ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಮಸೇನೆಯ ಭಯೋತ್ಪಾದಕ!
ಗಾಂಧಿ ಒಬ್ಬ ಹರಾಮ್ ಕೋರ್ : ವಿವಾದಾತ್ಮಕ ಹೇಳಿಕೆ ನೀಡಿದ ಶ್ರೀರಾಮಸೇನೆ ಮುಖಂಡ ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ ಬೆಳಗಾವಿ : ಫೆ,12-ಭಗತ್ ಸಿಂಗ್ ಗಾಂಧಿ ಮೇಲಿಟ್ಟಿದ್ದು ಭಕ್ತಿ. ಆದರೆ ಗಾಂಧಿ ಮಾಡಿದ್ದು ಹರಾಮ್ ಕೋರ್ ಕೆಲಸ ಎಂದು ಗೋಕಾಕ್ ತಾಲೂಕು ಶ್ರೀರಾಮಸೇನೆ ಅಧ್ಯಕ್ಷ ರಾಜು ಜಾಧವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಆಯೋಜಿಸಿದ್ದ ಭಕ್ತಿ, ಶಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವನು, ಲವ್ ಜಿಹಾದ್ ಗೆ ಕೇವಲ ಯುವತಿಯರು ಬಲಿಯಾಗುತ್ತಿಲ್ಲ. ಬದಲಾಗಿ ಮದುವೆಯಾದ ಮಹಿಳೆಯರು ಬಲಿಯಾಗುತ್ತಿದ್ದಾರೆ. ಮಹಿಳೆಯರು ಅಶ್ಲೀಲವಾಗಿರುವ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಪ್ರತಿ ಕುಟುಂಬದ ಸದಸ್ಯರು ಈ ಬಗ್ಗೆ ಜಾಗೃತಿ ವಹಿಸಬೇಕು ಎಂದನು. ಭಕ್ತಿ, ಶಕ್ತಿ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮೂಲದ ಸಾಧ್ವಿ ಸರಸ್ವತಿ ಮಾತನಾಡಿದ್ದು, ಲವ್ ಜಿಹಾದ್ಗೆ ಹೆದರಿ ಹೆಣ್ಣು ಮಕ್ಕಳನ್ನು ಶಾಲೆ, ಕಾಲೇಜು ಬಿಡಿಸಬೇಡಿ. ಯುವತಿಯರ ಆತ್ಮ ರಕ್ಷಣೆಗಾಗಿ ಅವರಿಗೆ ತಲ್ವಾರ್ ಕೊಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ.
Comments
Post a Comment