ಇತರರಿಗೆ ಮಾದರಿಯಾದ ಫರಂಗಿಪೇಟೆ ಮದ್ರಸಾ ಅದ್ಯಾಪಕರು !
🚮ಫರಂಗಿಪೇಟೆ: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಅಭಿಯಾನ
Breaking news Mangalore
ಫರಂಗಿಪೇಟೆ, ಮಾ 27, : ಇಸ್ಲಾಂ ಸ್ವಚ್ಛತೆಗೆ ಬಹಳಷ್ಟು ಮಹತ್ವವನ್ನು ಕೊಟ್ಟಿದೆ. ಸ್ವಚ್ಛತೆಯು ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ ಎಂದು ಪ್ರವಾದಿ ಮುಹಮ್ಮದ್ (ಸ.ಅ) ಸಾರಿದ್ದಾರೆ. ಇದೇ ಸಂದೇಶವನ್ನು ಮದ್ರಸಗಳಲ್ಲಿ ಕಲಿಸಲಾಗುತ್ತಿದೆ. ಮದ್ರಸಗಳಲ್ಲಿ ತಾವು ಮಕ್ಕಳಿಗೆ ಕಲಿಸುವ ಸ್ವಚ್ಛತೆಯ ವಿಷಯವನ್ನು ಮದ್ರಸ ಅಧ್ಯಾಪಕರು ಕಾರ್ಯರೂಪದಲ್ಲಿ ಮಾಡಿತೋರಿಸಿದ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.
ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಇಂದು ಪೂರ್ವಾಹ್ನ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಜರುಗಿತು.
ರಾಷ್ಟ್ರೀಯ ಹೆದ್ದಾರಿ 75 ಸಾಗುವ ಫರಂಗಿಪೇಟೆ ಜಂಕ್ಷನ್‌ಗೆ ಸಮೀಪದಲ್ಲೇ ದಾರಿಹೋಕರು, ಬೈಕ್, ಕಾರುಗಳಲ್ಲಿ ಸಂಚರಿಸುವವರು ತಮ್ಮ ಮನೆಯ ತ್ಯಾಜ್ಯದ ಕಟ್ಟುಗಳನ್ನು ಮಾರ್ಗದ ಬದಿಯಲ್ಲೇ ಎಸೆಯುವುದು ಸಾಮಾನ್ಯವಾಗಿದೆ.
ಈ ಸ್ಥಳದಲ್ಲಿ ಪಂಚಾಯತ್ ವತಿಯಿಂದ ಕಸ ಎಸೆಯಬಾರದು ಎಂಬ ಸೂಚನಾ ಫಲಕವಿದ್ದರೂ ಕಸ ಎಸೆಯುವುದು ಮಾಮೂಲಾಗಿದೆ. ಬಹಳಷ್ಟು ಕಸದ ರಾಶಿಯಿಂದ ತುಂಬಿದ್ದ ಜಾಗದಲ್ಲಿ ಮದ್ರಸ ಅಧ್ಯಾಪಕರು ಯಾವುದೇ ಅಸಹ್ಯ ಪಡೆದೆ ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಮನೆಮನೆಗಳಿಂದ ಎಸೆದಿದ್ದ ತ್ಯಾಜ್ಯದ ತೊಟ್ಟೆಗಳನ್ನು ಹೆಕ್ಕಿ ಬುಟ್ಟಿಗೆ ತುಂಬಿಸಿ ಲಾರಿಗೆ ಲೋಡು ಮಾಡಿದರು. ದುರ್ನಾತ ಬೀರುತ್ತಿದ್ದ ಕಟ್ಟುಗಳನ್ನು ಹೆಕ್ಕುವಾಗಲು ಸಹ ಒಂದಿಷ್ಟು ಅಸಹ್ಯ ಪಡದೆ ತುಂಬಾ ಉತ್ಸುಕತೆಯಿಂದ ಭಾಗವಹಿಸುತ್ತಿರುವುದು ಕಂಡು ಬಂತು. ಪ್ರವಾದಿವರ್ಯರು ಏನು ಹೇಳಿದ್ದಾರೆ ಎಂದು ಭಾಷಣ ಮಾಡಲು ಮಾತ್ರ ನಾವು ಸೀಮಿತವಲ್ಲ. ನಾವು ಅವನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಲು ಸಿದ್ಧ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮದ್ರಸ ಅಧ್ಯಾಪಕರ ಪರಿಸರ ಕಾಳಜಿ ಮತ್ತು ಸೇವಾ ಮನೋಭಾವವನ್ನು ನಾವು ಪ್ರಶಂಸಿಸಲೇಬೇಕು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಂ-ಇಯ್ಯತುಲ್ ಮುಅಲ್ಲಿಮೀನ್, ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಅಬ್ದುಲ್ ರಶೀದ್ ಹನೀಫಿ,ಹಾಗೂ ಇತರರು ಹಾಜರಿದ್ದರು.

Comments
Post a Comment