ದ ಕ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಎಸ್ ಡಿ ಪಿ ಐ; ಬಂಟ್ವಾಳ ಶೀಘ್ರ ಘೋಷಣೆ !

ದ ಕ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು  ಅಂತಿಮಗೊಳಿಸಿದ ಎಸ್ ಡಿ ಪಿ ಐ; ಬಂಟ್ವಾಳ ಶೀಘ್ರ ಘೋಷಣೆ !

ಬ್ರೇಕಿಂಗ್ ನ್ಯೂಸ್ ಮಂಗಳೂರು (ಮಾ 6) :  ತನ್ನ ಸಾಮಾಜಿಕ ಚಳವಳಿಯ ಮೂಲಕ ರಾಜ್ಯದಲ್ಲಿ ಒಂದು ವಿಭಿನ್ನ ಸಂಚಲನ ಸೃಷ್ಟಿಸಿರುವ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಂಬರುವ  ಕರ್ನಾಟಕ ವಿಧಾನಸಭಾ ಚುನಾವಣೆಗೆ ಸುಮಾರು 50ರಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತಂತೆ ಘೋಷಿಸಿದ್ದು, ಇದೀಗಾಗಲೇ ಎರಡು ಹಂತಗಳಲ್ಲಿ ಒಟ್ಟು 25ರಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಇದೀಗ ಮೂರನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಅದರಲ್ಲೂ ಜನರ ಮಧ್ಯೆ ಬಹಳಷ್ಟು ಕುತೂಹಲ ಕೆರಳಿಸಿರುವ ದ.ಕ.ಜಿಲ್ಲೆಯಲ್ಲಿ
ಆರು ಕ್ಷೇತ್ರಗಳಲ್ಲಿ ಸ್ಪರ್ದಿಸುವುದು ಬಹುತೇಕ ಖಚಿತಗೊಂಡಿದೆ ಎಂದು ಪಕ್ಷದ ನಂಬಲರ್ಹ ಜಿಲ್ಲಾ ನಾಯಕರೊಬ್ಬರು 'ಕರಾವಳಿ ಟೈಮ್ಸ್' ಗೆ ಮಾಹಿತಿ ನೀಡಿದ್ದಾರೆ.

ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು,ಅದರಂತೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜಲೀಲ್ ಕೃಷ್ಣಾಪುರ,ಮುಲ್ಕಿ-ಮೂಡಬಿದ್ರೆ ಕ್ಷೇತ್ರಕ್ಕೆ ಎ.ಕೆ.ಅಶ್ರಫ್, ಬೆಳ್ತಂಗಡಿ ಕ್ಷೇತ್ರಕ್ಕೆ ಆಲ್ಫಾನ್ಸೋ ಫ್ರಾಂಕೋ ,ಪುತ್ತೂರು ಕ್ಷೇತ್ರಕ್ಕೆ ಸಿದ್ದೀಕ್ ಪುತ್ತೂರು ಮತ್ತು ಸುಳ್ಯ ಕ್ಷೇತ್ರಕ್ಕೆ
 ಆನಂದ ಮಿತ್ತಬೈಲ್ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇನ್ನುಳಿದಂತೆ ಬಂಟ್ವಾಳ ಕ್ಷೇತ್ರಕ್ಕೆ ಹನೀಫ್ ಖಾನ್,ರಿಯಾಜ್ ಫರಂಗಿಪೇಟೆ,ಮತ್ತು ಇಕ್ಬಾಲ್ ಐ.ಎಂ.ಆರ್.ಸೇರಿದಂತೆ  ಮೂವರ ಹೆಸರು ಚರ್ಚೆಯಲ್ಲಿದ್ದು, ಅತೀ ಶೀಘ್ರದಲ್ಲಿ ಅಂತಿಮಗೊಳಿಸಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಲಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Comments

Popular posts from this blog

ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!

ಪುತ್ತೂರು: ಮೂವರು ಭಜರಂಗದಳದ ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ!

ಕ್ಯಾಂಪಸ್ ಫ್ರಂಟ್‍ನಿಂದ ವಿದ್ಯಾರ್ಥಿ ಹೋರಾಟ ಸಮಾವೇಶ!