಎಂಟ್ರಿ ಹಾಕಿಸಿ ಅವರಿಂದ ನಗದನ್ನು ಸಂಗ್ರಹಿಸುತ್ತಿದ್ದನು. ಜೈಲಿನಿಂದಲೇ ವ್ಯವಹಾರ ಕುದುರಿಸುತ್ತಿದ್ದ ಅಫ್ಸರ್ ಪಾಷಾ ಮಡಿಕೇರಿ ಹಾಗೂ ಚಾಮರಾಜ ನಗರದಲ್ಲಿನ ವ್ಯಕ್ತಿಗಳಿಗೆ 60 ರಿಂದ 70 ಸಾವಿರಕ್ಕೆ ಪಿಸ್ತೂಲ್ ಮಾರಾಟ ಮಾಡಿಸಿದ್ದಾನೆ ಎಂಬ ಮಾಹಿತಿಗಳು ತಿಳಿದು ಬಂದಿವೆ. ಹೀಗೆ ಅಕ್ರಮವಾಗಿ ಖರೀದಿಸಿದ ಪಿಸ್ತೂಲ್‍ನಿಂದ ಧನರಾಜ್ ತಂಡವೊಂದನ್ನು ಕಟ್ಟಿಕೊಂಡು ಶ್ರೀಮಂತರು ಮತ್ತು ರಾಜಕಾರಣಿಗಳನ್ನು ಬೆದರಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದನು.
ಖಚಿತ ಮಾಹಿತಿ ಆಧರಿಸಿ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ದಾಳಿ ನಡೆಸಿ ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಿಂಗ್ ಪಿನ್ ಅಫ್ಸರ್ ಖಾನ್ ಪಾತ್ರ ಬೆಳಕಿಗೆ ಬಂದಿದೆ. ಬಂಧಿತರಿಂದ ಒಂದು ಪಿಸ್ತೂಲು ಹಾಗೂ 12 ಗುಂಡುಗಳು ವಶಪಡಿಸಿಕೊಳ್ಳಾಗಿದೆ. ಚುನಾವಣೆ ವೇಳೆ ರಾಜಕಾರಿಣಿಗಳನ್ನೂ ಬೆದರಿಸಲು ಈ ತಂಡ ಸ್ಕೆಚ್ ಹಾಕಿತ್ತು ಅನ್ನೋ ಮಾಹಿತಿ ಪೊಲೀಸರಿಗೆ ಆರೋಪಿಗಳು ತಿಳಿಸಿದ್ದಾರೆ. ಧನರಾಜ್ ಭೋಲಾ ಒಬ್ಬ ರೌಡಿ ಶೀಟರ್ ಕೂಡ ಆಗಿದ್ದಾನೆ.

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ