ಬಜರಂಗದಳದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಲ್ಲಿಸಲು ಪೋಲೀಸರಿಗೆ ಅಸಾಧ್ಯವಾದರೆ ಹೇಳಲಿ ನಾವು ನಿಲ್ಲಿಸುತ್ತೇವೆ. - ಖಡಕ್ ಎಚ್ಚರಿಕೆ ನೀಡಿದ ರಿಯಾಝ್ ಫರಂಗಿಪೇಟೆ !
ಬಜರಂಗದಳದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಲ್ಲಿಸಲು ಪೋಲೀಸರಿಗೆ ಅಸಾಧ್ಯವಾದರೆ ಹೇಳಲಿ ನಾವು ನಿಲ್ಲಿಸುತ್ತೇವೆ. - ರಿಯಾಝ್ ಫರಂಗಿಪೇಟೆ ಎಚ್ಚರಿಕೆ!
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಮಂಗಳೂರು : ಮಾ 24, ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ ವಿಹಾರಕ್ಕೆಂದು ತೆರಳಿದ್ದ ಬಂಟ್ವಾಳದ ವಿದ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವರ ಮೊಬೈಲ್ ಗಳನ್ನು ದೋಚಿ ಪರಾರಿಯಾಗಿರುವ ಘಟನೆಯು ವರದಿಯಾಗಿದ್ದು ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ನಗರದ ಹೈಲಾಂಡ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಇಂತಹದ್ದೇ ಘಟನೆಯು ಎರಡು ದಿನಗಳ ಹಿಂದೆ ಬಂಟ್ವಾಳದಲ್ಲಿ ಕೂಡ ನಡೆದಿರುತ್ತದೆ. ಅಲ್ಲಿ ಪರಿಚಯಸ್ಥ ವಿದ್ಯಾರ್ಥಿಗಳೊಂದಿಗೆ ಸೆಲ್ಫೀ ತೆಗೆದ ಕಾರಣಕ್ಕೆ ಆಟೋ ಚಾಲಕನಿಗೆ ಥಳಿಸಲಾಗಿರುತ್ತದೆ.
ಕೆಲವು ಸಮಯಗಳಿಂದ ಬಾಲ ಮುದುಡಿಕೊಂಡಿದ್ದ ಬಜರಂಗದಳದ ಕಾರ್ಯಕರ್ತರು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಂದ ಸುಪಾರಿಯನ್ನು ಪಡೆದು ಭಯದ ವಾತಾವರಣವನ್ನು ಹಬ್ಬಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವೇ ನೇರ ಕಾರಣವಾಗಿರುತ್ತದೆ. ಈ ಘಟನೆಯಲ್ಲಿ ಆರೋಪಿತರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣವನ್ನು ದಾಖಲಿಸಿ ಗೂಂಡಾ ಕಾಯ್ದೆಯ ಮೂಲಕ ಗಡಿಪಾರು ಮಾಡುವ ರೀತಿಯಲ್ಲಿ ಪೋಲೀಸರು ಕಾರ್ಯ ಪೃವರ್ತರಾಗಬೇಕೆಂದು ಎಸ್ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆದ ರಿಯಾಝ್ ಫರಂಗಿಪೇಟೆಯವರು ಆಗ್ರಹಿಸಿರುತ್ತಾರೆ. ಇದು ಪೋಲೀಸರಿಗೆ ಸಾಧ್ಯವಾಗದಿದ್ದರೆ ಅವರು ನಮ್ಮೊಂದಿಗೆ ಹೇಳಲಿ ಬಜರಂಗದಳದವರ ಪುಂಡಾಟಿಕೆಯನ್ನು ನಾವು ನಿಲ್ಲಿಸುತ್ತೇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುತ್ತಾರೆ.

Comments
Post a Comment