ಸಿದ್ದರಾಮಯ್ಯ ಓರ್ವ " ಭಯೋತ್ಪಾದಕ "! ವಿವಾದಕ್ಕೆ ಕಾರಣವಾದ ನಳಿನ್ ಭಾಷಣ ...?
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಮಂಗಳೂರು : ಮಾ 05 , ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ " ಜನ ಸುರಕ್ಷಾ ಯಾತ್ರೆ " ಎಂಬ ಕಪಟ ಯಾತ್ರೆಯಲ್ಲಿ ಮಾತನಾಡಿದ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ , ರಾಜ್ಯದ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈ ದೇಶದ " ಭಯೋತ್ಪಾದಕ " ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿ ವಿವಾದವನ್ನು ಮೈಮೇಲೆ ಎಳೆಕೊಂಡಿದ್ದಾನೆ . ಈತನ ವಿವಾದಿತ ಹೇಳಿಕೆ ಇದೇ ಮೊದಲಲ್ಲ ! ಬದಲಾಗಿ ಇದಕ್ಕೂ ಮುಂಚೆ ಸಾರ್ವಜನಿಕ ಭಾಷಣದಲ್ಲಿ " ಮುಸ್ಲಿಮರ ಯಾರೊಬ್ಬರ ವೋಟು ನಮ್ಮ ಬಿಜೆಪಿಗೆ ಬೇಡ " ಎಂದು ಹೇಳಿದ್ದು ವಿವಾದವಾಗಿದ್ದು , ನಂತರ ತಣ್ಣಗಾಗಿತ್ತು ! ತದನಂತರ ಮಂಗಳೂರಿಗೆ ಬೆಂಕಿ ಕೊಡುವ ಮಾತನ್ನು ಆಡಿದ್ದ ಈತ , ಸಾರ್ವಜನಿಕರು ಈತನನ್ನು ಸಂಸದನಾಗಲು ಅನರ್ಹನೆಂದೇ ಮಾತನಾಡಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೇ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಬಿಜೆಪಿಯ ಮಂಗಳೂರು ಚಲೋ ಸಂಧರ್ಭದಲ್ಲಿ ದಿಟ್ಟ ಪೋಲೀಸ್ ಅಧಿಕಾರಿಯ ವಿರುದ್ಧ ಎಗರಾಡಿದ್ದು ವೈರಲ್ ಆಗಿತ್ತು . ಹೀಗೆ ಒಟ್ಟಾರೆ ಈತನು ಸಂಸದನಾಗಿ ಏನೂ ಕೆಲಸ ಮಾಡದಿದ್ದರೂ ವಿವಾದಾತ್ಮಕ ಭಾಷಣಗಳಿಂದಲೇ ತನ್ನ ಹೆಸರನ್ನು ಮಾಧ್ಯಮಗಳಲ್ಲಿ ಉಳಿಸಿಕೊಂಡಿದ್ದಾನೆ , ಅದರ ಮುಂದುವರಿದ ಭಾಗವೇ ಸನ್ಮಾನ್ಯ ಮುಖ್ಯಮಂತ್ರಿ ಸಿಧ್ದರಾಮಯ್ಯನವರನ್ನು ದೇಶದ " ಭಯೋತ್ಪಾದಕ " ಎಂದು ಕರೆಯುವ ಮೂಲಕ ಬೇರೊಂದು ವಿವಾದಕ್ಕೆ ಚಾಲನೆ ಕೊಟ್ಟದ್ದು ! ಅದೇನೇ ಇರಲಿ ಕಳಂಕ ರಹಿತ ಸಿದ್ದರಾಮಯ್ಯನವರನ್ನು ಯಾವುದರಿಂದಲೂ ಎದುರಿಸಲಾಗದೇ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಅವರ ಗೌರವಕ್ಕೆ ಮಸಿ ಬಳಿಯುವ ಮುನ್ನ , ನಿನ್ನದೇ ಪಕ್ಷದ ಮುಖಂಡ , ಈಗ ಪ್ರಧಾನ ಮಂತ್ರಿ ಎಂಬ ಮಹತ್ತರ ಹುದ್ದೆಯನ್ನು ಅನುಭವಿಸುತ್ತಿರುವ ಮೋದಿ , 2002 ರಲ್ಲಿ ಸ್ವತಃ ಗುಜರಾತ್ ನಲ್ಲಿ ನಡೆಸಿದ 3000 ಕ್ಕಿಂತಲೂ ಹೆಚ್ಚು ಮುಸ್ಲಿಮರ ಮಾರಣ ಹೋಮ ಮಾಡಿದ ಬಗ್ಗೆ ಏನು ಹೇಳಬೇಕು ? ಏನೂ ಮಾಡದ ಸಿಧ್ರಾಮಯ್ಯನವರನ್ನು ಭಯೋತ್ಪಾದಕ ಎಂದು ಕರೆಯುವುದಾದರೆ , 3000 ಕ್ಕಿಂತಲೂ ಅಧಿಕ ಮುಸ್ಲಿಮರ ಮಾರಣ ಹೋಮ ನಡೆಸಲು ಅನುವು ಮಾಡಿಕೊಟ್ಟ ಮೋದಿಯನ್ನು ಏನೆಂದು ಕರೆಯಬೇಕೋ ? ಎಂದು ಜನರಾಡಿಕೊಳ್ಳುತ್ತಿದ್ದಾರೆ ......ಇದಕ್ಕೆ ಕಾಲವೇ ಉತ್ತರಿಸಲಿದೆ .
Comments
Post a Comment