ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಡಾತರದಲ್ಲಿದೆ ! SDPI ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ...
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಡಾತರದಲ್ಲಿದೆ ! SDPI ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ...
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಮೈಸೂರು ಮಾ14: ನಗರದ ಶಿವಾಜಿ ರಸ್ತೆಯಲ್ಲಿರುವ ಉತ್ಸವ್ ಫಂಕ್ಷನ್ ಹಾಲ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು-ನೀವು’ ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜ್ಞಾನ ಪ್ರಕಾಶ ಸ್ವಾಮೀಜಿ, ಅಭಿಪ್ರಾಯಗಳನ್ನು ಮಂಡಿಸಲು ಪೂರಕವಾದ ವಾತವರಣವಿಲ್ಲದೆ ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡುತ್ತಾ, ಸಂವಿಧಾನವನ್ನು ಬದಲಾಯಿಸುವಂತಹ ಯೋಚನೆ ಮತ್ತು ಯೋಜನೆ ಈಗಾಗಲೇ ಆರ್.ಎಸ್.ಎಸ್ ನವರು ಮಾಡಿಕೊಂಡಿದ್ದಾರೆ. ಈ ದೇಶದ ದಲಿತರು, ಅಲ್ಪಸಂಖ್ಯಾತರು ಒಳಗೊಂಡಂತೆ ಬಹುಸಂಖ್ಯಾತರು ಎಚ್ಚರವಹಿಸಲಿಲ್ಲ ಎಂದರೆ ಮುಂದೆ ಈ ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಈ ಗಂಡಾಂತರ ತಪ್ಪಿಸಲು ನಮ್ಮ ಬಳಿ ಇರುವ ಏಕೈಕ ಅಸ್ತ್ರವೇ ಮತದಾನ. ಜನರು ಮತದಾನದ ಮಹತ್ವ ತಿಳಿದುಕೊಳ್ಳುಬೇಕು. ಯಾರು ಮತದಾನ ಮಾರು ಕೊಳ್ಳುತ್ತಾರೆ ಅವರೇ ನಿಜವಾದ ರಾಷ್ಟ್ರ ದ್ರೋಹಿಗಳು. ಯಾವ ಕಾರಣಕ್ಕೂ ಮತವನ್ನು ಮಾರಿಕೊಳ್ಳದೆ, ಸಂವಿಧಾನದ ಬಗ್ಗೆ ನೈಜ ಕಾಳಜಿ ಇರುವಂತಹ ನಾಯಕರನ್ನು ಚುನಾಯಿಸಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಬಹುಸಂಖ್ಯಾತರು ಒಗ್ಗಟ್ಟಾಗುವ ಕಾಲ ಕೂಡಿ ಬಂದಿದೆ ಎಂದು ಸ್ವಾಮೀಜಿ ತಿಳಿಸಿದರು.
ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಮಜೀದ್ ರವರು ಮಾತನಾಡುತ್ತಾ, ಸಂವಿಧಾನದ ಪೀಠಿಕೆಯ ಆಶಯದಂತೆ ಸೋಶಿಯಲ್ ಡೆಮಾಕ್ರಸಿ ವ್ಯವಸ್ಥೆಗೆ ಹೆಚ್ಚು ಮಹತ್ವ ನೀಡುರುವಂತಹ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ. ಬಾಬಾ ಸಾಹೇಬ್ ರವರ ಕನಸನ್ನು ನನಸು ಮಾಡಲು ನಿಸ್ವಾರ್ಥ ಹೋರಾಟ ಮಾಡುತ್ತಿರುವ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಅಂಬೇಡ್ಕರ್ ಅನುಯಾಯಿ ಎಂದು ಹೇಳಲು ನನಗೆ ಈ ಸಂದರ್ಭದಲ್ಲಿಬಹಳ ಹೆಮ್ಮೆ ಅನಿಸುತ್ತಿದೆ. ಕಳೆದ ಎಪ್ಪತ್ತು ವರ್ಷದ ಇತಿಹಾಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಜಾತ್ಯತೀತ ಎಂಬ ಪದವನ್ನು ದುರ್ಬಳಕೆ ಮಾಡಿಕೊಂಡಿರುವ ಎಲ್ಲಾ ಪಕ್ಷಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೋಸ ಮಾಡಿರುವುದು ಬಹಳ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಜನ ಪ್ರತಿನಿಧಿಗಳ ಪಾತ್ರದ ಕುರಿತು ಅವಲೋಕಿಸಿದರೆ ಅವರ ಪಾತ್ರ ಶೂನ್ಯ ಎಂದು ಹೇಳಿದರು ತಪ್ಪಗಲಾರದು ಎಂದು ಮಜೀದ್ ರವರು ಹೇಳಿದರು. ಜನಪರ ಕಾಳಜಿ ಇರುವಂತಹ ಹೋರಾಟಗಾರರನ್ನು ಗುರುತಿಸಿ, ಅಂತವರಿಗೆ ಮತದಾನದ ನೀಡುವ ಮೂಲಕ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇವನೂರು ಪುಟ್ಟನಂಜಯ್ಯ ರವರು ಸಂವಿಧಾನ ಉಳಿದರೆ, ನಾವು ಉಳಿಯುತ್ತೆವೆ, ಸಂವಿಧಾನ ವಿಲ್ಲದೆ ಈ ದೇಶದ ವ್ಯವಸ್ಥೆ ಹೇಗಿರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಯಾವುದೇ ಬೆಲೆಯನ್ನು ತೆತ್ತಾದರು ಸರಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಕೈ ಜೋಡಿಸಲಿದ್ದೇವೆ ಎಂಬ ಮಹತ್ಕಾಂಕ್ಷೆದೊಂದಿಗೆ ಶ್ವೇತ, ಮೀನಾ, ಭವ್ಯ, ರಣತಿ, ಅಡ್ವಕೇಟ್‍ಗಳಾದ ಚಂದ್ರಶೇಕರ್, ಜಯವರ್ದನ್, ಹಾಗೂ ಸಿದ್ದರಾಮನ ಹುಂಡಿ ವೆಂಕಟೇಶ್ ರವರು ಎಸ್.ಡಿ.ಪಿ.ಐ ಪಕ್ಷಕ್ಕೆ ಈ ಸಂದರ್ಭದಲ್ಲಿ ಸೇರ್ಪಡೆಗೊಂಡರು.
ಈ ಸಮಾಲೋಚನಾ ಸಭೆಯಲ್ಲಿ ಎಸ್.ಡಿ.ಪಿ.ಐ ಮೈಸೂರು ನಗರ ಉಪಾಧ್ಯಕ್ಷ ಅಲೂರು ಮಲ್ಲಣ್ಣ, ಪತ್ರಕರ್ತರು, ಲೇಖಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಕೃಷ್ಣಮೂರ್ತಿ ಚಮರಂ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನ ಹಳ್ಳಿ ಶಿವಣ್ಣ, ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸಿದ್ದರಾಜು, ಅಖಿಲ ಭಾರತ ಅಂಬೇಡ್ಕರ್ ಕ್ರಾಂತಿ ದಳ ಅಧ್ಯಕ್ಷರಾದ ಡಾ.ಆರ್ ರಾಜು, ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಪ್ರಸನ್ನ ಚಕ್ರವರ್ತಿ, ದಲಿತ ಯುವ ಹೋರಾಟಗಾರರಾದ ಪ್ರವೀಣ್ ಮತ್ತು ರಿತೇಶ್ ಹಾಗೂ ಪಾಲಿಕೆ ಸದಸ್ಯರಾದ ಎಸ್.ಸ್ವಾಮಿ ಮತ್ತು ಚಾಮರಾಜನಗರ ನಗರ ಸಭಾ ಸದಸ್ಯರಾದ ಮಹೇಶ್.ಎಮ್, ಉಪಸ್ಥಿತರಿದ್ದರು.
ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಡಿ.ಪಿ.ಐ ನಗರ ಸಮಿತಿ ಕೋಶಾಧಿಕಾರಿ ಅಮ್ಜದ್ ರವರು ನೇರವೆರಿಸಿದರು.
ಸ್ವಾಗತ ಭಾಷಣವನ್ನು ಕುಮಾರ್ ಸ್ವಾಮಿ ರವರು ಮಾಡಿ, ಶ್ರೀಕಂಠಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.
Comments
Post a Comment