ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ನಾವು ಅಧಿಕಾರಕ್ಕೆ ಬಂದ್ರೆ ಕೇವಲ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ : ಯಡಿಯೂರಪ್ಪ ಉವಾಚ !

ಬ್ರೇಕಿಂಗ್ ನ್ಯೂಸ್ ಮಂಗಳೂರು , ಮಾ 07, ಮುಂದಿನ ವಿಧಾನಸಭಾ ಚುನಾವಣೆಗೆ , ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಇನ್ನಿತರ ಪಕ್ಷಗಳು ಮತದಾರರನ್ನು ಇನ್ನಿತರ ಆಮಿಷಗಳನ್ನು ಒಡ್ಡಿ ಚುನಾವಣೆಗೆ ತಯಾರಾಗುತ್ತಿದ್ದಂತೆಯೇ , ಬಿಜೆಪಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ , ತನ್ನ ನಕಲಿ ಹಿಂದುತ್ವ ಸಿದ್ದಾಂತವನ್ನು ಚುನಾವಣೆಗೆ ಬಳಸಿಕೊಳ್ಳುವ ಮುಖಾಂತರ ತನ್ನ ಕಪಟ ರಾಜಕೀಯ ಶುರು ಮಾಡಿದೆ . ನಿನ್ನೆ ತಾನೆ ಬಿಜೆಪಿಯ ಜನಸುರಕ್ಷಾ  ಯಾತ್ರೆಯಲ್ಲಿ ಬಿಜೆಪಿಯ ಭ್ರಷ್ಟ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಭಾಷಣ ಮಾಡುತ್ತಾ " ನಾವು ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಮೇಲಿರುವ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದಾರೆ . ಚುನಾವಣೆಗೆ ಹೋಗಲು ಬೇರೆ ಯಾವ ಅಸ್ತ್ರವೂ ಕಾಣದಿದ್ದಾಗ ಹಿಂದೂಗಳ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ರಾಜ್ಯದ ಬಿಜೆಪಿ ನಾಯಕರು .
 ಈ ಯಡಿಯೂರಪ್ಪ ನಿಗೆ ಹೀಗೂ ಹೇಳಬಹುದಿತ್ತು !
ಭಾಷಣದಲ್ಲಿ ಕೇವಲ ಹಿಂದೂಗಳ ಕೇಸು ಮಾತ್ರ ಹಿಂಪಡೆಯುತ್ತೇವೆ ಅಂದದ್ದು , ಅದೊಂದು ಸಂವಿಧಾನದ ಕಗ್ಗೊಲೆಯಾಗಿದೆ , ಅದರ ಬದಲಾಗಿ "ಅಮಾಯಕರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಲಾಗುವುದು"  ಎಂಬ ಹೇಳಿಕೆ ಕೊಡಬಹುದಿತ್ತು ! ಆದರೆ ಬಿಜೆಪಿಗೆ ಸೌಹಾರ್ದ ಕರ್ನಾಟಕ ಬೇಕಾಗಿಲ್ಲ , ಅವರದ್ದು ಬೆಂಕಿ ಹಾಗೂ ಗಲಭೆ ರಾಜಕೀಯ , ಅವರು ಅಧಿಕಾರಕ್ಕೆ ಬರಲಿಕ್ಕಾಗಿ ಯಾವ ತರಹದ ಕೀಳು ಮಟ್ಟಕ್ಕೂ ಇಳಿಯಬಹುದು ಎನ್ನುವುದಕ್ಕೆ ಈ ಪರಿಯ ಹಿಂದೂ- ಮುಸ್ಲಿಂ ಪ್ರತ್ಯೇಕಿಸಬಹುದಾದ ಭಾಷಣವೇ ಸಾಕ್ಷಿ ! ಮೊದಲು ಬಿಜೆಪಿಯಲ್ಲಿ ಇರುವ ಕೆಲ ನಾಮದಾರಿ ಮುಸ್ಲಿಮರು ಸ್ವತಃ ಆತ್ಮಾವಲೋಕನ ಮಾಡುವುದು ಒಳಿತು , ಯಾಕೆಂದರೆ ಮೇಲಿನ ಯಡಿಯೂರಪ್ಪ ನ  ಭಾಷದಲ್ಲೇ ಹೇಳಿದಂತೆ " ಹಿಂದೂಗಳ ಮೇಲಿನ ಕೇಸು ಮಾತ್ರ ವಾಪಸ್ " ಅನ್ನೋ ಪದ ಹಿಂದೂಗಳಿಗೆ ಅನ್ವಯವಾಗುತ್ತೆ ವಿನಃ ಮುಸ್ಲಿಮರಿಗಲ್ಲ , ಸೋ ಇದರ ಮೂಲಕ ಯಡಿಯೂರಪ್ಪ ಮುಸ್ಲಿಮರ ಮತ ನಮಗೆ ಬೇಡ ಎಂದು ಬಹಿರಂಗವಾಗಿ ಹೇಳುತ್ತಾ ಇದ್ದಾರೆ,  ಇನ್ನಾದರೂ ಇವರ ಎಂಜಲು ಕಾಸಿಗೋಸ್ಕರ ಸಮುದಾಯವನ್ನು ಮಾರಿ ಬಿಡುವ ಸಮುದಾಯ ವಂಚಕರನ್ನು ನಾವು ದೂರಮಾಡಬೇಕಿದೆ !
ಮತ್ತೆ ಕಾಂಗ್ರೆಸ್ ನ ವಿಷಯ ! 

ಬಿಜೆಪಿ ಇಷ್ಟು ಮಟ್ಟದ ಕೀಳು ರಾಜಕೀಯ ಮಾಡಿದ್ರೂ , ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮ್ಮನಿದೆ ! ಕಾಂಗ್ರೆಸ್ ಇನ್ನೂ  ಎಚ್ಚೆತ್ತುಕೊಳ್ಳದೇ ಸುಮ್ಮನಿದ್ದಲ್ಲಿ , ಭಾರತದಲ್ಲಿ ಕಾಂಗ್ರೆಸ್ ನ ನಿರ್ನಾಮ ಸ್ವತಃ  ಕಾಂಗ್ರೆಸ್ಸೇ ಮಾಡಿದಂತಾಗುತ್ತದೆ. ಹಾಗೂ ಕಾಂಗ್ರೆಸ್ ಮೊದಲನೆಯದಾಗಿ ಸಣ್ಣ ಸಣ್ಣ ಜಾತ್ಯಾತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ರೆ ಯಾವ ಮತವೂ ಪೋಲಾಗುವುದಿಲ್ಲ , 90% ಜಾತ್ಯಾತೀತರ ಮತ ಒಂದೆಡೆ ಹೋದ್ರೆ , 10% ಕೋಮುವಾದಿಗಳ ಮತದಿಂದ ಬಿಜೆಪಿಗೆ 4-5 ಸೀಟು ಸಿಗಬಹುದು ಅಷ್ಟೇ, ಅದಕ್ಕಾಗಿ ಕಾಂಗ್ರೆಸ್ ಸ್ವಲ್ಪ ತನ್ನ ಅಹಂ ಅನ್ನು ಬದಿಗೊತ್ತಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು , ಅಷ್ಟೇ.... ಹಾಗೆಯೇ ಬಿಜೆಪಿಯ ಈ ಕೋಮುರಾಜಕಾರಣಕ್ಕೆ ಯಾವ ನೈಜ ಹಿಂದೂ ಮುಸ್ಲಿಮರು ಮರುಳಾಗಬಾರದು , ಮುಂದಿನ ಚುನಾವಣೆಯಲ್ಲಿ  ಬಿಜೆಪಿಯನ್ನು ಒದ್ದೋಡಿಸುವ ಮೂಲಕ ಬಿಜೆಪಿ ಮುಕ್ತ ಭಾರತಕ್ಕೆ  ಕರ್ನಾಟಕದಿಂದಲೇ ಮುನ್ನುಡಿ ಬರೆಯಬೇಕು. 

Comments

Popular posts from this blog

ಸಂಗಬೆಟ್ಟು: ನಾಲ್ಕೂವರೆ ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಚಲಾಕಿ ಕಳ್ಳರು..!

ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ